ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಮಹಿಳೆಯರ 400 ಮೀಟರ್ ಓಟದಲ್ಲಿ ದೀಪ್ತಿ ಜೀವಾಂಜಿ (Deepthi Jeevanji) ಕಂಚಿನ ಪದಕ ಜಯಿಸಿದ್ದಾರೆ.
ಹೌದು.. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 16ನೇ ಪದಕ ಲಭಿಸಿದ್ದು, ಮಹಿಳೆಯರ 400 ಮೀಟರ್ ಓಟದಲ್ಲಿ , ದೀಪ್ತಿ ಜೀವಾಂಜಿ ಕಂಚಿ ಪದಕಕ್ಕೆ ಭಾಜನರಾಗಿದ್ದಾರೆ. ಅಂತೆಯೇ ಇದು ಅವರ ಮೊದಲ ಪ್ಯಾರಾಲಿಂಪಿಕ್ ಪದಕವಾಗಿದೆ.
ಅಂತೆಯೇ ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಭಾರತಕ್ಕೆ 3ನೇ ಪದಕವಾಗಿದೆ, ಇದಕ್ಕೂ ಮುನ್ನ ಪ್ರೀತಿ ಪಾಲ್ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಈ ಪದಕದೊಂದಿಗೆ ಭಾರತ 16 ಪದಕಗಳನ್ನು ಗೆದ್ದು ಪ್ರಸ್ತುತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.
2024 ರ ವಿಶ್ವ ಚಾಂಪಿಯನ್ ದೀಪ್ತಿ ಜೀವಾಂಜಿ ಎಂಟು ಅಥ್ಲೀಟ್‌ಗಳ ನಡುವೆ 55.82 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕವನ್ನು ಗೆದ್ದರು. ಇದೇ ತಿಂಗಳು 21ನೇ ವರ್ಷಕ್ಕೆ ಕಾಲಿಡಲಿರುವ ದೀಪ್ತಿ, ಉಕ್ರೇನ್‌ನ ಯುಲಿಯಾ ಶುಲ್ಯಾರ್ (55.16 ಸೆಕೆಂಡ್‌ಗಳು) ಮತ್ತು ವಿಶ್ವ ದಾಖಲೆ ಹೊಂದಿರುವ ಟರ್ಕಿಯ ಅಯ್ಸೆಲ್ ಒಂಡರ್ (55.23 ಸೆಕೆಂಡುಗಳು) ನಂತರ ಮೂರನೇ ಸ್ಥಾನ ಪಡೆದರು.
ಭಾರತದ ಹೈದರಾಬಾದ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿರುವ ದೀಪ್ತಿ ಜೀವಾಂಜಿ ಕಳೆದ ವರ್ಷ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ 2023 ರಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಈ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 16ಕ್ಕೇರಿದೆ. ಈ ಪೈಕಿ 3 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳು ಸೇರಿವೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತದ ಪದಕ ವಿಜೇತರು
1. ಅವನಿ ಲೆಖರಾ (ಶೂಟಿಂಗ್) – ಚಿನ್ನದ ಪದಕ, ಮಹಿಳೆಯರ 10 ಮೀ ಏರ್ ರೈಫಲ್ (SH1)
2. ಮೋನಾ ಅಗರ್ವಾಲ್ (ಶೂಟಿಂಗ್) – ಕಂಚಿನ ಪದಕ, ಮಹಿಳೆಯರ 10 ಮೀಟರ್ ಏರ್ ರೈಫಲ್ (SH1)
3. ಪ್ರೀತಿ ಪಾಲ್ (ಅಥ್ಲೆಟಿಕ್ಸ್) – ಕಂಚಿನ ಪದಕ, ಮಹಿಳೆಯರ 100 ಮೀಟರ್ ಓಟ (T35)
4. ಮನೀಶ್ ನರ್ವಾಲ್ (ಶೂಟಿಂಗ್) – ಬೆಳ್ಳಿ ಪದಕ, ಪುರುಷರ 10 ಮೀ ಏರ್ ಪಿಸ್ತೂಲ್ (SH1)
5. ರುಬಿನಾ ಫ್ರಾನ್ಸಿಸ್ (ಶೂಟಿಂಗ್) – ಕಂಚಿನ ಪದಕ, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (SH1)
6. ಪ್ರೀತಿ ಪಾಲ್ (ಅಥ್ಲೆಟಿಕ್ಸ್) – ಕಂಚಿನ ಪದಕ, ಮಹಿಳೆಯರ 200 ಮೀಟರ್ ಓಟ (T35)
7. ನಿಶಾದ್ ಕುಮಾರ್ (ಅಥ್ಲೆಟಿಕ್ಸ್) – ಬೆಳ್ಳಿ ಪದಕ, ಪುರುಷರ ಹೈ ಜಂಪ್ (T47)
8. ಯೋಗೇಶ್ ಕಥುನಿಯಾ (ಅಥ್ಲೆಟಿಕ್ಸ್) – ಬೆಳ್ಳಿ ಪದಕ, ಪುರುಷರ ಡಿಸ್ಕಸ್ ಥ್ರೋ (F56)
9. ನಿತೀಶ್ ಕುಮಾರ್ (ಬ್ಯಾಡ್ಮಿಂಟನ್) – ಚಿನ್ನದ ಪದಕ, ಪುರುಷರ ಸಿಂಗಲ್ಸ್ (SL3)
10. ಮನೀಶಾ ರಾಮದಾಸ್ (ಬ್ಯಾಡ್ಮಿಂಟನ್) – ಕಂಚಿನ ಪದಕ, ಮಹಿಳೆಯರ ಸಿಂಗಲ್ಸ್ (SU5)
11. ತುಳಸಿಮತಿ ಮುರುಗೇಶನ್ (ಬ್ಯಾಡ್ಮಿಂಟನ್) – ಬೆಳ್ಳಿ ಪದಕ, ಮಹಿಳಾ ಸಿಂಗಲ್ಸ್ (SU5)
12. ಸುಹಾಸ್ ಎಲ್ ಯತಿರಾಜ್ (ಬ್ಯಾಡ್ಮಿಂಟನ್) – ಬೆಳ್ಳಿ ಪದಕ, ಪುರುಷರ ಸಿಂಗಲ್ಸ್ (SL4)
13. ಶೀತಲ್ ದೇವಿ-ರಾಕೇಶ್ ಕುಮಾರ್ (ಆರ್ಚರಿ) - ಕಂಚಿನ ಪದಕ, ಮಿಶ್ರ ಸಂಯುಕ್ತ ಓಪನ್
14. ಸುಮಿತ್ ಆಂಟಿಲ್ (ಅಥ್ಲೆಟಿಕ್ಸ್) – ಚಿನ್ನದ ಪದಕ, ಪುರುಷರ ಜಾವೆಲಿನ್ ಥ್ರೋ (ಎಫ್64 ವಿಭಾಗ)
15. ನಿತ್ಯ ಶ್ರೀ ಶಿವನ್ (ಬ್ಯಾಡ್ಮಿಂಟನ್) – ಕಂಚಿನ ಪದಕ, ಮಹಿಳಾ ಸಿಂಗಲ್ಸ್ (SH6)
16. ದೀಪ್ತಿ ಜೀವನಜಿ (ಅಥ್ಲೆಟಿಕ್ಸ್) – ಕಂಚಿನ ಪದಕ, ಮಹಿಳೆಯರ 400 ಮೀ (ಟಿ20)
Advertisement