Copa America Final: ಕೊಲಂಬಿಯಾ ವಿರುದ್ಧ ಅರ್ಜೆಂಟಿನಾಗೆ ವಿರೋಚಿತ ಗೆಲುವು, ದಾಖಲೆಯ 16ನೇ ಬಾರಿಗೆ ಪ್ರಶಸ್ತಿ!

Copa America ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಅರ್ಜೆಂಟಿನಾ 1-0 ಗೋಲಿನ ಅಂತರದ ವಿರೋಚಿತ ಗೆಲುವು ಸಾಧಿಸಿದ್ದು, ಆ ಮೂಲಕ ದಾಖಲೆಯ 16ನೇ ಬಾರಿಗೆ ಪ್ರಶಸ್ತಿ ಜಯಿಸಿದೆ.
Copa America 2024 final
ಕೊಪಾ ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನಾ
Updated on

ಫ್ಲೋರಿಡಾ: Copa America ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಅರ್ಜೆಂಟಿನಾ 1-0 ಗೋಲಿನ ಅಂತರದ ವಿರೋಚಿತ ಗೆಲುವು ಸಾಧಿಸಿದ್ದು, ಆ ಮೂಲಕ ದಾಖಲೆಯ 16ನೇ ಬಾರಿಗೆ ಪ್ರಶಸ್ತಿ ಜಯಿಸಿದೆ.

ಸೋಮವಾರ ಬೆಳಗ್ಗೆ ನಡೆದ ಕೊಪಾ ಅಮೆರಿಕ(Copa America Final) ಫುಟ್‌ಬಾಲ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಅರ್ಜೆಂಟೀನಾ ತಂಡ ಕೊಲಂಬಿಯಾ (Argentina vs Colombia) ವಿರುದ್ಧ 1-0 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟವನ್ನು ಉಳಿಸಿಕೊಂಡಿದೆ.

Copa America 2024 final
''ನೀವು ಟಚ್ ಕೂಡ ಮಾಡಲು ಸಾಧ್ಯವಿಲ್ಲ'': ಬೂಯಿಂಗ್ ಮಾಡಿದ ಪ್ರೇಕ್ಷಕರಿಗೆ ಬೆವರಿಳಿಸಿದ Novak Djokovic

ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

ಇನ್ನು ಈ ಫೈನಲ್ ಪಂದ್ಯದ ನಿರ್ಣಾಯಕ ಘಟದಲ್ಲಿ ತಂಡದ ಪ್ರಮುಖ ಆಟಗಾರ ಲಿಯೋನಲ್ ಮೆಸ್ಸಿ ಗಾಯಗೊಂಡು ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು. ಈ ವೇಳೆ ಮೆಸ್ಸಿ ಬಿಕ್ಕಿ ಬಿಕ್ಕಿ ಅತ್ತರು. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮೆಸ್ಸಿ ಅನುಪಸ್ಥಿತಿಯಲ್ಲಿ ಕೊಲಂಬಿಯಾಗೆ ಗೋಲು ಗಳಿಸುವ ಸುವರ್ಣಾವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೇ ಭಯ ಕೂಡ ಮೆಸ್ಸಿಗೂ ಇತ್ತು. ಇದೇ ಕಾರಣಕ್ಕೆ ಅವರು ಡಗೌಟ್ ನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಸ್ವತಃ ಕೋಚ್ ಎಷ್ಟೇ ಸಮಾಧಾನ ಪಡಿಸಿದರೂ ಮೆಸ್ಸಿ ಸಮಾಧಾನವಾಗಲಿಲ್ಲ. ಅಂತಿಮವಾಗಿ ತಂಡ ಗೆಲುವು ಸಾಧಿಸಿದ ಬಳಿಕ ಮೆಸ್ಸಿ ಸಂಭ್ರಮಕ್ಕೆ ಕೊನೆಯೇ ಇರಲಿಲ್ಲ.

Copa America 2024 final
ಮೆಸ್ಸಿ ಜನ್ಮ ದಿನದ ಸ್ಪೆಷಲ್- ಮೆಸ್ಸಿ ಮ್ಯಾಜಿಕಲ್ ಸ್ಕಿಲ್ಸ್..!
Copa America 2024 final
Euro 2024 final: ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, 4ನೇ ಬಾರಿಗೆ ಪ್ರಶಸ್ತಿ ಗೆದ್ದ ಸ್ಪೇನ್!

ಗೆಲುವಿನ ಗೋಲು ಭಾರಿಸಿದ ಲೌಟಾರೊ ಮಾರ್ಟಿನೆಜ್‌

ಎರಡನೇ ಹೆಚ್ಚುವರಿ ಅವಧಿಯಲ್ಲಿ ಅರ್ಜೆಂಟೀನಾ ತಂಡದ ಲೌಟಾರೊ ಮಾರ್ಟಿನೆಜ್‌ ಅವರು ಗೋಲು ಬಾರಿಸಿದರು. ಈ ಬಳಿಕ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮಾರ್ಟಿನೆಜ್‌ ಅವರ ಏಕೈಕ ಗೋಲು ಅರ್ಜೆಂಟೀನಾಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿತು. 23 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಆಡಲಿಳಿದಿದ್ದ ಕೊಲಂಬಿಯಾಗೆ ನಿರಾಸೆಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com