ಡಬ್ಲ್ಯೂಎಫ್ ಐ ಮುಖ್ಯಸ್ಥರ ವಿರುದ್ಧ ಮೀಟೂ ಆರೋಪ: ಸಿಂಗ್ ವಜಾ ಮಾಡುವವರೆಗೂ ಕದಲುವುದಿಲ್ಲ ಎಂದ ಕುಸ್ತಿಪಟುಗಳು!

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್  ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸುವಂತೆ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಭಾರತೀಯ ಒಲಂಪಿಕ್ ಅಸೋಸಿಯೇಷನ್ ಗೆ ಮನವಿ ಮಾಡಿದ್ದಾರೆ. 
ಕುಸ್ತಿಪಟುಗಳಾದ ವಿನೇಶ್ ಪೋಗಟ್, ಬಜರಂಗ್ ಪುನಿಯಾ ಮತ್ತಿತರರು
ಕುಸ್ತಿಪಟುಗಳಾದ ವಿನೇಶ್ ಪೋಗಟ್, ಬಜರಂಗ್ ಪುನಿಯಾ ಮತ್ತಿತರರು
Updated on

ನಂದಿನಿ ನಗರ: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್  ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸುವಂತೆ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಭಾರತೀಯ ಒಲಂಪಿಕ್ ಅಸೋಸಿಯೇಷನ್ ಗೆ ಮನವಿ ಮಾಡಿದ್ದಾರೆ. 

ಸರಣ್ ಸಿಂಗ್ ವಿರುದ್ಧ ಹಲವು ಎಫ್ ಐಆರ್ ದಾಖಲು ಬೆದರಿಕೆಯ ಮಾರನೇ ದಿನವಾದ ಇಂದು ಭಾರತೀಯ ಒಲಂಪಿಕ್ ಅಸೋಸಿಯೇಷನ್ ಕಚೇರಿಗೆ ತೆರಳಿದ ಪ್ರತಿಭಟನಾಕಾರು, ಟೋಕಿಯೊ ಒಲಿಂಪಿಕ್ಸ್‌ ಪದಕ ವಂಚಿತೆ ವಿನೇಶ್ ಫೋಗಟ್ ಅವರಿಗೆ ಬ್ರಿಜ್ ಭೂಷಣ್ ಸರಣ್ ಸಿಂಗ್ ಮಾನಸಿಕವಾಗಿ ಕಿರುಕುಳ, ಚಿತ್ರಹಿಂಸೆ ನೀಡಿದ್ದರು. ಇದಾದ ಅವರು ಬಹುತೇಕ ಆತ್ಮಹತ್ಯೆಗೆ ಆಲೋಚಿಸಿದ್ದಾರೆ ಎಂದು  ಐಒಎ ಅಧ್ಯಕ್ಷೆ ಪಿ ಟಿ ಉಷಾ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ  ಫೆಡರೇಷನ್ ನಲ್ಲಿ ಸಾಕಷ್ಟು ಹಣಕಾಸು ಅವ್ಯವಹಾರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಫೆಡರೇಶನ್ ಅಧ್ಯಕ್ಷರು ರಾಷ್ಟ್ರೀಯ ಶಿಬಿರದಲ್ಲಿ ಇರಿಸಿರುವ ತರಬೇತುದಾರರು ಮತ್ತು ಕ್ರೀಡಾ ವಿಜ್ಞಾನ ಸಿಬ್ಬಂದಿ ಸಂಪೂರ್ಣವಾಗಿ ಅಸಮರ್ಥರಾಗಿದ್ದಾರೆ. ಅವರು ಕೇವಲ ಅವರ ಮಾಹಿತಿದಾರರಾಗಿದ್ದಾರೆ. ಅಲ್ಲದೇ, ರಾಷ್ಟ್ರೀಯ ಶಿಬಿರದಲ್ಲಿ ಅತ್ಯಂತ ಕೆಟ್ಟ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ಫೆಡರೇಶನ್ ಅಧ್ಯಕ್ಷರನ್ನು ವಜಾ ಮಾಡುವವರೆಗೂ ಕದಲುವುದಿಲ್ಲ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಸಿಂಗ್ ಯಾವುದೇ  ಕಾರಣಕ್ಕೂ ಹುದ್ದೆ ತ್ಯಜಿಸುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ.

ತಮ್ಮ ವಿರುದ್ಧದ ಕುಸ್ತಿಪಟುಗಳ ಪ್ರತಿಭಟನೆಯು ಶಾಹೀನ್ ಬಾಗ್‌ ತರಹದ ಧರಣಿಯಾಗಿದೆ ಎಂದು ಆರನೇ ಬಾರಿಗೆ ಲೋಕಸಭಾ ಸಂಸದರೂ ಆಗಿರುವ ಸಿಂಗ್ ತಿಳಿಸಿದ್ದಾರೆ. ಕುಸ್ತಿಪಟುಗಳ ಪ್ರತಿಭಟನೆ ಕಾಂಗ್ರೆಸ್ ಪಕ್ಷ ಬಿಜೆಪಿಯ ಮೇಲೆ ನಡೆಸುತ್ತಿರುವ ದಾಳಿಯಾಗಿದೆ ಎಂದು ಸಿಂಗ್ ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com