ಏಷ್ಯನ್ ಗೇಮ್ಸ್: ಮುಂದುವರೆದ ಭಾರತದ ಪದಕ ಬೇಟೆ; ಇಂದು 2 ಚಿನ್ನ, 2 ಬೆಳ್ಳಿ, 2 ಕಂಚು; 69ಕ್ಕೇರಿದ ಪದಕ ಸಂಖ್ಯೆ!
2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ ಹಾಗೂ ಜಾವೆಲಿನ್ ಥ್ರೋನಲ್ಲಿ ಅನ್ನು ರಾಣಿ ಚಿನ್ನದ ಪದಕ ಗೆದ್ದಿದ್ದಾರೆ.
Published: 03rd October 2023 08:05 PM | Last Updated: 03rd October 2023 08:09 PM | A+A A-

ಪಾರುಲ್ ಚೌಧರಿ-ಅನ್ನು ರಾಣಿ
2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ 5000 ಮೀ ಮಹಿಳೆಯರ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 5000 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ 28 ವರ್ಷದ ಪಾರುಲ್, ಜಪಾನ್‌ನ ರಿರಿಕಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು.
ಸೋಮವಾರ ನಡೆದ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪಾರುಲ್ ಚೌಧರಿ ಅವರಿಗೆ ಇದು ಎರಡನೇ ಪದಕವಾಗಿದೆ. ಹ್ಯಾಂಗ್‌ಝೌನಲ್ಲಿ ನಡೆದ ಪದಕ ಪಟ್ಟಿಯಲ್ಲಿ ಭಾರತದ ಕ್ರೀಡಾಪಟುಗಳು ಇದುವರೆಗೆ 15 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
Parul you beauty
Parul Chaudhary wins GOLD medal in 5000m #IndiaAtAsianGames #AGwithIAS #AsianGames2022 pic.twitter.com/BADr3nKvsV— India_AllSports (@India_AllSports) October 3, 2023
ಚಿನ್ನಕ್ಕೆ ಮುತ್ತಿದ್ದ ಅನ್ನು ರಾಣಿ
ಅನ್ನು ರಾಣಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಮಹಿಳೆಯರ ಜಾವೆಲಿನ್ ಥ್ರೋನಲ್ಲಿ ಚಿನ್ನವನ್ನು ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅವರ ಅತ್ಯುತ್ತಮ 62.92 ಮೀಟರ್ ಎಸೆತವು ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಮೊದಲ ಚಿನ್ನವಾಗಿ ಮೈಲಿಗಲ್ಲು ಸ್ಥಾಪಿಸಿದೆ.
GOLD medal for Annu Rani
— India_AllSports (@India_AllSports) October 3, 2023
Annu wins Gold medal in Javelin Throw with her SB 62.92m. #IndiaAtAsianGames #AGwithIAS #AsianGames2022 pic.twitter.com/TaeaSwvigt
800 ಮೀ ಓಟದಲ್ಲಿ ಭಾರತಕ್ಕೆ ಬೆಳ್ಳಿ
ಏಷ್ಯನ್ ಗೇಮ್ಸ್ 2023ರ ಪುರುಷರ 800 ಮೀ ಓಟದಲ್ಲಿ ಮೊಹಮ್ಮದ್ ಅಫ್ಸಲ್ ಪುಲಿಕಲಕತ್ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಬಾಕ್ಸಿಂಗ್ ನಲ್ಲಿ ಎರಡು ಕಂಚು
ಭಾರತದ ಮೂವರು ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್, ಪರ್ವೀನ್ ಹೂಡಾ ಅವರು ಈಗಾಗಲೇ ಪದಕವನ್ನು ಖಚಿತ ಪಡಿಸಿದ್ದು ಪ್ರೀತಿ ಪವಾರ್ ಮತ್ತು ನಿಖತ್ ಜರೀನ್ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
Bronze for India
— India_AllSports (@India_AllSports) October 3, 2023
Preeti Pawar loses to reigning Asian Games Champion pugilist Chang Yuan of China in Semis (54kg).
Preeti had already assured her a spot for Paris Olympics by reaching Semis. #IndiaAtAsianGames #AGwithIAS #AsianGames2023 pic.twitter.com/TgsxvdQFE3
ಅಥ್ಲೆಟಿಕ್ಸ್: 400 ಮೀಟರ್ ಹರ್ಡಲ್ಸ್‌ನಲ್ಲಿ ವಿತ್ಯಾ ರಾಮರಾಜ್ ಗೆ ಕಂಚಿನ ಪದಕ
ವಿತ್ಯಾ ರಾಮರಾಜ್ ಏಷ್ಯನ್ ಗೇಮ್ಸ್ 2023 ರ ಮಹಿಳೆಯರ 400 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ 55.68 ಸೆಕೆಂಡುಗಳಲ್ಲಿ ಕಂಚಿನ ಪದಕ ಗೆದ್ದರು. 25ರ ಹರೆಯದ ಭಾರತೀಯ ಹರ್ಡಲರ್ ಸೋಮವಾರ ಹೀಟ್ಸ್‌ನಲ್ಲಿ ಓಟದ ವೇಳೆ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ದಂತಕಥೆ ಪಿಟಿ ಉಷಾ ಅವರ 400 ಮೀಟರ್ ಹರ್ಡಲ್ಸ್ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು.
2023ರ ಏಷ್ಯನ್ ಗೇಮ್ಸ್ ಭಾರತ ಇಲ್ಲಿಯವರೆಗೂ ಒಟ್ಟು 69 ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ. 15 ಚಿನ್ನ, 26 ಬೆಳ್ಳಿ ಮತ್ತು 28 ಕಂಚಿನ ಪದಕ ಗೆದ್ದಿದೆ.
India continue its hold on 4th spot in the Medal tally at end of Day 10 with 69 medals: 15 | 26 | 28
— India_AllSports (@India_AllSports) October 3, 2023
Just one medal away from achieving last edition's performance: 70 medals: 16 | 23 | 31 #IndiaAtAsianGames #AGwithIAS #AsianGames2022 pic.twitter.com/fbi9mJVnba