4 ಬಾರಿ ಚಾಂಪಿಯನ್ ಜರ್ಮನಿಯನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದ ಜಪಾನ್‌ ಅಚ್ಚರಿ ಗೋಲು!

ಸೌದಿ ಅರೇಬಿಯಾ ಬಲಿಷ್ಟ ಅರ್ಜೆಂಟೀನಾಗೆ ಶಾಕ್ ಕೊಟ್ಟ 24 ಗಂಟೆಗಳಲ್ಲೇ ಫಿಫಾ ವಿಶ್ವಕಪ್ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿಯನ್ನು ಜಪಾನ್ ಸ್ಪೇನ್ ವಿರುದ್ಧ 2-1 ಗೋಲುಗಳ ಅಚ್ಚರಿ ಜಯ ಸಾಧಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ.
ಜಪಾನ್ ಅಚ್ಚರಿ ಗೋಲು
ಜಪಾನ್ ಅಚ್ಚರಿ ಗೋಲು

ಸೌದಿ ಅರೇಬಿಯಾ ಬಲಿಷ್ಟ ಅರ್ಜೆಂಟೀನಾಗೆ ಶಾಕ್ ಕೊಟ್ಟ 24 ಗಂಟೆಗಳಲ್ಲೇ ಫಿಫಾ ವಿಶ್ವಕಪ್ 2022ರಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಬಾಲ್ಕು ಬಾರಿ ಚಾಂಪಿಯನ್ ಆಗಿರುವ ಜರ್ಮನಿಯನ್ನು ಜಪಾನ್ ಸ್ಪೇನ್ ವಿರುದ್ಧ 2-1 ಗೋಲುಗಳ ಅಚ್ಚರಿ ಜಯ ಸಾಧಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಜರ್ಮನಿ ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಜಪಾನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ತಂಡಕ್ಕೆ ಶಾಕ್ ಕೊಟ್ಟಿದೆ.

ಸ್ಪೇನ್ ವಿರುದ್ಧದ ಪಂದ್ಯದ ಆಟದ 33ನೇ ನಿಮಿಷದಲ್ಲಿ ಗುಯೋಗಾನ್ ಪೆನಾಲ್ಟಿ ಮೂಲಕ ಗೋಲು ಬಾರಿಸಿ ಸ್ಪೇನ್ ಗೆ 1-0 ಗೋಲುಗಳ ಮುನ್ನಡೆ ನೀಡಿದರು. ಮೊದಲಾರ್ಧದಲ್ಲಿ ಸ್ಪೇನ್ ಜಪಾನ್ ವಿರುದ್ಧ ಮೇಲುಗೈ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಜಪಾನ್ ಉತ್ತಮ ಆಟವಾಡಿತು. ಬದಲೀ ಆಟಗಾರರಾಗಿ ಕಣಕ್ಕಿಳಿದ ದೊಯಾನ್ ಮತ್ತು ಅಸಾನೋ ಎರಡು ಗೋಲುಗಳನ್ನು ಗಳಿಸಿದ್ದು ವಿಶೇಷವಾಗಿತ್ತು. ದೊಯಾನ್ ಪಂದ್ಯದ 75ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ 1-1 ಗೋಲುಗಳಿಂದ ಸಮಬಲ ಸಾಧಿಸಿದರು. ಅದಾದ 8 ನಿಮಿಷಗಳ ಅಂತರದಲ್ಲಿಯೇ ಅಸಾನೋ ಪಂದ್ಯದ 83ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಜಪಾನ್‌ಗೆ ಅವಿಸ್ಮರಣೀಯ ಗೆಲುವು ಸಾಧಿಸಿಲು ಕಾರಣವಾದರು.

ವಿವಾದಕ್ಕೀಡಾದ ಗೋಲು!
ಜಪಾನ್‌ 2ನೇ ಗೋಲು ಹೊಡೆದಿದ್ದು 51ನೇ ನಿಮಿಷದಲ್ಲಿ. ಅವೊ ತನಾಕ ಇದನ್ನು ಸಾಧಿಸಿದ್ದರು. ವಿವಾದ ಹುಟ್ಟಿದ್ದೇ ಇಲ್ಲಿಂದ. ಈ ಗೋಲು ಹೊಡೆಯುವ ಮುನ್ನ ಚೆಂಡು ಗೋಲುಪೆಟ್ಟಿಗೆಯ ಪಕ್ಕದ ಬೌಂಡರಿ ಗೆರೆಯನ್ನು ದಾಟಿತ್ತು. ಇದನ್ನೇ ಒಳಕ್ಕೆಳೆದುಕೊಂಡು ಜಪಾನೀಯರು ಗೋಲು ಬಾರಿಸಿದ್ದಾರೆ. ಗೆರೆ ದಾಟಿ ಹೊರಹೋದ ಚೆಂಡನ್ನು ಒಳ ತಂದು ಗೋಲುಪೆಟ್ಟಿಗೆಯೊಳಕ್ಕೆ ಬಾರಿಸುವುದು ಅಸಿಂಧು ಎನ್ನುವುದು ಪ್ರೇಕ್ಷಕರ ವಾದ. 

