ಫೀಫಾ ವಿಶ್ವಕಪ್ 2022: ಅಮೆರಿಕಾ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್
ಕತಾರ್ ನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಜೆಲ್ ಡಮ್‌ಫ್ರೈಸ್ ಅದ್ಭುತ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ ತಂಡ ಅಮೆರಿಕಾ ತಂಡವನ್ನು ಸೋಲಿಸಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
Published: 04th December 2022 01:46 AM | Last Updated: 05th December 2022 01:27 PM | A+A A-

ನೆದರ್ಲ್ಯಾಂಡ್ ತಂಡ
ದೋಹಾ: ಕತಾರ್ ನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಡೆನ್ಜೆಲ್ ಡಮ್‌ಫ್ರೈಸ್ ಅದ್ಭುತ ಪ್ರದರ್ಶನದಿಂದಾಗಿ ನೆದರ್ಲ್ಯಾಂಡ್ ತಂಡ ಅಮೆರಿಕಾ ತಂಡವನ್ನು ಸೋಲಿಸಿ ಫೀಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
3-1 ಗೋಲುಗಳಿಂದ ಯುನೈಟೆಡ್ ಸ್ಟೇಟ್ಸ್ ಅನ್ನು ಸೋಲಿಸಿದ ನೆದರ್ಲ್ಯಾಂಡ್ಸ್ ಫೀಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ತಲುಪಿದ ಮೊದಲ ತಂಡವಾಗಿದೆ.
ನೆದರ್ಲೆಂಡ್ಸ್ ಪರ ಮೆಂಫಿಸ್ ಡಿಪೇ (10ನೇ ನಿಮಿಷ), ಡೇಲ್ ಬ್ಲೈಂಡ್ (45+1) ಮತ್ತು ಡಮ್‌ಫ್ರೀಸ್ (81ನೇ) ಗೋಲು ಗಳಿಸಿದರು. ಡಮ್‌ಫ್ರೀಸ್ ಇತರ ಎರಡು ಗೋಲುಗಳಿಗೂ ನೆರವಾಗಿದ್ದರು. ಅಮೆರಿಕ ಪರ 76ನೇ ನಿಮಿಷದಲ್ಲಿ ಹಾಜಿ ರೈಟ್ ಏಕೈಕ ಗೋಲು ದಾಖಲಿಸಿದರು.
ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವಿಜೇತರ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲ್ಯಾಂಡ್ ಸೆಣೆಸಲಿದೆ.