ವಿಶ್ವಕಪ್ ಚೆಸ್ ಟೂರ್ನಿ: ಫೈನಲ್ ಗೆ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ!

FIDE ವಿಶ್ವಕಪ್ ಚೆಸ್ ಟೂರ್ನಮೆಂಟ್‌ನ ಸೆಮಿ-ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು ಟೈಬ್ರೇಕ್‌ನಲ್ಲಿ 3.5-2.5 ರಿಂದ ಸೋಲಿಸಿದರು. 
ಆರ್ ಪ್ರಗ್ನಾನಂದ
ಆರ್ ಪ್ರಗ್ನಾನಂದ

FIDE ವಿಶ್ವಕಪ್ ಚೆಸ್ ಟೂರ್ನಮೆಂಟ್‌ನ ಸೆಮಿ-ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು ಟೈಬ್ರೇಕ್‌ನಲ್ಲಿ 3.5-2.5 ರಿಂದ ಸೋಲಿಸಿದರು. 

ಎರಡು ಪಂದ್ಯಗಳ ಶಾಸ್ತ್ರೀಯ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡ ನಂತರ, 18 ವರ್ಷದ ಭಾರತೀಯ ಪ್ರಗ್ನಾನಂದ ಅವರು ವಿರೋಚಿತ ಟೈಬ್ರೇಕರ್‌ನಲ್ಲಿ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ನನ್ನು ಸೋಲಿಸಿದರು. ಮಂಗಳವಾರದಿಂದ ನಡೆಯಲಿರುವ ಫೈನಲ್‌ನಲ್ಲಿ ಪ್ರಗ್ನಾನಂದ ಅವರು ಐದು ಬಾರಿಯ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎದುರಿಸಲಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಅಜರ್‌ಬೈಜಾನ್‌ನ ನಿಜಾತ್ ಅಬ್ಬಾಸೊವ್ ಅವರನ್ನು 1.5-0.5 ರಿಂದ ಸೋಲಿಸಿದರು.

'ಎಂತಹ ಉತ್ತಮ ಪ್ರದರ್ಶನ'
ಭಾರತದ ಚೆಸ್ ಪಟು ವಿಶ್ವನಾಥನ್ ಆನಂದ್ ಅವರು ಟ್ವೀಟ್ ಮಾಡಿದ್ದಾರೆ. 'ಪ್ರಾಗ್ (ಪ್ರಜ್ಞಾನಾನಂದ) ಫೈನಲ್ ತಲುಪಿದ್ದಾರೆ! ಅವರು ಟೈಬ್ರೇಕ್‌ನಲ್ಲಿ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು. ಈಗ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎದುರಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

'ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಪ್ರಗ್ನಾನಂದ ಅಭಿನಂದನೆಗಳು'
ಖ್ಯಾತ ಚೆಸ್ ತರಬೇತುದಾರ ಆರ್‌ಬಿ ರಮೇಶ್ ಅವರು, 'ಫ್ಯಾಬಿಯಾನೊ ವಿರುದ್ಧ ಗೆಲುವು ಸಾಧಿಸಿದ್ದಕ್ಕಾಗಿ ಮತ್ತು 2023ರ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಪ್ರಗ್ನಾನಂದ ಅವರಿಗೆ ಅಭಿನಂದನೆಗಳು. ಹೆಮ್ಮೆ ಮತ್ತು ಸಂತೋಷ. ಮಾಜಿ ವಿಶ್ವ ನಂಬರ್ ಒನ್ ಮಹಿಳಾ ಆಟಗಾರ್ತಿ ಸುಸಾನ್ ಪೋಲ್ಗರ್ ಕೂಡ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಅನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com