ರೊನಾಲ್ಡೋ ವಿರುದ್ಧದ ಅತ್ಯಾಚಾರ ಪ್ರಕರಣ ವಜಾಗೊಳಿಸಿದ ನ್ಯಾಯಾಧೀಶ
ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧದ ಲಾಸ್ ವೇಗಾಸ್ ಅತ್ಯಾಚಾರ ಮೊಕದ್ದಮೆಯನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ಶನಿವಾರ ವಜಾಗೊಳಿಸಿದ್ದಾರೆ.
Published: 12th June 2022 11:57 AM | Last Updated: 12th June 2022 01:36 PM | A+A A-

ಕ್ರಿಸ್ಟಿಯಾನೋ ರೊನಾಲ್ಡೊ
ವಾಷಿಂಗ್ಟನ್: ಮ್ಯಾಂಚೆಸ್ಟರ್ ಯುನೈಟೆಡ್ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧದ ಲಾಸ್ ವೇಗಾಸ್ ಅತ್ಯಾಚಾರ ಮೊಕದ್ದಮೆಯನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ಶನಿವಾರ ವಜಾಗೊಳಿಸಿದ್ದಾರೆ.
ಫೆಡರಲ್ ನ್ಯಾಯಾಧೀಶರಾದ ಜೆನ್ನಿಫರ್ ಡೋರ್ಸೆ ಅವರು ಮಹಿಳೆ ಸಲ್ಲಿಸಿದ ಮೊಕದ್ದಮೆಯು ಆಕೆಯ ವಕೀಲರಿಂದ ಪಡೆದ "ಪುರ್ಲೋಯಿನ್ಡ್" ಗೌಪ್ಯ ದಾಖಲೆಗಳನ್ನು ಆಧರಿಸಿ ಈ ಮಹತ್ವದ ಆದೇಶ ನೀಡಿದ್ದಾರೆ. ಅಂತೆಯೇ ಈ ಪ್ರಕರಣವನ್ನು ಫುಟ್ ಬಾಲ್ ತಾರೆ ವರ್ಚಸ್ಸಿಗೆ ಕಳಂಕ ಹಚ್ಚುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಮಹಿಳೆಯ ಪರ ವಕೀಲ ಲೆಸ್ಲಿ ಮಾರ್ಕ್ ಸ್ಟೊವಾಲ್ ಅವರ ನಡವಳಿಕೆಯಿಂದ ರೊನಾಲ್ಡೊ ಅವರ ಗೌರವಕ್ಕೆ ಹಾನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಧೀಶರು ತಮ್ಮ 42 ಪುಟಗಳ ಆದೇಶದಲ್ಲಿ ಪ್ರಕರಣವನ್ನು ಮತ್ತೆ ಸಲ್ಲಿಸಲು ಯಾವುದೇ ಆಯ್ಕೆಯಿಲ್ಲದೆ ಸಂಪೂರ್ಣವಾಗಿ ವಜಾಗೊಳಿಸಲು ಸೂಚಿಸಿದ್ದಾರೆ. ಈ ಕುರಿತಂತೆ ಗೋಲ್ ಡಾಟ್ ಕಾಮ್ ವರದಿ ಆಧರಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ನ್ಯಾಯಾಧೀಶರ ಲಿಖಿತ ತೀರ್ಪಿನಲ್ಲಿ, ಈ ಪ್ರಕರಣವನ್ನು ಮುಂದುವರಿಸುವ ಅವಕಾಶವನ್ನು ಅರ್ಜಿದಾರರು ಕಳೆದುಕೊಳ್ಳುತ್ತಾರೆ, ಹೆಚ್ಚು ವೈಯಕ್ತಿಕ ಸ್ವಭಾವದ ಗಂಭೀರ ಆರೋಪಗಳನ್ನು ಸೂಚಿಸುವ ಹಕ್ಕುಗಳ ಇತ್ಯರ್ಥವನ್ನು ಬಿಚ್ಚಿಡಲು ಈ ಅರ್ಜಿದಾರರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
2009 ರಲ್ಲಿ ಲಾಸ್ ವೇಗಾಸ್‌ನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಹೇಳಿಕೊಂಡ ನಂತರ ರೊನಾಲ್ಡೊ ಮಹಿಳೆಗೆ USD 375,000 ಪಾವತಿಸಿದ್ದರು. ಮಹಿಳಾ ಪರ ವಕೀಲರಾದ ಲೆಸ್ಲಿ ಸ್ಟೋವಾಲ್ ಅವರು ಫುಟ್ಬಾಲ್ ಲೀಕ್ಸ್ ಸೃಷ್ಟಿಕರ್ತ ರುಯಿ ಪಿಂಟೊ ಅವರಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದರು, ನ್ಯಾಯಾಧೀಶರು ಗೌಪ್ಯ ಮತ್ತು ವಿಶೇಷ ಮತ್ತು ಸಾಕ್ಷಿಯಾಗಿ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ತೀರ್ಪು ನೀಡಿದರು.