Olympics 2024: ಪುರುಷ ಅಥ್ಲೀಟ್ ಜೊತೆ ಸೆಣಸು, 45 ಸೆಕೆಂಡ್ ನಲ್ಲೇ ಪಂದ್ಯ ಅಂತ್ಯ.. ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಬಾಕ್ಸರ್!

ಪ್ಯಾರಿಸ್ ನಲ್ಲಿ ನಡೆಯುತ್ತಿರುವ Olympics 2024 ಕ್ರೀಡಾಕೂಟದಲ್ಲಿ ಹೊಸದೊಂದು ವಿವಾದ ಭಾರಿ ಸುದ್ದಿ ಮಾಡಿದ್ದು, ಮಹಿಳಾ ಬಾಕ್ಸರ್ ಜೊತೆ ''ಜೈವಿಕ ಪುರುಷ'' ಬಾಕ್ಸರ್ ಸೆಣಸಾಡಿದ್ದು, ಪಂದ್ಯ ಕೇವಲ 45 ಸೆಕೆಂಡ್ ನಲ್ಲೇ ಅಂತ್ಯವಾಗಿ ವೇದಿಕೆಯಲ್ಲೇ ಮಹಿಳಾ ಬಾಕ್ಸರ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಇದೀಗ ವೈರಲ್ ಆಗುತ್ತಿದೆ.
Angela Carini vs Imane Khelif
ಏಂಜೆಲಾ ಕ್ಯಾರಿನಿ vs ಇಮೇನ್ ಖೇಲಿಫ್
Updated on

ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ Olympics 2024 ಕ್ರೀಡಾಕೂಟದಲ್ಲಿ ಹೊಸದೊಂದು ವಿವಾದ ಭಾರಿ ಸುದ್ದಿ ಮಾಡಿದ್ದು, ಮಹಿಳಾ ಬಾಕ್ಸರ್ ಜೊತೆ ''ಜೈವಿಕ ಪುರುಷ'' ಬಾಕ್ಸರ್ ಸೆಣಸಾಡಿದ್ದು, ಪಂದ್ಯ ಕೇವಲ 45 ಸೆಕೆಂಡ್ ನಲ್ಲೇ ಅಂತ್ಯವಾಗಿ ವೇದಿಕೆಯಲ್ಲೇ ಮಹಿಳಾ ಬಾಕ್ಸರ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಇದೀಗ ವೈರಲ್ ಆಗುತ್ತಿದೆ.

ಹೌದು.. Paris Olympics 2024 ಕ್ರೀಡಾಕೂಟದಲ್ಲಿ ಭಾರಿ ವಿವಾದವೊಂದು ಕೇಳಿಬಂದಿದ್ದು, ಮಹಿಳಾ ಬಾಕ್ಸರ್ ವಿರುದ್ಧ ಸೆಣಸಲು ಪುರುಷ ಬಾಕ್ಸರ್ ಗೆ ಅವಕಾಶ ಮಾಡಿಕೊಟ್ಟು ವಂಚನೆ ಎಸಗಿದ ಆರೋಪವೊಂದು ಆಯೋಜಕರ ವಿರುದ್ಧ ಕೇಳಿ ಬಂದಿದೆ.

ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯೊಂದಕ್ಕೆ ಪುರುಷ ಸ್ಪರ್ಧಿಯೊಬ್ಬರು ಕಣಕ್ಕಿಳಿದಿದ್ದು ಮಾತ್ರವಲ್ಲದೇ ಕೇವಲ 46 ಸೆಕೆಂಡ್​ಗಳಲ್ಲಿ ಎದುರಾಳಿಯನ್ನು ಸೋಲಿಸಿದ್ದು ಜಾಗತಿಕವಾಗಿ ಕ್ರೀಡಾಭಿಮಾನಿಗಳಲ್ಲಿ ಕಿಡಿ ಹಚ್ಚಿದೆ. ಸ್ವತಃ ಇಟಲಿಯ ಸ್ಪರ್ಧಿ ರಿಂಗ್​ನಲ್ಲಿ ಕಣ್ಣೀರು ಹಾಕುವ ಜತೆಗೆ ಬಳಿಕ ಮಾಧ್ಯಮದ ಮುಂದೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

Angela Carini vs Imane Khelif
Paris Olympics 2024: ಒಲಿಂಪಿಕ್ಸ್ ನಿರ್ಗಮನದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟೆನಿಸ್​ಗೆ ಕನ್ನಡಿಗ ರೋಹನ್ ಬೋಪಣ್ಣ ವಿದಾಯ!

ಏನಿದು ಘಟನೆ?

