ಪ್ಯಾರಿಸ್: Imane Khelif ಪ್ರಕರಣದ ಬೆನ್ನಲ್ಲೇ Paris Olympics 2024 ಮತ್ತೊಂದು ವಿವಾದ ಅಂತಹುದೇ ವಿವಾದ ಕೇಳಿಬಂದಿದ್ದು, ''ಪುರುಷ'' ಸ್ಪರ್ಧಿ ವಿರುದ್ಧ ಸೋತು ಮಹಿಳಾ ಬಾಕ್ಸರ್ ಕಣ್ಣೀರು ಹಾಕಿದ ಘಟನೆ ವರದಿಯಾಗಿದೆ.
ಹೌದು.. ಈ ಹಿಂದೆ ಮಹಿಳೆಯರ 66 ಕೆಜಿ ವಿಭಾಗದ ಬಾಕ್ಸಿಂಗ್ ವಿಭಾಗದ ಪಂದ್ಯದಲ್ಲಿ ಜೈವಿಕ ಪುರುಷ ಎನ್ನಲಾಗಿದ್ದ ಅಲ್ಜೇರಿಯಾದ Imane Khelif ಇಟಲಿಯ ಮಹಿಳಾ ಸ್ಪರ್ಧಿ Angela Carini ವಿರುದ್ಧ ಗೆದ್ದ ವಿವಾದ ಹಸಿರಾಗಿರುವಂತೆಯೇ ಇತ್ತ ಅದೇ ರೀತಿಯ ಮತ್ತೊಂದು ವಿವಾದ ವರದಿಯಾಗಿದೆ.
ತೈವಾನ್‌ನ ಲಿನ್ ಯು-ಟಿಂಗ್ (Lin Yu‑ting) ಅವರು ಉಜ್ಬೇಕಿಸ್ತಾನ್‌ನ ಸಿಟೊರಾ ತುರ್ಡಿಬೆಕೊವಾ ಅವರನ್ನು ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸೋಲಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಸೆಣಸಿದ್ದ Lin Yu‑ting ಬಯಾಲಿಕಲ್ ಮೇಲ್ (biological male) ಅಥವಾ ಜೈವಿಕ ಪುರುಷ ಎಂಬ ಆರೋಪ ಕೇಳಿಬಂದಿದೆ.
ಇನ್ನು ಪಂದ್ಯದ ಬಳಿಕ ಭಾವುಕರಾಗಿದ್ದ ಉಜ್ಬೇಕಿಸ್ತಾನ್‌ನ ಸಿಟೊರಾ ತುರ್ಡಿಬೆಕೊವಾ ಅವರ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಮಹಿಳಾ ಸ್ಪರ್ಧಿ Angela Carini ಸಿಟೊರಾ ತುರ್ಡಿಬೆಕೊವಾ ಅವರ ಬೆನ್ನಿಗೆ ನಿಂತರು. ''ಎಲ್ಲಾ ವಿವಾದಗಳು ನನಗೆ ದುಃಖವನ್ನುಂಟುಮಾಡಿದವು ಮತ್ತು ನನ್ನ ಎದುರಾಳಿಯ ಬಗ್ಗೆಯೂ ನಾನು ವಿಷಾದಿಸುತ್ತೇನೆ. ಅವಳು ನನ್ನಂತೆಯೇ ಹೋರಾಡಲು ಇಲ್ಲಿದ್ದಾಳೆ ಎಂದು ಕ್ಯಾರಿನಿ ಬೆಂಬಲ ಸೂಚಿಸಿದರು.
ಪುರುಷ XY ಕ್ರೋಮೋಸೋಮ್‌ಗಳನ್ನು ಹೊಂದಿದ್ದಕ್ಕಾಗಿ ಲಿನ್ ಅವರನ್ನು ಕೂಡ ಈ ಹಿಂದೆ 2023 ರ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ನಿರ್ಬಂಧಿಸಲಾಗಿತ್ತು.
ಹಾಲಿ ಕ್ರೀಡಾಕೂಟದಲ್ಲಿ ಮಹಿಳಾ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪುರುಷ ಸ್ಪರ್ಧಿ ಸ್ಪರ್ಧೆ ಮಾಡುತ್ತಿರುವ 2ನೇ ಪ್ರಕರಣ ಇದಾಗಿದೆ. ಆದರೆ ಆಯೋಜಕರು ಮಾತ್ರ ಈ ವಿವಾದವನ್ನು ಅಲ್ಲಗಳೆದಿದ್ದಾರೆ.
Advertisement