ಭಾರತದ ಪ್ರಮುಖ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬುಗೆ 4 ವರ್ಷ ನಿಷೇಧ!
ನಿಷೇಧಿತ ಅನಾಬೊಲಿಕ್ ಸ್ಟೆರಾಯ್ಡ್ ಬಳಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ(ನಾಡಾ) ಶಿಸ್ತು ಸಮಿತಿಯು ಭಾರತದ ಪ್ರಮುಖ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರಿಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದೆ.
Published: 01st March 2023 10:36 PM | Last Updated: 01st March 2023 10:36 PM | A+A A-

ಐಶ್ವರ್ಯಾ ಬಾಬು
ನಿಷೇಧಿತ ಅನಾಬೊಲಿಕ್ ಸ್ಟೆರಾಯ್ಡ್ ಬಳಸಿದ್ದಕ್ಕಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ(ನಾಡಾ) ಶಿಸ್ತು ಸಮಿತಿಯು ಭಾರತದ ಪ್ರಮುಖ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರಿಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದೆ.
2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದ ತಂಡದಿಂದ 25 ವರ್ಷದ ಐಶ್ವರ್ಯಾ ಅವರನ್ನು ಸ್ಪ್ರಿಂಟರ್ ಎಸ್ ಧನಲಕ್ಷ್ಮಿ ಜೊತೆಗೆ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿ(ವಾಡಾ) ನಿಷೇಧಿತ ಪಟ್ಟಿಯಲ್ಲಿರುವ ಸ್ಟೀರಾಯ್ಡ್ ಪರೀಕ್ಷೆಗೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಅವರನ್ನು ಕೈಬಿಡಲಾಯಿತು. NADA ಮೇಲ್ಮನವಿ ಸಮಿತಿಯು ಫೆಬ್ರವರಿ 13ರಂದು ನಿಷೇಧದ ಸೂಚನೆಯನ್ನು ಸ್ವೀಕರಿಸಿದ ನಂತರ ಐಶ್ವರ್ಯಾ ಅವರು ಮಾರ್ಚ್ 6ರವರೆಗೆ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯವಿದೆ.
ಐಶ್ವರ್ಯಾ ಚಾಂಪಿಯನ್‌ಶಿಪ್‌ನಲ್ಲಿ ಟ್ರಿಪಲ್ ಜಂಪ್‌ನಲ್ಲಿ 14.14 ಮೀ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಕಳೆದ ವರ್ಷ ಜುಲೈನಲ್ಲಿ ಐಶ್ವರ್ಯಾ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. 2022ರ ವಾಡಾದ ನಿಷೇಧಿತ ಪಟ್ಟಿಯಲ್ಲಿ ಐಶ್ವರ್ಯಾ 'ಅನಾಬೋಲಿಕ್ ಸ್ಟೀರಾಯ್ಡ್'ಗಳನ್ನು ಬಳಸಿದ್ದಾರೆ ಎಂದು ನಾಡಾ ಹೇಳಿದೆ.
ಐಶ್ವರ್ಯಾ ತಮ್ಮ ಉತ್ತರದಲ್ಲಿ, ಕಾರ್ಯಕ್ಷಮತೆ ವರ್ಧನೆಗಾಗಿ ನಾನು ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಫೆಬ್ರವರಿ 2021ರಲ್ಲಿ, ಜಿಮ್‌ನಲ್ಲಿ ತೂಕ ಎತ್ತುವ ಸಂದರ್ಭದಲ್ಲಿ ಭುಜ ಗಾಯದ ಸಮಸ್ಯೆ ಶುರುವಾಗಿತ್ತು ಎಂದು ಆಟಗಾರ್ತಿ ಹೇಳಿದರು. ಚಿಕಿತ್ಸೆ ಪಡೆದು ಗಾಯದಿಂದ ಚೇತರಿಸಿಕೊಂಡ ಬಳಿಕ ರಾಷ್ಟ್ರೀಯ, ಅಂತರ ರಾಜ್ಯ ಚಾಂಪಿಯನ್‌ಶಿಪ್‌ಗೂ ಮುನ್ನ ಕಠಿಣ ತರಬೇತಿ ಪಡೆದಿದ್ದೆ, ಇದರಿಂದಾಗಿ ಮತ್ತೆ ಅದೇ ಸ್ಥಳದಲ್ಲಿ(ಭುಜ) ಸಮಸ್ಯೆ ಎದುರಿಸಬೇಕಾಯಿತು ಎಂದು ಐಶ್ವರ್ಯಾ ಹೇಳಿದ್ದಾರೆ.
ಇದನ್ನೂ ಓದಿ: ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ
ಗಾಯವು ಮರುಕಳಿಸುವ ಭಯದಿಂದ, ಐಶ್ವರ್ಯಾ ತನ್ನ ಸಹ ಆಟಗಾರ ಜಗದೀಶ್ ಅವರೊಂದಿಗೆ ಈ ವಿಷಯವನ್ನು ಚರ್ಚಿಸಿದರು. ಜಗದೀಶ್ ಅವರಿಗೆ ಒಸ್ಟರಿನ್ ಔಷಧಿಯನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೋವು ನಿವಾರಿಸಲು ಮತ್ತು ಸ್ನಾಯುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.
ಐಶ್ವರ್ಯಾ ಆಸ್ಪತ್ರೆ ಅಥವಾ ನೋಂದಾಯಿತ ವೈದ್ಯರನ್ನು ಏಕೆ ಸಂಪರ್ಕಿಸಲಿಲ್ಲ ಎಂದು ನಾಡಾದ ಶಿಸ್ತು ಸಮಿತಿಯು ಪ್ರಶ್ನಿಸಿತ್ತು. ಆಟಗಾರ್ತಿ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ತನ್ನ ಪಾಲುದಾರನ ಸಲಹೆಯ ಮೇರೆಗೆ ಒಸ್ಟರಿನ್ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಇದು ಡೋಪಿಂಗ್ ವಿರೋಧಿ ನಿಯಮ 2.1 ಮತ್ತು 2.2 ಅನ್ನು ಉಲ್ಲಂಘಿಸಿದ್ದಾರೆ ಮತ್ತು ನಾಲ್ಕು ವರ್ಷಗಳವರೆಗೆ ಅನರ್ಹಗೊಳಿಸಲು ನಾಡಾ ನಿರ್ಧರಿಸಿತ್ತು. ಇನ್ನು 2022ರ ಜುಲೈ 18ರ ತಾತ್ಕಾಲಿಕ ಅಮಾನತು ದಿನಾಂಕದಿಂದ ಅನರ್ಹತೆಯ ಅವಧಿಯು ಪ್ರಾರಂಭವಾಗುತ್ತದೆ.