
ಪ್ಯಾರಿಸ್: ಪುರುಷರ ಕುಸ್ತಿ ವಿಭಾಗದಲ್ಲಿ ಸೆಮಿ ಫೈನಲ್ಸ್ ಪ್ರವೇಶಿಸಿ ಭರವಸೆ ಮೂಡಿಸಿದ್ದ ಅಮಾನ್ ಸೆಹ್ರಾವತ್ ಸೆಮೀಸ್ ನಲ್ಲಿ ಮುಗ್ಗರಿಸಿದ್ದಾರೆ.
ಜಪಾನ್ ಕುಸ್ತಿ ಪಟು ರೆಯಿ ಹಿಗುಚಿ ಅಮಾನ್ ಸೆಹ್ರಾವತ್ ನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. 10-0 ಅಂತರದಿಂದ ಜಪಾನ್ ಕುಸ್ತಿ ಪಟು ಹಿಗುಚಿ ಗೆಲುವು ಸಾಧಿಸಿದ್ದಾರೆ. ಸೆಮೀಸ್ ನಲ್ಲಿ ಸೋತರೂ ಕಂಚಿನ ಪದಕಕ್ಕಾಗಿ ಶುಕ್ರವಾರದಂದು ಅಮಾನ್ ಮತ್ತೊಂದು ಪಂದ್ಯ ಎದುರಿಸಲಿದ್ದಾರೆ.
ಮುಂದಿನ ಪಂದ್ಯದಲ್ಲಿ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಎದುರಿಸಲಿದ್ದಾರೆ. ಕ್ರೂಜ್ ಈ ಹಿಂದಿನ ಪಂದ್ಯದಲ್ಲಿ ಹಿಗುಚಿ ವಿರುದ್ಧ ಸೋತಿದ್ದರು.
ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21 ವರ್ಷದ ಅಮನ್ ಅವರು ಮಾಜಿ ವಿಶ್ವ ಚಾಂಪಿಯನ್ ಅಲ್ಬೇನಿಯಾದ ಜೆಲಿಮ್‌ಖಾನ್ ಅಬಕರೊವ್ (Zelimkhan Abkarov) ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಗಳಿಸಿದ್ದರು.
Advertisement