FIFA VS AIFF: ಭಾರತ ಫುಟ್‌ಬಾಲ್ ಫೆಡರೇಶನ್ ಆಡಳಿತಾಧಿಕಾರಿಗಳ ಸಮಿತಿ ರದ್ದು, ಶೀಘ್ರ ಚುನಾವಣೆ- ಸುಪ್ರೀಂ ಕೋರ್ಟ್

ಮಹತ್ವದ ಬೆಳವಣಿಗೆಯಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಆಡಳಿತಾಧಿಕಾರಿಗಳ ಸಮಿತಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಶೀಘ್ರ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ ಮತ್ತು ಫುಟ್ಬಾಲ್
ಸುಪ್ರೀಂ ಕೋರ್ಟ್ ಮತ್ತು ಫುಟ್ಬಾಲ್

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಆಡಳಿತಾಧಿಕಾರಿಗಳ ಸಮಿತಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಶೀಘ್ರ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಸಮಿತಿ (ಫೀಫಾ) ನಿಷೇಧಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಎಐಎಫ್‌ಎಫ್‌ನ ವ್ಯವಹಾರಗಳನ್ನು ನಿರ್ವಹಿಸಲು, ಶೀಘ್ರದಲ್ಲೇ ಚುನಾವಣೆಗಳನ್ನು ನಿರ್ವಹಿಸಲು ಸಿಒಎ ಆದೇಶವನ್ನು ಭಾರತ ಫುಟ್‌ಬಾಲ್ ಫೆಡರೇಶನ್ ಆಡಳಿತಾಧಿಕಾರಿಗಳ ಸಮಿತಿ ರದ್ದುಗೊಳಿಸುವ ಮೂಲಕ ಸುಪ್ರೀಂ ಕೋರ್ಟ್ ಕೊನೆಗೊಳಿಸಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ವ್ಯವಹಾರಗಳನ್ನು ನಿರ್ವಹಿಸಲು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಕೊನೆಗೊಳಿಸಿದ್ದು, ಈ ಹಿಂದೆ ಆಗಸ್ಟ್ 28 ರಂದು ಎಐಎಫ್‌ಎಫ್‌ಗೆ ನಿಗದಿಯಾಗಿದ್ದ ಚುನಾವಣೆಯನ್ನು ಒಂದು ವಾರ ಮುಂದೂಡಿದೆ. ಬದಲಾದ ಚುನಾವಣಾ ಸಂಸ್ಥೆ ಮತ್ತು ನಾಮನಿರ್ದೇಶನಗಳ ಸಲ್ಲಿಕೆಗೆ ಹೊಸ ನಿಯಮಗಳನ್ನು ಅನುಸರಿಸಲು ಅವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ಪೀಠವು ಸಿಒಎಯನ್ನು ವಜಾಗೊಳಿಸಿದ್ದು, ದೈನಂದಿನ ನಿರ್ವಹಣೆಯನ್ನು ಎಐಎಫ್‌ಎಫ್‌ನ ಹಂಗಾಮಿ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯೇಕವಾಗಿ ನೋಡಿಕೊಳ್ಳುವಂತೆ ವಹಿಸಿದೆ. ನಂತರದ ಚುನಾವಣೆಗೆ ಎಐಎಫ್‌ಎಫ್‌ನ ಕಾರ್ಯಕಾರಿ ಮಂಡಳಿಯು 23 ಸದಸ್ಯರಾಗಿರಬೇಕು -- 17 ಸದಸ್ಯರನ್ನು ಎಲೆಕ್ಟೋರಲ್ ಸಂಸ್ಥೆಯಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಆರು ಸದಸ್ಯರನ್ನು ಪ್ರಸಿದ್ಧ ಆಟಗಾರರಿಂದ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

ಅಂತೆಯೇ ಹಾಲಿ ಆದೇಶವು ಫೀಫಾ ಎಐಎಫ್‌ಎಫ್‌ನ ಮೇಲೆ ಹೇರಿರುವ ಅಮಾನತು ರದ್ದುಗೊಳಿಸಲು ಮತ್ತು ಪ್ರತಿಷ್ಠಿತ ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಅನ್ನು ಭಾರತದಲ್ಲಿ ನಡೆಸಲು ಅನುಕೂಲವಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯ ಆಟಗಾರರು ಮತ್ತು ತಂಡಗಳು ಭಾಗವಹಿಸಲು ಅವಕಾಶ ನೀಡುತ್ತಿದೆ ಎಂದು ಪೀಠ ಹೇಳಿದೆ.

