ವಿಶೇಷ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ: 50 ಪದಕಗಳ ಗಡಿ ದಾಟಿದ ಭಾರತ!

ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯ ಪಡೆ ತನ್ನ ಪದಕದ ಭರಾಟೆಯನ್ನು ಮುಂದುವರೆಸಿದ್ದು, ಬರ್ಲಿನ್‌ನಲ್ಲಿ 50 ಪದಕಗಳ ಗಡಿ ದಾಟಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರ್ಲಿನ್‌: ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯ ಪಡೆ ತನ್ನ ಪದಕದ ಭರಾಟೆಯನ್ನು ಮುಂದುವರೆಸಿದ್ದು, ಬರ್ಲಿನ್‌ನಲ್ಲಿ 50 ಪದಕಗಳ ಗಡಿ ದಾಟಿತು.

ಟೂರ್ನಿಯ ಕೊನೆ ದಿನ ಸ್ಪೆಷಲ್ ಒಲಿಂಪಿಕ್ಸ್ ಭಾರತ 15 ಚಿನ್ನ, 27 ಬೆಳ್ಳಿ, 13 ಕಂಚು ಸೇರಿದಂತೆ ಅಥ್ಲೆಟಿಕ್ಸ್, ಸೈಕ್ಲಿಂಗ್, ಪವರ್‌ಲಿಫ್ಟಿಂಗ್, ರೋಲರ್ ಸ್ಕೇಟಿಂಗ್ ಮತ್ತು ಈಜು. ಐದು ವಿವಿಧ ಕ್ರೀಡೆಗಳಲ್ಲಿ 55 ಪದಕಗಳನ್ನು ಗಳಿಸಿದೆ. ಈಜಿನಲ್ಲಿ ಐದು ಪದಕಗಳ (3 ಚಿನ್ನ, 1 ಬೆಳ್ಳಿ ಮತ್ತು 1 ಕಂಚು) ಮತ್ತು ಸೈಕ್ಲಿಂಗ್ ಕೋರ್ಸ್‌ನಲ್ಲಿ ಆರು ಪದಕ (3 ಚಿನ್ನ, 2 ಬೆಳ್ಳಿ, ಒಂದು ಕಂಚು) ದಾಖಲಿಸಿದೆ.

ಸೈಕ್ಲಿಂಗ್ ತಂಡದ ಪ್ರತಿಯೊಬ್ಬ ಸದಸ್ಯರೂ 5 ಕಿಮೀ ರೋಡ್ ರೇಸ್‌ನಲ್ಲಿ ಕಂಚಿನ ಪದಕದೊಂದಿಗೆ ನೀಲ್ ಯಾದವ್ ಮೊದಲಿಗರಾಗಿ ಪದಕ ಗೆದ್ದರು. ನಂತರ ಯಾದವ್, ಶಿವಾನಿ ಮತ್ತು ಇಂದು ಪ್ರಕಾಶ್ 1 ಕಿಮೀ ಟೈಮ್ ಟ್ರಯಲ್‌ನಲ್ಲಿ ಚಿನ್ನ ಗೆದ್ದರೆ, ಕಲ್ಪನಾ ಜೆನಾ ಮತ್ತು ಜಯಶೀಲ ಅರ್ಬುತರಾಜ್ ಬೆಳ್ಳಿ ಪಡೆದರು.

ಈಜು: ಫ್ರೀಸ್ಟೈಲ್ ಈಜುಪಟುಗಳಾದ ದೀಕ್ಷಾ ಜಿತೇಂದ್ರ ಶಿರಗಾಂವ್ಕರ್, ಪೂಜಾ ಗಿರಿಧರರಾವ್ ಗಾಯಕವಾಡ ಮತ್ತು ಪ್ರಶದ್ಧಿ ಕಾಂಬಳೆ ಅವರು ಚಿನ್ನ ಗೆದ್ದುಕೊಂಡಿದ್ದರಿಂದ ಭಾರತದ ಪದಕಗಳು ಸುಮಾರು ದ್ವಿಗುಣಗೊಂಡವು. ಮಾಧವ್ ಮದನ್ ಚಿನ್ನದ ಪದಕ ಗಳಿಸುವ ಮೂಲಕ ತಮ್ಮ ಖಾತೆಗೆ ಮತ್ತೊಂದು ಪದಕವನ್ನು ಸೇರಿಸಿದರು. ಮುರಳಿ ಮತ್ತು ಸಿದ್ಧಾಂಥ್. ಕುಮಾರ್ 25 ಮೀಟರ್ ಫ್ರೀಸ್ಟೈಲ್ ನಲ್ಲಿ ಕಂಚು ಗೆದ್ದರು.

ಇನ್ನುಳಿದಂತೆ ಸೋನೆಪತ್‌ನ ಸಾಕೇತ್ ಕುಂದು ಮಿನಿ ಜಾವೆಲಿನ್ ಬಿ ಲೆವೆಲ್‌ನಲ್ಲಿ ಬೆಳ್ಳಿ ಗೆದ್ದರು. ಲಿಟಲ್ ಏಂಜಲ್ಸ್ ಶಾಲೆಯ ವಿದ್ಯಾರ್ಥಿಯು ಬಹು-ಕ್ರೀಡಾ ಅಥ್ಲೀಟ್ ಆಗಿದ್ದು, ಅವರು ಟೇಬಲ್ ಟೆನ್ನಿಸ್, ಫಿಗರ್ ಸ್ಕೇಟಿಂಗ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com