ಭಾರತ ಹಾಕಿ ತಂಡ
ಭಾರತ ಹಾಕಿ ತಂಡ

ಹಾಕಿ ರ್‍ಯಾಂಕಿಂಗ್‌: ಎಫ್‌ಐಎಚ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಏರಿಕೆ

ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್‌ಐಎಚ್) ಸೋಮವಾರ ಬಿಡುಗಡೆ ಮಾಡಿರುವ ಇತ್ತೀಚಿನ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಮೂರನೇ ಸ್ಥಾನಕ್ಕೆ ಏರಿದೆ.

ಲಾಸಾನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್‌ಐಎಚ್) ಸೋಮವಾರ ಬಿಡುಗಡೆ ಮಾಡಿರುವ ಇತ್ತೀಚಿನ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಮೂರನೇ ಸ್ಥಾನಕ್ಕೆ ಏರಿದೆ.

ಒಟ್ಟು 2771 ಅಂಕ ಗಳಿಸುವ ಮೂಲಕ ಭಾರತ ಒಂದು ವರ್ಷದ ನಂತರ ಮರಳಿ ಅಗ್ರ ಮೂರನೇ ಸ್ಥಾನಕ್ಕೆ ಮರಳಿದೆ.

ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023 ರಲ್ಲಿ ಅಜೇಯ ಸಾಧನೆಯಿಂದಾಗಿ ಭಾರತ ಮತ್ತೆ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಆಡಿದ ಏಳು ಪಂದ್ಯಗಳಲ್ಲಿ ಆರು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಯುರೋ ಪಾಕಿ ಚಾಂಪಿಯನ್ಸ್ ನೆದರ್ಲೆಂಡ್ ತಂಡ 3113 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಬೆಲ್ಜಿಯಂ ದ್ವಿತೀಯ ಸ್ಥಾನ ಪಡೆದಿದೆ. 2745 ಅಂಕಗಳೊಂದಿಗೆ ಇಂಗ್ಲೆಂಡ್ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ.

ಮಹಿಳೆಯರ ರ್‍ಯಾಂಕಿಂಗ್‌ ನಲ್ಲಿ ಭಾರತಕ್ಕೆ 7ನೇ ಸ್ಥಾನ
ಮಹಿಳೆಯರ ರ್‍ಯಾಂಕಿಂಗ್‌ ನಲ್ಲಿ ದಾಖಲೆಯ 12ನೇ ಬಾರಿ ಯುರೋ ಹಾಕಿ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದ ನೆದರ್ಲೆಂಡ್ ವನಿತೆಯರ ತಂಡ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. 

ಆಸ್ಟ್ರೇಲಿಯಾ ದ್ವಿತೀಯ ಸ್ಥಾನ ಮತ್ತು ಆರ್ಜೆಂಟೀನಾ ಮೂರನೇ ಸ್ಥಾನ ಪಡೆದಿದೆ. ಬೆಲ್ಜಿಯಂ ನಾಲ್ಕನೆ ಸ್ಥಾನದಲ್ಲಿದ್ದು, ಭಾರತೀಯ ಮಹಿಳೆಯರು(2325) ಏಳನೇ ಸ್ಥಾನಕ್ಕೆ ಏರಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com