ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ರಫೆಲ್ ನಡಾಲ್!

23 ವರ್ಷಗಳ ಟೆನಿಸ್ ವೃತ್ತಿ ಬದುಕಿನಲ್ಲಿ ನಡಾಲ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಈ ಪೈಕಿ 14 ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ.
Rafael Nadal
ರಫೆಲ್ ನಡಾಲ್
Updated on

ಸ್ಪೇನ್ : 'ಕಿಂಗ್ ಆಫ್ ಕ್ಲೇ' ಎಂದೇ ಜನಪ್ರಿಯರಾಗಿದ್ದ ಸ್ಪೇನ್ ನ ಟೆನಿಸ್ ದಿಗ್ಗಜ ರಫೆಲ್ ನಡಾಲ್, ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಡೇವಿಸ್ ಕಪ್ ನಲ್ಲಿ ಸ್ಪೇನ್ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದ ನಡಾಲ್, ಕೊನೆಯ ಸಿಂಗಲ್ಸ್ ನಲ್ಲಿ ನೆದರ್ಲೆಂಡ್ಸ್ ನ ಬೋಟಿಕ್ ವ್ಯಾನ್ ಡೆ ಝಾಂಡ್ ಸ್ಕಲ್ ವಿರುದ್ಧ 6-4, 6-4ರ ಅಂತರದಲ್ಲಿ ಸೋತರು. ಇದರೊಂದಿಗೆ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ನಲ್ಲಿ ಸೋತ ಸ್ಪೇನ್ ಹೋರಾಟವೂ ಅಂತ್ಯಗೊಂಡಿತು.

ಮತ್ತೊಂದು ಸಿಂಗಲ್ಸ್ ನಲ್ಲಿ ಕಾರ್ಲೊಸ್ ಅಲ್ಕರಾಜ್ ಗೆದ್ದರೂ ಡಬಲ್ಸ್ ನಲ್ಲಿ ಸೋತಿರುವುದು ಸ್ಪೇನ್ ಗೆ ಹಿನ್ನಡೆಯಾಗಿ, 1-2 ಅಂತರದಲ್ಲಿ ಸೋಲಿಗೆ ಶರಣಾಯಿತು. ಈ ಸೋಲಿನ ಬೆನ್ನಲ್ಲೇ ಟೆನಿಸ್ ವೃತ್ತಿ ಜೀವನಕ್ಕೆ ನಡಾಲ್ ವಿದಾಯ ಹೇಳಿದ್ದಾರೆ.

Rafael Nadal
ಗೆಳತಿ ಕ್ಸಿಸ್ಕಾ ಪೆರೆಲ್ಲೊರನ್ನು ವರಿಸಿದ ಟೆನಿಸ್ ಚಾಂಪಿಯನ್ ರಫೆಲ್ ನಡಾಲ್ 

23 ವರ್ಷಗಳ ಟೆನಿಸ್ ವೃತ್ತಿ ಬದುಕಿನಲ್ಲಿ ನಡಾಲ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಈ ಪೈಕಿ 14 ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡಾಲ್ ಅವರನ್ನು ಅವರ ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com