ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್: ಭಾರತೀಯ ಪುರುಷ ಮತ್ತು ಮಹಿಳೆಯರ ತಂಡಕ್ಕೆ ಚಾಂಪಿಯನ್ ಪಟ್ಟ
ಅಸ್ಸಾಂನ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ(ಬಿಟಿಆರ್) ಬಕ್ಸಾ ಜಿಲ್ಲೆಯ ತಮುಲ್ಪುರದಲ್ಲಿ ಮುಕ್ತಾಯಗೊಂಡ 4 ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಪ್ರಶಸ್ತಿ ಗೆದ್ದಿವೆ.
Published: 24th March 2023 05:09 PM | Last Updated: 24th March 2023 05:57 PM | A+A A-

ಸಂಗ್ರಹ ಚಿತ್ರ
ತಮುಲ್ಪುರ್: ಅಸ್ಸಾಂನ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ(ಬಿಟಿಆರ್) ಬಕ್ಸಾ ಜಿಲ್ಲೆಯ ತಮುಲ್ಪುರದಲ್ಲಿ ಮುಕ್ತಾಯಗೊಂಡ 4 ನೇ ಏಷ್ಯನ್ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಪ್ರಶಸ್ತಿ ಗೆದ್ದಿವೆ.
ಫೈನಲ್‌ನಲ್ಲಿ ಭಾರತದ ಪುರುಷರು ನೇಪಾಳವನ್ನು 6 ಅಂಕ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದರೆ, ಭಾರತೀಯ ಮಹಿಳೆಯರು ಅದೇ ಎದುರಾಳಿಗಳನ್ನು 33 ಅಂಕ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿದರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಭಾರತದ ಪುರುಷರು ಶ್ರೀಲಂಕಾ ಸವಾಲನ್ನು 45 ಪಾಯಿಂಟ್‌ಗಳಿಂದ ಸೋಲಿಸಿದ್ದರು. ಮತ್ತೊಂದೆಡೆ, ನೇಪಾಳ 1.5 ನಿಮಿಷಗಳು ಬಾಕಿ ಇರುವಾಗ ಬಾಂಗ್ಲಾದೇಶಕ್ಕಿಂತ 12 ಪಾಯಿಂಟ್‌ಗಳಿಂದ ಹಿಂದೆ ಬಿದ್ದಿತ್ತು. ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 49 ಅಂಕ ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿತು. ಮತ್ತು ಇನ್ನೊಂದು ಸೆಮಿಫೈನಲ್‌ನಲ್ಲಿ, ನೇಪಾಳವು ಶ್ರೀಲಂಕಾವನ್ನು 59 ಅಂಕಗಳು ಮತ್ತು ಇನ್ನಿಂಗ್ಸ್‌ನಿಂದ ಸೋಲಿಸಿತು.
ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಕ್ರಮವಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮೂರನೇ ಸ್ಥಾನವನ್ನು ಹಂಚಿಕೊಂಡಿವೆ.
ಭಾರತ ಈ ಚಾಂಪಿಯನ್‌ಶಿಪ್ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಭಾರತ ತಂಡದ ನಾಯಕ ಅಕ್ಷಯ್ ಭಂಗ್ರೆ ಹೇಳಿದ್ದಾರೆ. 'ಭಾರತೀಯನಾಗಿ, ಭಾರತದಲ್ಲಿ ಹುಟ್ಟಿಕೊಂಡ ಕ್ರೀಡೆಯನ್ನು ಗೆಲ್ಲುವುದು ಅದ್ಭುತವಾಗಿದೆ. ಅಲ್ಲದೆ, ಭಾಗವಹಿಸುವ ದೇಶಗಳು ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನೋಡುವುದು ಅಷ್ಟೇ ರೋಮಾಂಚನಕಾರಿ ಎಂದು ಹೇಳಿದರು.