Paris Olympics 2024: ಮಹಿಳೆಯರ ಟೇಬಲ್ ಟೆನ್ನಿಸ್; ರೊಮೇನಿಯಾ ವಿರುದ್ಧ ಭಾರತಕ್ಕೆ 3-2 ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.
ಮನಿಕಾ ಬಾತ್ರಾ
ಮನಿಕಾ ಬಾತ್ರಾ
Updated on

ಪ್ಯಾರಿಸ್: ಸೋಮವಾರ ಇಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಟೇಬಲ್ ಟೆನಿಸ್ ಪಂದ್ಯದಲ್ಲಿ ರೋಚಕ ಟೈ ಆಗಿದ್ದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಮೇಲುಗೈ ಸಾಧಿಸಿದ ಸ್ಟಾರ್ ಆಟಗಾರ್ತಿ ಮನಿಕಾ ಬಾತ್ರಾ ನೇತೃತ್ವದ ಭಾರತ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು.

ಭಾರತ ತಂಡ ಆರಂಭದಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿತ್ತು. ಆಗ ಮರು ಹೋರಾಟ ನೀಡಿದ ರೊಮೇನಿಯಾ 2-2ರಿಂದ ಸಮಬಲ ಸಾಧಿಸಿತ್ತು. ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮನಿಕಾ ತನ್ನ ತಂಡಕ್ಕೆ ಗೆಲುವು ತಂದುಕೊಟ್ಟರು.

ಡಬಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಆಡಿನಾ ಡಯಾಕೋನು ಮತ್ತು ಎಲಿಜಬೆಟಾ ಸಮರಾ ವಿರುದ್ಧ 11-9 12-10 11-7 ಅಂತರದಲ್ಲಿ ಗೆಲುವು ಸಾಧಿಸಿದರು.

ಆನಂತರ ಮಣಿಕಾ ಅವರು ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಬರ್ನಾಡೆಟ್ ಸಾಕ್ಸ್ರನ್ನು 11-5, 11-7, 11-7 ನೇರ ಗೇಮ್ ಗಳ ಅಂತರದಿಂದ ಸೋಲಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು

ಯುರೋಪಿಯನ್ ಚಾಂಪಿಯನ್ ಎಲಿಝಬೆಟಾ ಸಮರಾ ವಿರುದ್ಧ 2-3( 11-8, 4-11, 11-7, 6-11, 8-11) ಅಂತರದಿಂದ ಸೋತರು. ಶ್ರೀಜಾ ಅವರ ಸೋಲು ಅರ್ಚನಾ ಮತ್ತು ಬರ್ನಾಡೆಟ್ ನಡುವಿನ ಮುಖಾಮುಖಿಗೆ ದಾರಿ ಮಾಡಿಕೊಟ್ಟಿತು. ಅರ್ಚನಾ ಕಾಮತ್ ಅವರು ಬರ್ನಾಡೆಟ್ ಸಾಕ್ಸ್ ವಿರುದ್ಧ 11-5, 8-11, 11-7, 11-9 ಸೆಟ್‌ಗಳಿಂದ ಸೋತರು. ನಂತರ ಬರ್ನಾಡೆಟ್ ಮುಂದಿನ ಎರಡು ಗೇಮ್‌ಗಳನ್ನು 11-7 11-9 ರಿಂದ ಗೆದ್ದು ಪಂದ್ಯವನ್ನು ಟೈ ಹಂತಕ್ಕೆ ತಂದರು.

ಮನಿಕಾ ಬಾತ್ರಾ
Paris Olympics 2024: ಹಾಕಿ ಚಿನ್ನಕ್ಕಾಗಿ ಹೋರಾಟ; ಸೆಮಿಸ್‌ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ದ ಭಾರತ ಸೆಣಸು!

ನಿರ್ಣಾಯಕ ಪಂದ್ಯದಲ್ಲಿ ತಂಡವನ್ನು ಸೆಮೀಸ್‌ಗೆ ಕೊಂಡೊಯ್ಯುವ ಹೊರೆ ಮನಿಕಾ ಅವರ ಹೆಗಲ ಮೇಲಿತ್ತು. ಆಗ ಮನಿಕಾ ಅವರು ಆಡಿನಾ ಡಿಯಾಕೋನುರನ್ನು 3-0( 11-5, 11-9, 11-9) ಅಂತರದಿಂದ ಮಣಿಸಿ ಭಾರತಕ್ಕೆ 3-2ಅಂತರದ ರೋಚಕ ಗೆಲುವು ತಂದುಕೊಟ್ಟರು. ಭಾರತ ತಂಡ ಮುಂದಿನ ಸುತ್ತಿನಲ್ಲಿ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಲಿರುವ ಅಮೆರಿಕ ಅಥವಾ ಜರ್ಮನಿ ತಂಡವನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com