ಏಷ್ಯನ್ ಗೇಮ್ಸ್ 2023: ಮುಂದುವರೆದ ಪದಕ ಬೇಟೆ, ಶತಕದ ಗಡಿಯಲ್ಲಿ ಭಾರತ

2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು 72 ವರ್ಷಗಳ ಬಳಿಕ ಮತ್ತೆ ಪದಕ ಗಳಿಕೆಯಲ್ಲಿ ಶತಕ ಸಿಡಿಸುವ ಹಾದಿಯಲ್ಲಿದೆ. 
ಭಾರತೀಯ ಕ್ರೀಡಾಪಟುಗಳು
ಭಾರತೀಯ ಕ್ರೀಡಾಪಟುಗಳು
Updated on

2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು 72 ವರ್ಷಗಳ ಬಳಿಕ ಮತ್ತೆ ಪದಕ ಗಳಿಕೆಯಲ್ಲಿ ಶತಕ ಸಿಡಿಸುವ ಹಾದಿಯಲ್ಲಿದೆ. 

ಇನ್ನು ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ಇಲ್ಲಿಯವರೆಗೂ ಭಾರತ 22 ಚಿನ್ನ, 34 ಬೆಳ್ಳಿ ಮತ್ತು 39 ಕಂಚಿನ ಪದಕದೊಂದಿಗೆ ಒಟ್ಟಾರೆ 95 ಪದಕಗಳನ್ನು ಗೆದ್ದಿದೆ. 

ಇಂದು ಕ್ರೀಡಾಕೂಟದ ಹಾಕಿ ಪುರುಷರ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸುವ ಮೂಲಕ ಭಾರತ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಇದೇ ವೇಳೆ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದೆ.

ಇನ್ನು ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಮಲೇಷ್ಯಾ ತಂಡವನ್ನು 21-17,21-12 ನೇರ ಸೆಟ್ ಗಳಿಂದ ಮಣಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. ಇನ್ನು ಟೂರ್ನಿಯಲ್ಲಿ ಮತ್ತೊಂದು ಪದಕ ಖಚಿತವಾದಂತಾಗಿದೆ.

ಇಂದು ಒಟ್ಟಾರೆ 9 ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಗಳಿಸಿದ್ದಾರೆ. 1 ಚಿನ್ನ, 2 ಬೆಳ್ಳಿ ಮತ್ತು 6 ಕಂಚಿನ ಪದಕ ಭಾರತದ ಖಾತೆಗೆ ಸೇರಿವೆ. ಇನ್ನು ಕ್ರೀಡಾಕೂಟದಲ್ಲಿ 7 ಪದಕಗಳು ಭಾರತಕ್ಕೆ ಬರುವುದು ಖಚಿತವಾಗಿದೆ. ಅದರೊಂದಿಗೆ ಭಾರತದ ಪದಕ ಸಂಖ್ಯೆ 102ಕ್ಕೇರುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com