CWG 2022: ಭಾರತಕ್ಕೆ ಇಂದು ಮತ್ತೆರೆಡು ಚಿನ್ನ, 1 ಕಂಚು; ನಿತು, ಅಮಿತ್ ಚಿನ್ನದ ಬೇಟೆ. ಮಹಿಳಾ ಹಾಕಿ ತಂಡಕ್ಕೆ ಕಂಚು

ಕಾಮನ್ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು ಬಾಕ್ಸಿಂಗ್ ನಲ್ಲಿ ಎರಡು ಚಿನ್ನದ ಪದಕ ಬಂದಿದೆ. ಬಾಕ್ಸರ್ ನಿತು ಘಂಘಾಸ್ ಮತ್ತು ಅಮಿತ್ ಪಂಘಾಲ್ ಚಿನ್ನದ ಪದಕ ಗೆದ್ದಿದ್ದರೆ 16 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. 
ಪದಕ ಗೆದ್ದ ವಿಜೇತರು
ಪದಕ ಗೆದ್ದ ವಿಜೇತರು
Updated on

ಕಾಮನ್ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು ಬಾಕ್ಸಿಂಗ್ ನಲ್ಲಿ ಎರಡು ಚಿನ್ನದ ಪದಕ ಬಂದಿದೆ. ಬಾಕ್ಸರ್ ನಿತು ಘಂಘಾಸ್ ಮತ್ತು ಅಮಿತ್ ಪಂಘಾಲ್ ಚಿನ್ನದ ಪದಕ ಗೆದ್ದಿದ್ದರೆ 16 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. 

48 ಕೆಜಿ ವಿಭಾಗದ ಮಹಿಳೆಯ ಬಾಕ್ಸಿಂಗ್ ನಲ್ಲಿ ನಿತು ಘಂಘಾಸ್ ಇಂಗ್ಲೆಂಡ್ ನ ಡೆಮಿ-ಜೇಡ್ ರೆಸ್ಟನ್ ರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಇನ್ನು 51 ಕೆಜಿ ವಿಭಾಗದ ಪುರುಷರ ಬಾಕ್ಸಿಂಗ್ ನಲ್ಲಿ ಅಮಿತ್ ಪಂಘಾಲ್ ಇಂಗ್ಲೆಂಡ್ ತಂಡದ ಕೀರನ್ ಮ್ಯಾಕ್ಡೊನಾಲ್ಡ್ ರನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು.

ಕಂಚಿನ ಪದಕಕ್ಕಾಗಿ ಭಾರತದ ಮಹಿಳಾ ಹಾಕಿ ತಂಡ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ವಿರುದ್ಧ ಹೋರಾಟ ನಡೆದಿತ್ತು. ಇನ್ನು ಉಭಯ ತಂಡಗಳು ತಲಾ 1 ಗೋಲುಗಳಿಂದ ಸಮಬಲ ಸಾಧಿಸಿದ್ದರಿಂದ ಪೆನಾಲ್ಟಿ ಶೂಟೌಟ್ ನೀಡಲಾಯಿತು. 

ಇದರಲ್ಲಿ ಭಾರತೀಯ ಮಹಿಳಾ ಹಾಕಿ ತಂಡ 2-1 ಅಂತರದ ಗೋಲುಗಳನ್ನು ಹೊಡೆಯುವ ಮೂಲಕ ಹಾಕಿ ಪದಕ ಗೆದ್ದರು. 

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 40 ಪದಕಗಳು ಬಂದಿವೆ. ಅದರಲ್ಲಿ 13 ಚಿನ್ನ. 11 ಬೆಳ್ಳಿ ಹಾಗೂ 16 ಕಂಚಿನ ಪದಕ ಸೇರಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com