ಇದನ್ನು ವಾರ್‌ ತಂತ್ರಜ್ಞಾನದ ಮೂಲಕ ರೆಫ್ರಿಗಳು ಸುದೀರ್ಘ‌ವಾಗಿ ಪರಿಶೀಲಿಸಿದರು. ಅಂತಿಮವಾಗಿ ಗೋಲು ಸರಿಯಿದೆ ಎಂದು ರೆಫರಿಗಳು ತೀರ್ಪಿತ್ತರು. ಅದೇನೇ ಇದ್ದರೂ, ಚೆಂಡು ಗೆರೆ ದಾಟಿದ್ದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಿರುವಾಗ ಯಾವ ಆಧಾರದಲ್ಲಿ ಅದನ್ನು ಗೋಲೆಂದು ಪರಿಗಣಿಸಿದರು ಎನ್ನುವುದು ಖಚಿತವಾಗಿಲ್ಲ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ವಿವಾದಕ್ಕೆ ಕಾರಣವಾದ VAR ತಂತ್ರಜ್ಞಾನ
ಫ‌ುಟ್‌ಬಾಲ್‌ನಲ್ಲಿ ಗೋಲು ಆಗಿದೆಯೋ, ಅದರಲ್ಲೇನಾದರೂ ದೋಷವಾಗಿದೆಯೋ ಎಂದು ಪರಿಶೀಲಿಸಲು ವಾರ್‌ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದೀಗ ಇದೇ VAR ತಂತ್ರಜ್ಞಾನ ವಿವಾದಕ್ಕೆ ಕಾರಣವಾಗಿದ್ದು, ಗುರುವಾರ ತಡರಾತ್ರಿ ನಡೆದ ಜಪಾನ್‌-ಸ್ಪೇನ್‌ ನಡುವಿನ ಪಂದ್ಯದಲ್ಲಿ ಅಂತಹದ್ದೊಂದು “ವಾರ್‌’ ನಡೆಯಿತು. ಇದರ ಪರಿಣಾಮ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಜರ್ಮನಿ ಇನ್ನೊಂದು ಪಂದ್ಯದಲ್ಲಿ ಕೋಸ್ಟಾರಿಕ ವಿರುದ್ಧ ಗೆದ್ದರೂ ವಿಶ್ವಕಪ್‌ನಿಂದ ಹೊರಬಿದ್ದಿದೆ.

1.88MM ಲೈನ್ ನೊಳಗಿದ್ದ ಚೆಂಡು
ಇನ್ನು VAR ನಿಯಮಾವಳಿಗಳ ಪ್ರಕಾರ ಚೆಂಡು ಗೆರೆಯ 360 ಕೋನದಲ್ಲೂ ಹೊರಗಿದ್ದರೆ ಅದನ್ನು ಔಟ್ ಆಫ್ ಪ್ಲೇ ಎಂದು ಪರಿಗಣಿಸಲಾಗುತ್ತದೆ. ಆದರೆ ಜಪಾನ್ ಬಾರಿಸಿದ್ದ ಗೋಲಿನ ವೇಳೆ ಚೆಂಡು ಗೆರೆಗೆ 1.88MM ಒಳಗೆ ಇತ್ತು. ಇದು ಟಾಪ್ ಆ್ಯಂಗಲ್ ನಿಂದ ಕ್ಯಾಮೆರಾ ಕಣ್ಣಿಗೆ ಗೋಚರಿಸಿತ್ತು. ಹೀಗಾಗಿ ಇದನ್ನು ಥರ್ಡ್ ಅಂಪೈರ್ ಪ್ಲೇ ಇನ್ ಎಂದು ಪರಿಗಣಿಸಿ ಗೋಲು ಅನುಮೋದಿಸಿದ್ದಾರೆ ಎನ್ನಲಾಗಿದೆ.

ಜರ್ಮನಿಗೆ ಮುಖಭಂಗ, ಟೂರ್ನಿಯಿಂದಲೇ ಔಟ್
ಈ ಒಂದೇ ಒಂದು ಗೋಲು 4 ಬಾರಿ ಚಾಂಪಿಯನ್ ಜರ್ಮನಿಯ ವಿಶ್ವಕಪ್ ಟೂರ್ನಿಯಿಂದಲೇ ಹೊರಹೋಗುವಂತೆ ಮಾಡಿದೆ. ಜಪಾನ್ ಗೆಲುವಿನ ಮೂಲಕ ಜರ್ಮನಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದದ್ದು. ಒಂದು ವೇಳೆ ಈ ಗೋಲು ನೀಡದಿದ್ದರೆ, ಪಂದ್ಯ ಡ್ರಾ ಆಗಿ ಜಪಾನ್‌ ಹೊರಹೋಗಿ, ಜರ್ಮನಿ ನಾಕೌಟ್‌ಗೆ ಹೋಗುವ ಅವಕಾಶವೊಂದಿತ್ತು. ಬಾರಿಸಿದ ಗೋಲು, ಬಿಟ್ಟುಕೊಟ್ಟ ಗೋಲುಗಳನ್ನೆಲ್ಲ ಲೆಕ್ಕಾಚಾರ ಮಾಡಿದಾಗ ಜಪಾನ್‌ ಹಿಂದುಳಿಯುವ ಅವಕಾಶವೊಂದಿತ್ತು. ಜರ್ಮನಿ ಆಗ ಮೇಲೇರುತ್ತಿತ್ತು. ಆದರೆ ಈ ಒಂದೇ ಒಂದು ಗೋಲು ಜರ್ಮನಿ ಕನಸಿಗೆ ಕೊಳ್ಳಿ ಇಟ್ಟಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com