ಲಿಮಾ: ಪೆರು ದೇಶದ ಸ್ಥಳೀಯ ಫುಟ್ಬಾಲ್ ಟೂರ್ನಿ ವೇಳೆ ಮೈದಾನಕ್ಕೆ ಸಿಡಿಲು ಬಡಿದ ಕಾರಣ ಓರ್ವ ಆಟಗಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರು ತೀವ್ರ ಗಾಯಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಪೆರುವಿನ ಹುವಾನ್ಕಾಯೊದ ಚಿಲ್ಕಾದಲ್ಲಿನ ಕೊಟೊ ಕೊಟೊ ಕ್ರೀಡಾಂಗಣಗದಲ್ಲಿ ಈ ಘಟನೆ ನಡೆದಿದ್ದು, ಸಿಡಿಲು ಬಡಿಯುತ್ತಲೇ ಮೈದಾನದಲ್ಲಿದ್ದ 5 ಮಂದಿ ಆಟಗಾರರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಈ ಪೈಕಿ 39 ವರ್ಷದ ಜೋಸ್ ಹ್ಯುಗೊ ಡೆ ಲಾ ಕ್ರೂಜ್ ಮೆಸಾ ಸಾವನ್ನಪ್ಪಿದ್ದು, ದುರದೃಷ್ಟವಶಾತ್ ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಅಂತೆಯೇ ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಆಟಗಾರರು ಮೈದಾನದಲ್ಲಿದ್ದಾಗ ಸಿಡಿಲು ಬಡಿದಿದ್ದು, ಜೋಸ್ ಸೇರಿ ಹಲವು ಆಟಗಾರರು ಕುಸಿದು ಬಿದ್ದಿದ್ದಾರೆ. ಗಾಯಗೊಂಡ ಆಟಗಾರರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲು ಬಡಿದು ಆಟಗಾರರು ಕುಸಿದು ಬೀಳುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಸಿಡಿಲಿನ ಶಾಕಕ್ಕೆ ತೀವ್ರ ಗಾಯಗೊಂಡರವನ್ನು ಎರಿಕ್ ಎಸ್ಟಿವಿನ್, ಜೋಸೆಫ್ ಗುಸ್ಟಾವೊ ಹಾಗೂ ಕ್ರಿಸ್ಟಿಯಾನ್ ಸೀಸರ್ ಎಂದು ಗುರುತಿಸಲಾಗಿದೆ. ಈ ಎಲ್ಲರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ. ಇನ್ನು ಸ್ಥಳೀಯ ವರದಿಯ ಪ್ರಕಾರ ಗೋಲ್ ಕೀಪರ್ ಜಾನ್ ಚೊಚ್ಚಾ ಲಾಕ್ಟ ಅವರ ಪರಿಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
Advertisement