ಏಷ್ಯನ್ ಗೇಮ್ಸ್ 2023: ಮಹಿಳೆಯರ ಕಬಡ್ಡಿಯಲ್ಲಿ ಚಿನ್ನ, ಭಾರತ 100 ಪದಕಗಳ ಸಾಧನೆ! ಪ್ರಧಾನಿ ಮೋದಿ ಅಭಿನಂದನೆ

ಚೀನಾದ  ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ ಪಂದ್ಯದಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ಬಹು-ಕ್ರೀಡಾ ಸ್ಪರ್ಧೆಯಲ್ಲಿ 100 ಪದಕಗಳ ಗಡಿಯನ್ನು ತಲುಪಿತು.
ಏಷ್ಯನ್ ಗೇಮ್ಸ್ ನಲ್ಲಿ ಭಾರತದ 100 ಪದಕಗಳ ಭೇಟಿ ಸಾಂದರ್ಭಿಕ ಚಿತ್ರ
ಏಷ್ಯನ್ ಗೇಮ್ಸ್ ನಲ್ಲಿ ಭಾರತದ 100 ಪದಕಗಳ ಭೇಟಿ ಸಾಂದರ್ಭಿಕ ಚಿತ್ರ
Updated on

ಹ್ಯಾಂಗ್‌ಝೌ: ಚೀನಾದ  ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ ಪಂದ್ಯದಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ಬಹು-ಕ್ರೀಡಾ ಸ್ಪರ್ಧೆಯಲ್ಲಿ 100 ಪದಕಗಳ ಗಡಿಯನ್ನು ತಲುಪಿತು.

ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ವಿರುದ್ಧ 14-9 ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕ ಗಳಿಸಿತು. ಆರಂಭಿಕ ಪಂದ್ಯದಲ್ಲಿ ಉಭಯ ತಂಡಗಳು 34-34 ರಿಂದ ಟೈ ಆಗಿದ್ದವು. ಮೊದಲಾರ್ಧದಲ್ಲಿ ಭಾರತದ ರೈಡರ್ಸ್ ಆರು ಬೋನಸ್ ಅಂಕಗಳನ್ನು ಗಳಿಸಿದರು. 

ದ್ವಿತೀಯಾರ್ಧದಲ್ಲಿ ಚೈನೀಸ್ ತೈಪೆ ಮುನ್ನಡೆ ಸಾಧಿಸಿ 16 ಅಂಕ ಗಳಿಸಿದರೆ, ಭಾರತೀಯರು ಕೇವಲ 12 ಅಂಕ ಗಳಿಸಲಷ್ಟೇ ಶಕ್ತರಾದರು. ಆದರೆ, ಭಾರತದ ರೈಡರ್ಸ್ ಎರಡು ಬೋನಸ್ ಅಂಕಗಳನ್ನು ಗಳಿಸಿದರು. ಅಂತಿಮವಾಗಿ ಮೊದಲಾರ್ಧದಲ್ಲಿನ ತಮ್ಮ ಅಮೋಘ ಪ್ರದರ್ಶನದಿಂದಾಗಿ, ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಬಡ್ಡಿ ಆಟಗಾರರು ಚೈನೀಸ್ ತೈಪೆ ವಿರುದ್ಧ 26-25 ಅಂತರದಿಂದ ಜಯಗಳಿಸಿ ಚಿನ್ನದ ಪದಕ ಪಡೆದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ, "ಸಂಪೂರ್ಣ ಪ್ರಾಬಲ್ಯ! ನಮ್ಮ ಮಹಿಳಾ ಕಬಡ್ಡಿ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿದೆ, ಚೈನೀಸ್ ತೈಪೆ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಮಹಿಳಾ ತಂಡದ ಅಪ್ರತಿಮ ಕೌಶಲ್ಯ, ದೃಢತೆ ಮತ್ತು ಟೀಮ್ ವರ್ಕ್ ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಮತ್ತು ಭಾರತವು ಇದುವರೆಗೆ 100 ಪದಕಗಳು ಜಯಸಿದೆ ಎಂದು ಹೇಳಿದೆ. 

ಈ ಸಾಧನೆಗೆ ಭಾರತೀಯ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.  ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಐತಿಹಾಸಿಕ ಕ್ಷಣವಾಗಿದೆ. ನಮ್ಮ ಕಬಡ್ಡಿ ಮಹಿಳಾ ತಂಡ ಚಿನ್ನಕ್ಕೆ ಕೊರಳೊಡ್ಡಿದೆ! ಈ ಗೆಲುವು ನಮ್ಮ ಮಹಿಳಾ ಕ್ರೀಡಾಪಟುಗಳ ಅದಮ್ಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಯಶಸ್ಸಿನಿಂದ ಭಾರತಕ್ಕೆ ಹೆಮ್ಮೆ ಇದೆ. ತಂಡಕ್ಕೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com