
ನೋವಾಕ್ ಜೊಕೋವಿಕ್
ನವದೆಹಲಿ: ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಚ್ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಪ್ರೇಲಿಯಾದ ನಿಕ್ ಕಿರಿಯೋಸ್ ನ್ನು ಮಣಿಸಿ 7 ನೇ ವಿಂಬಲ್ಡನ್ ಟೈಟಲ್ ನ್ನು ಗೆದ್ದಿದ್ದಾರೆ.
ಈ ಗೆಲುವಿನ ಮೂಲಕ ನೋವಾಕ್ ಜೋಕೋವಿಚ್ ಹೊಸ ದಾಖಲೆಗಲೆಗಳನ್ನು ನಿರ್ಮಿಸಿದ್ದು, ಇದು ಅವರ ಸತತ 4ನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಮತ್ತೊಂದು ದಾಖಲೆ ಎಂದರೆ ಈ ಹಿಂದೆ ಪೀಟ್ ಸ್ಯಾಂಪ್ರಸ್ ಅವರ ಹೆಸರಿನಲ್ಲಿದ್ದ 07 ವಿಂಬಲ್ಡನ್ ಜಯದ ದಾಖಲೆಯನ್ನು ಜೋಕೋವಿಚ್ ಸರಿಗಟ್ಟಿದ್ದಾರೆ.
ಇದನ್ನೂ ಓದಿ: ವಿಂಬಲ್ಡನ್: ಪುರುಷರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್, ಮ್ಯಾಕ್ಸ್ ಪರ್ಸೆಲ್ ಜೋಡಿ
ಇದಿಷ್ಟೇ ಅಲ್ಲದೇ, ರಾಫೆಲ್ ನಡಾಲ್ ಪುರುಷರಲ್ಲಿ ಗರಿಷ್ಠ ಗ್ಲ್ಯಾಂಡ್ ಸ್ಲಾಂ ಗೆದ್ದು, 22 ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದರೆ, 21 ಗ್ರ್ಯಾಂಡ್ ಸ್ಲ್ಯಾಂ ಗೆಲ್ಲುವ ಮೂಲಕ ನೋವಾಕ್ ಜೋಕೋವಿಚ್ ನಡಾಲ್ ಗೆ ಪೈಪೋಟಿ ನೀಡಿದ್ದಾರೆ.