ಸ್ಪರ್ಧಾತ್ಮಕ ಪಕ್ಷಗಳಿಂದ ಯಾವುದೇ ಆಕ್ಷೇಪಣೆ ದಾಖಲಾಗದ ಕಾರಣ ಮತ್ತು ಚುನಾವಣೆಯ ದಿನಾಂಕವನ್ನು ಒಂದು ವಾರದ ಅವಧಿಗೆ ವಿಸ್ತರಿಸುವ ಮೂಲಕ ಮಾರ್ಪಡಿಸಲು ಅನುಮತಿ ನೀಡಲಾಗಿರುವುದರಿಂದ ನೇಮಕಗೊಂಡ ಚುನಾವಣಾಧಿಕಾರಿಗಳನ್ನು (ಆರ್‌ಒ) ನೇಮಿಸಿದ ಆರ್‌ಒ ಎಂದು ಪರಿಗಣಿಸಲಾಗುತ್ತದೆ. ನಂತರದ ಚುನಾವಣೆಗೆ ಮತದಾರರ ಪಟ್ಟಿಯು ರಾಜ್ಯಗಳು/UTಗಳನ್ನು ಪ್ರತಿನಿಧಿಸುವ 36 ಸದಸ್ಯ ಸಂಘಗಳನ್ನು ಒಳಗೊಂಡಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿಒಎ ಪರ ವಾದ
ಇದಕ್ಕೂ ಮೊದಲು ಎಐಎಫ್‌ಎಫ್‌ ಸಿಒಎ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್ ಅವರು, ಎಐಎಫ್‌ಎಫ್‌ನಲ್ಲಿ ಸಂವಿಧಾನವನ್ನು ಅನುಸರಿಸದಿದ್ದಾಗ ಕಳೆದ ಎರಡು ವರ್ಷಗಳಲ್ಲಿ ಫಿಫಾ ಎಂದಿಗೂ ಮಧ್ಯಪ್ರವೇಶಿಸಿಲಿಲ್ಲ. ಈಗಾ ಏಕಾಏಕಿ ಎಐಎಫ್‌ಎಫ್‌ ಅನ್ನು ಅಮಾನತು ಮಾಡಿದೆ. ಎಲ್ಲರೂ ಇಲ್ಲಿನ ಬದಲಾವಣೆಗಳನ್ನು ಒಪ್ಪಿಕೊಂಡಿದ್ದಾರೆ, ಆದರೆ ದುರದೃಷ್ಟವಶಾತ್, ಕೆಲವರು ಮಾನ್ಯತೆ ಇಲ್ಲದೇ ಇದನ್ನು ನಡೆಸಲಾಗುತ್ತಿದೆ ಎಂದು ಫಿಫಾಗೆ ಹೇಳಿದ್ದಾರೆ. ಸಿಒಎ ಇಂದು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ಇಂದಿನಿಂದ ವಿಶ್ವಕಪ್ ವರೆಗೆ ಆಡಳಿತವನ್ನು ಯಾರು ನಿರ್ವಹಿಸುತ್ತಾರೆ ಎಂದು ವಾದ ಮಂಡಿಸಿದರು. 

FIFA ಅಮಾನತು ತೆರವಿಗೆ ಕ್ರಮ ಕೈಗೊಳ್ಳಿ ಎಂದಿದ್ದ ಸುಪ್ರೀಂ
ಇನ್ನು ಈ ಹಿಂದಿನ ವಿಚಾರಣೆಯಲ್ಲಿ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಮೇಲಿನ ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಶನ್‌(ಫಿಫಾ) ವಿಧಿಸಿರುವ ಅಮಾನತು ತೆರವಿಗೆ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಬುಧವಾರ ಸುಪ್ರೀಂ ಕೋರ್ಚ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಎಐಎಫ್‌ಎಫ್‌ಗೆ ಸಂಬಂಧಪಟ್ಟಪ್ರಕರಣದ ವಿಚಾರಣೆಯನ್ನು ಬುಧವಾರ ಪರಿಗಣಿಸಿದ ಸುಪ್ರೀಂ, ಅಕ್ಟೋಬರ್‌ನಲ್ಲಿ ನಡೆಯಬೇಕಿರುವ ಮಹಿಳಾ ಅಂಡರ್‌-17 ವಿಶ್ವಕಪ್‌ ಆಯೋಜಿಸಲು ಹಾಗೂ ಫಿಫಾ ಹೇರಿರುವ ಅಮಾನತು ತೆರವಿಗೆ ಸಕ್ರಿಯ ಪಾತ್ರ ವಹಿಸಿ ಎಂದು ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com