ಎದುರಾಳಿ ಪಾಕಿಸ್ತಾನದಲ್ಲಿ ಡೇವಿಕ್ ಕಪ್ ಆಯೋಜನೆ: ಟೂರ್ನಿಯಿಂದ ದೂರ ಉಳಿಯುತ್ತಾ ಭಾರತ?

ಡೇವಿಸ್ ಕಪ್‌ನ ಪ್ಲೇ-ಆಫ್ ಪಂದ್ಯಕ್ಕಾಗಿ ಭಾರತ ಟೆನಿಸ್ ತಂಡ ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿದೆ. ಆದರೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತನ್ನ ತಂಡವನ್ನು ಈ ನೆರೆಯ ದೇಶಕ್ಕೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಡೇವಿಸ್ ಕಪ್‌ನ ಪ್ಲೇ-ಆಫ್ ಪಂದ್ಯಕ್ಕಾಗಿ ಭಾರತ ಟೆನಿಸ್ ತಂಡ ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿದೆ. ಆದರೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತನ್ನ ತಂಡವನ್ನು ಈ ನೆರೆಯ ದೇಶಕ್ಕೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಎಐಟಿಎ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಕ್ರೀಡಾ ಸಚಿವಾಲಯದ ಸಲಹೆ ಕೇಳಿದೆ. 

ಕ್ರೀಡಾ ಸಚಿವಾಲಯಕ್ಕೆ ಹೋಗುವ ಮೊದಲು, ಎಐಟಿಎ ಈ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಗೆ ಮನವಿ ಮಾಡಿತ್ತು. ಆದರೆ ಐಟಿಎಫ್ ಭಾರತದ ಮನವಿಯನ್ನು ತಿರಸ್ಕರಿಸಿತು. ITF ನ ಈ ನಿರ್ಧಾರದ ನಂತರ, AITA ಈ ವಿಷಯದ ಬಗ್ಗೆ ಕ್ರೀಡಾ ಸಚಿವಾಲಯದಿಂದ ಸಲಹೆ ಕೇಳಿದೆ. ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ 'ಪಾಕಿಸ್ತಾನಕ್ಕೆ ಪ್ರಯಾಣದ ನೀತಿ ಏನು ಎಂದು ನಾವು ಕ್ರೀಡಾ ಸಚಿವಾಲಯದಿಂದ ಸಲಹೆ ಕೇಳಿದ್ದೇವೆ? ಇದು ಟೆನಿಸ್ ವಿಶ್ವಕಪ್. ಸಚಿವಾಲಯದ ಉತ್ತರಕ್ಕಾಗಿ ನಾವು ಕಾಯುತ್ತಿದ್ದೇವೆ.

ಈ ಪಂದ್ಯ ಫೆಬ್ರವರಿ 3 ಮತ್ತು 4ರಂದು ಪಾಕಿಸ್ತಾನದಲ್ಲಿ ನಡೆಯಲಿದೆ. ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ಮುನ್ನ ಕ್ರೀಡಾ ಸಚಿವಾಲಯವನ್ನು ಕೇಳಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹಿಂದಿನ ಡೇವಿಸ್ ಕಪ್ ಪಂದ್ಯವು 2019ರಲ್ಲಿ ನಡೆಯಿತು. ಆದರೆ ಎಐಟಿಎ ಕೋರಿಕೆಯ ಮೇರೆಗೆ ಪಾಕಿಸ್ತಾನದ ಬದಲಿಗೆ ಕಝಾಕಿಸ್ತಾನ್‌ನಲ್ಲಿ ಟೂರ್ನಿ ನಡೆದಿತ್ತು.

ಭಾರತೀಯ ಡೇವಿಸ್ ಕಪ್ ತಂಡ 1964ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಭಾರತೀಯ ಕ್ರಿಕೆಟ್ ತಂಡವು 2006ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. ಆದರೆ ಅದರ ನಂತರ ಒಂದು ದಶಕಕ್ಕೂ ಹೆಚ್ಚು ಕಾಲ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.

ಕ್ರಿಕೆಟ್‌ನಲ್ಲಿ ಎರಡೂ ದೇಶಗಳು ಈ ವರ್ಷ ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಬಾರಿಯ ಏಷ್ಯಾಕಪ್‌ನ ಆತಿಥೇಯ ಪಾಕಿಸ್ತಾನವಾಗಿತ್ತು. ಆದರೆ ಭಾರತ ಇಲ್ಲಿ ಆಡಲು ನಿರಾಕರಿಸಿತು. ನಂತರ ಈ ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದವು. ಶ್ರೀಲಂಕಾದಲ್ಲಿ ಫೈನಲ್ ಸೇರಿದಂತೆ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಆಡಿದೆ. ಇದಾದ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜಿಸಲಾಗಿದ್ದು, ಈ ಜಾಗತಿಕ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು.

ಇದೀಗ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸುವ ಹಕ್ಕು ಪಾಕಿಸ್ತಾನಕ್ಕೂ ಇದೆ. ಹೀಗಿರುವಾಗ ಭಾರತ ಈ ಜಾಗತಿಕ ಟೂರ್ನಿಗೆ ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಮತ್ತೊಮ್ಮೆ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನದೊಂದಿಗೆ ತಟಸ್ಥ ರಾಷ್ಟ್ರದಲ್ಲಿ ಈ ಟೂರ್ನಿ ಆಯೋಜಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com