ಮಹಿಳೆಯರ 66 ಕೆಜಿ ವಿಭಾಗದ ಬಾಕ್ಸಿಂಗ್ ವಿಭಾಗದ ಪಂದ್ಯದಲ್ಲಿ ಇಂದು ಅಲ್ಜೇರಿಯಾದ Imane Khelif ಮತ್ತು ಇಟಲಿಯ Angela Carini ಪರಸ್ಪರ ಸೆಣಸಾಟ ನಡೆಸಿದ್ದರು. ಪಂದ್ಯ ಆರಂಭವಾಗುತ್ತಿದ್ದಂತೆಯೇ ಇಟಲಿಯ Angela Cariniಗೆ ಅಲ್ಜೇರಿಯಾದ Imane Khelif ಕೊಟ್ಟ ಹೊಡೆತ ಬಲವಾಗಿ ಬಿದ್ದಿತ್ತು.

ಇದಾದ ಕೆಲವೇ ಸೆಕೆಂಡ್ ಗಳಲ್ಲಿ Angela Carini ಪಂದ್ಯವನ್ನು ರದ್ದು ಮಾಡುವಂತೆ ರೆಫರಿಗಳನ್ನು ಕೋರಿದರು. ಅಭ್ಯರ್ಥಿಯ ಆಶಯದಂತೆ ರೆಫರಿಗಳು ಪಂದ್ಯ ರದ್ದು ಮಾಡಿ ನಿಯಮದಂತೆ ಎದುರಾಳಿ Imane Khelif ರನ್ನು ವಿಜಯಿ ಎಂದು ಘೋಷಣೆ ಮಾಡಿದರು.

ವಿವಾದವೇನು?

ಅಂದಹಾಗೆ ಈ ಪಂದ್ಯದಲ್ಲಿ ಇಟಲಿಯ Angela Carini ಅವರ ಎದುರಾಳಿಯಾಗಿದ್ದ ಅಲ್ಜೇರಿಯಾದ Imane Khelif ಅಸಲಿಗೆ ಮಹಿಳೆಯೇ ಅಲ್ಲವಂತೆ. ಆಕೆ ಜೈವಿಕ ಪುರುಷ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲಿಫ್ ಈ ಹಿಂದೆ ಅಂದರೆ ಕಳೆದ ವರ್ಷ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಕಳೆದ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿ ವಿವಾದಕ್ಕೀಡಾಗಿದ್ದರು.

ಆದಾಗ್ಯೂ ಅವರಿಗೆ ಒಲಿಂಪಿಕ್ಸ್​ನಲ್ಲಿ ಅವಕಾಶ ಕೊಟ್ಟಿರುವುದು ವಿವಾದ ಹುಟ್ಟುಹಾಕಿದೆ. 25 ವರ್ಷದ ಖೆಲಿಫಾ ಅವರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗಿದೆ ಎಂದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಇದು ಪುರುಷರ ದೇಹದಲ್ಲಿರುವ ಅಂಶವಾಗಿದೆ.

ಶುಕ್ರವಾರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಖೇಲಿಫ್ ಮತ್ತು ತೈವಾನ್ ನ ಲಿನ್ ಯು-ಟಿಂಗ್ ಕಳೆದ ವರ್ಷ ವಿಶ್ವ ಚಾಂಪಿಯನ್ ಶಿಪ್ ಗೆ ಅನರ್ಹರಾಗಿದ್ದರು ಆದರೆ ಪ್ಯಾರಿಸ್ ನಲ್ಲಿ ನಡೆದ ಮಹಿಳಾ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ಕೊಡಲಾಗಿದೆ. ಟೆಸ್ಟೋಸ್ಟೆರಾನ್ ಮಟ್ಟದ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ನಂತರ 25 ವರ್ಷದ ಖೇಲಿಫ್ ಅವರನ್ನು ಅನರ್ಹಗೊಳಿಸಲಾಗಿತ್ತು.

Angela Carini vs Imane Khelif
Paris Olympics 2024: ಒಲಿಂಪಿಕ್ಸ್ ಗೆ ಮತ್ತೆ Covid ಭೀತಿ; ಬೆಳ್ಳಿ ಪದಕ ಗೆದ್ದ ಈಜು ಪಟುವಿಗೆ ಸೋಂಕು!

ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಬಾಕ್ಸರ್

ಇನ್ನು ಹಾಲಿ ಕ್ರೀಡಾಕೂಟದಲ್ಲಿ ಮಹಿಳೆಯರ 66 ಕೆ.ಜಿ ವಿಭಾಗದಲ್ಲಿ ಖೇಲಿಫ್ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದ್ದರು. ಈ ಪಂದ್ಯದಲ್ಲಿ ಇಟಲಿಯ ಕ್ಯಾರಿನಿ ಅವರ ವಿರುದ್ಧ ಸೆಣಸಿದ್ದು, ಕ್ಯಾರಿನಿ ಮೂಗಿಗೆ ಕೊಟ್ಟ ಪಂಚ್ ಅವರನ್ನು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿತು. ಅವರು ತಕ್ಷಣ ಸ್ಪರ್ಧೆಯನ್ನು ನಿಲ್ಲಿಸಲು ಮನವಿ ಮಾಡಿದರು.

ಇದೀಗ ಇದೇ ''ಪುರುಷ'' ಬಾಕ್ಸರ್ ನೊಂದಿಗೆ ತಮ್ಮ ಪಂದ್ಯ ಆಯೋಜನೆ ಮಾಡಿರುವುದಕ್ಕೆ ಇಟಲಿಯ Angela Carini ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ವೇದಿಕೆಯಲ್ಲೇ ತಮಗಾದ ಅನ್ಯಾಯದ ಕುರಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಹಿಳಾ ಬಾಕ್ಸರ್ ಜೊತೆ ಪುರುಷ ಸ್ಪರ್ಧಿಗೆ ಅವಕಾಶ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ ನಾನು ಅಗಲಿರುವ ತಂದೆಗಾಗಿ ಇಲ್ಲಿ ಸ್ಪರ್ಧೆಗೆ ಬಂದಿದ್ದೆ. ಆದರೆ, ಇದು ಅನ್ಯಾಯ. ಪುರುಷ ಸ್ಪರ್ಧಿಯ ಪಂಚ್ ಎದುರಿಸುವುದು ಅಸಾಧ್ಯ ಎಂದು ಕ್ಯಾರಿನಿ ಹೇಳಿಕೊಂಡಿದ್ದಾರೆ.

ಇಟಲಿ ಪ್ರಧಾನಿ ಮೆಲೋನಿ ಅಸಮಾಧಾನ

ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, 'ಇದು ಸರಿಯಾದ ರೀತಿಯ ಸ್ಪರ್ಧೆಯಲ್ಲ. ಪುರುಷ ಆನುವಂಶಿಕ ಗುಣಲಕ್ಷಣಗಳನ್ನು ಹೊಂದಿರುವ ಕ್ರೀಡಾಪಟುಗಳನ್ನು ಮಹಿಳಾ ಸ್ಪರ್ಧೆಗಳಿಗೆ ಸೇರಿಸಬಾರದು ಎಂದು ನಾನು ಭಾವಿಸುತ್ತೇನೆ. ಮಹಿಳೆಯರ ಮೇಲಿನ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ವರದಿಗಾರ ರೀಮ್ ಅಲ್ಸಲೇಮ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. . ಕ್ಯಾರಿನಿ ಮತ್ತು ಇತರ ಮಹಿಳಾ ಕ್ರೀಡಾಪಟುಗಳು ದೈಹಿಕ ಮತ್ತು ಮಾನಸಿಕ ಹಿಂಸೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಪದಕದತ್ತ ನನ್ನ ಚಿತ್ತ

ಇನ್ನು ವಿವಾದದ ಬೆನ್ನಲ್ಲೇ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖೇಲಿಫ್, “ಅಂತಹ ಪ್ರಮುಖ ಸ್ಪರ್ಧೆಯಲ್ಲಿ ಗೆಲ್ಲುವುದು ಯಾವಾಗಲೂ ತೃಪ್ತಿಕರವಾಗಿದೆ, ಆದರೆ ನಾನು ಪದಕದ ಗುರಿಯತ್ತ ಗಮನ ಹರಿಸಿದ್ದೇನೆ” ಎಂದು ಹೇಳಿದ್ದಾರೆ. ಅಂತೆಯೇ ಖೇಲಿಫ್ ಬೆನ್ನಿಗೆ ನಿಂತಿರುವ ಅಲ್ಜೀರಿಯಾದ ಒಲಿಂಪಿಕ್ ಸಮಿತಿ (ಸಿಒಎ) “ನಮ್ಮ ಅಥ್ಲೀಟ್ ಇಮಾನೆ ಖೇಲಿಫ್ ವಿರುದ್ಧ ಕೆಲವು ವಿದೇಶಿ ಮಾಧ್ಯಮಗಳು ದುರುದ್ದೇಶಪೂರಿತ ಮತ್ತು ಅನೈತಿಕ ದಾಳಿಗಳನ್ನು ನಡೆಸಿವೆ” ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com