ಏಷ್ಯನ್ ಗೇಮ್ಸ್ 2023: 10 ಮೀ ಶೂಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಅದ್ಭುತ ಪ್ರದರ್ಶನ ಶನಿವಾರವೂ ಮುಂದುವರಿದಿದೆ.
ಬೆಳ್ಳಿ ಪದಕ ಗೆದ್ದ ಭಾರತೀಯ ತಂಡ.
ಬೆಳ್ಳಿ ಪದಕ ಗೆದ್ದ ಭಾರತೀಯ ತಂಡ.

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಅದ್ಭುತ ಪ್ರದರ್ಶನ ಶನಿವಾರವೂ ಮುಂದುವರಿದಿದೆ.

ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಫೈನಲ್‌ನಲ್ಲಿ ಭಾರತದ ಜೋಡಿಯಾದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಬೆಳ್ಳಿ ಪದಕ ಗೆದ್ದಿದ್ದಾರೆ.

ಚೀನಾದ ಬೋವೆನ್ ಜಾಂಗ್ ಮತ್ತು ರಾಂಕ್ಸಿನ್ ಜಿಯಾಂಗ್ ಅವರು ಸ್ಪರ್ಧೆಯ ಆರಂಭಿಕ ಹಂತಗಳಲ್ಲಿ ಭಾರತಕ್ಕಿಂತ ಹಿಂದುಳಿದಿದ್ದರೂ ಕೂಡ ನಂತರ ಗಮನಾರ್ಹ ಕಮ್‌ಬ್ಯಾಕ್ ಮಾಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ನೀರಸ ಪ್ರದರ್ಶನದ ಬಳಿಕ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ತಂಡ ಅದ್ಭುತವಾದ ಪುನರಾಗಮನ ಮಾಡಿದೆ.

ಶೂಟಿಂಗ್ ವಿಭಾಗದಲ್ಲಿ ಭಾರತ ಆರು ಚಿನ್ನ, ಎಂಟು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಪಡೆದುಕೊಂಡಿದೆ. ಇದು ಇಲ್ಲಿಯವರೆಗಿನ ಅತ್ಯುತ್ತಮ ಪ್ರದರ್ಶನ ಎನಿಸಿಕೊಂಡಿದೆ. 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ವಿಭಾಗದ ಸಾಧನೆಯನ್ನು ಇದು ಹಿಂದಿಕ್ಕಿದೆ.

 ಶುಕ್ರವಾರ ನಡೆದ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಗೆದ್ದಿದ್ದಾರೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಶೂಟಿಂಗ್‌ನಲ್ಲಿ 22 ವರ್ಷದ ಶೂಟರ್‌ನ 4 ನೇ ಪದಕವಾಗಿದೆ. ಅವರು 10 ಮೀಟರ್ ಏರ್ ರೈಫಲ್ ಈವೆಂಟ್‌ನಲ್ಲಿ ಕಂಚು ಮತ್ತು ಈವೆಂಟ್‌ನಲ್ಲಿ ತಂಡದೊಂದಿಗೆ ಚಿನ್ನ ಗೆದ್ದಿದ್ದರು.

 ಸೆಪ್ಟೆಂಬರ್ 29 ರಂದು ಕೂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳಿಂದ ಗಮನಾರ್ಹ ಪ್ರದರ್ಶನ ಬಂದಿದೆ. ಅದರಲ್ಲೂ ಶೂಟರ್‌ಗಳ ಪದಕ ಬೇಟೆ ಮುಂದಿವರಿದಿದ್ದು, ಹ್ಯಾಂಗ್‌ಝೌನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ಈವೆಂಟ್ ಮತ್ತು 50 ಮೀ ರೈಫಲ್ 3 ಪೊಸಿಷನ್ಸ್ ಟೀಮ್ ಮೆನ್ ನಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿತು. ಈ ಮೂಲಕ ಈ ದಿನವೂ ಭಾರತ ಯಶಸ್ಸು ಕಂಡಿದೆ.

24 ವರ್ಷದ ಕಿರಣ್ ಬಲಿಯಾನ್ ಸೆಪ್ಟೆಂಬರ್ 29 ಶುಕ್ರವಾರದಂದು ಹ್ಯಾಂಗ್‌ಝೌನಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು, ಈ ಮೂಲಕ ಏಷ್ಯಾದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ 72 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ವಿಭಾಗದಲ್ಲಿ ಭಾರತ ಪದಕವನ್ನು ಗೆಲ್ಲಲು ಕಾರಣರಾದರು.

ಕಿರಣ್ ಬಲಿಯಾನ್ ತನ್ನ ವೃತ್ತಿಜೀವನದ ಮೊದಲ ಪ್ರಮುಖ ಪದಕವನ್ನು ಕೊರಳಿಗೇರಿಸಿಕೊಂಡ ಕಿರಣ್ 17.36 ಮೀ ದೂರಕ್ಕೆ ಎಸೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com