ವರ್ಲ್ಡ್ ಜ್ಯೂನಿಯರ್ ಈಜು ಚ್ಯಾಂಪಿಯನ್ ಶಿಪ್ ಗೆ 'ಬೊಂಬೆನಗರಿ' ಚನ್ನಪಟ್ಟಣದ ಸಭಾ ಸುಹಾನಿ: ಚಕ್ಕೆರೆ ಹುಡುಗಿಯ ಯಶಸ್ಸಿನ ಕಹಾನಿ!

ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಪ್ರತಿಷ್ಠಿತ  ಫ್ಲೋರೆನ್ಸ್ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ  ಸಭಾ ಸುಹಾನಿ ಆಫ್ರಿಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ವರ್ಲ್ಡ್ ಜ್ಯೂನಿಯರ್ ಚ್ಯಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈಜುಪಟು ಸಭಾ ಸುಹಾನಿ
ಈಜುಪಟು ಸಭಾ ಸುಹಾನಿ

ಬೆಂಗಳೂರು: ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಪ್ರತಿಷ್ಠಿತ ಫ್ಲೋರೆನ್ಸ್ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ  ಸಭಾ ಸುಹಾನಿ ಆಫ್ರಿಕಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ವರ್ಲ್ಡ್ ಜ್ಯೂನಿಯರ್ ಚ್ಯಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ 2008ರ ಆಗಸ್ಟ್ 7 ರಂದು ಜನಿಸಿದ  ಸಭಾ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಈಜು ಕಲಿಕೆ ಆರಂಭಿಸಿದರು.

ಕಠಿಣ ಶ್ರಮ ಹಾಗೂ ಸತತ ಅಭ್ಯಾಸದ ಫಲವಾಗಿ ಸೆಪ್ಟಂಬರ್ 16 ರಿಂದ 18ರ ವರೆಗೆ ಆಫ್ರಿಕಾದ ಫೀನಾದಲ್ಲಿ ನಡೆಯುವ ಅಂತರಾಷ್ಟ್ರೀಯ ವರ್ಲ್ಡ್ ಜ್ಯೂನಿಯರ್ ಚ್ಯಾಂಪಿಯನ್ ಶಿಪ್ ನಲ್ಲಿ  ಭಾರತ ತಂಡವನ್ನು ಪ್ರತಿನಿಧಿಸಲು ಸಭಾ ಆಯ್ಕೆಯಾಗಿದ್ದಾರೆ. 14 ರಿಂದ 15 ವರ್ಷದೊಳಗಿನ ವಯಕ್ತಿಕ 5 ಕಿಮೀ ಈಜು ಸ್ಪರ್ಧೆ ಮತ್ತು 1.25 ಕಿ.ಮೀ ರಿಲೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರುವ ನಿಹಾರ್ ಅಮೀನ್ ಅವರ ಮಾರ್ಗದರ್ಶನದಲ್ಲಿ ತರಬೇತುದಾರರಾದ ಮಧುಕುಮಾರ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ.

2018ರಲ್ಲಿ ಪ್ರಥಮ ಬಾರಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪುಣೆಯಲ್ಲಿ ನಡೆದ 35ನೇ ಸಬ್ ಜ್ಯೂನಿಯರ್ ಚ್ಯಾಂಪಿಯನ್ ಶಿಪ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

2019 ರಲ್ಲಿ ನಡೆದ 39ನೇ  ಸಬ್ ಜ್ಯೂನಿಯರ್ ಚ್ಯಾಂಪಿಯನ್ ಶಿಪ್ ನಲ್ಲಿ ಮತ್ತೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ವೈಯಕ್ತಿಕ ವಿಭಾಗದಲ್ಲಿ ಕಂಚಿವ ಪದಕ ಹಾಗೂ ರಿಲೇನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

2019 ರಲ್ಲಿ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಒಂದು ಕಿಮೀ ಈಜು ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

2020ರಲ್ಲಿ ಶಿವಮೊಗ್ಗದಲ್ಲಿ ನಡೆದ ಮೂರನೇ ನ್ಯಾಷನಲ್ ಓಪನ್ ಚ್ಯಾಂಪಿಯನ್ ಶಿಪ್ ನಲ್ಲಿ 5 ಕಿಮೀ ಈಜಿ ಮೊದಲ ಸ್ಥಾನ ಪಡೆದರು. ನಂತರ 1.25 ಕಿ.ಮೀ ರಿಲೇಯಲ್ಲಿ ಮೊದಲ ಸ್ಥಾನ ಪಡೆದು ಭಾರತ ತಂಡಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಬೇಕೆಂಬ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಭಾ ಮತ್ತಷ್ಟು ಶ್ರಮ ಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com