Paralympics 2024: ಇತಿಹಾಸ ಬರೆದ Harvinder Singh, ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ!

ಬುಧವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
Harvinder Singh
ಹರ್ವಿಂದರ್ ಸಿಂಗ್
Updated on

ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳ ಅಮೋಘ ಪ್ರದರ್ಶನ ಮುಂದುವರೆದಿದ್ದು, ಆರ್ಚರಿಯಲ್ಲಿ ಭಾರತದ ಅಥ್ಲೀಟ್ ಹರ್ವಿಂದರ್ ಸಿಂಗ್ ಫೈನಲ್ ನಲ್ಲಿ ಅಗ್ರ ಸ್ಥಾನ ಪಡೆದು ಚಿನ್ನದ ಪದಕ ಸಾಧನೆ ಮಾಡಿದ್ದಾರೆ.

ಬುಧವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದು ಭರವಸೆ ಮೂಡಿಸಿದ್ದ ಆರ್ಚರಿ ಅಥ್ಲೀಟ್‌ ಹರ್ವಿಂದರ್‌ ಸಿಂಗ್‌ ಸ್ಥಿರ ಪ್ರದರ್ಶನ ನೀಡಿದ್ದಾರೆ.

Harvinder Singh
Paralympics 2024: ಭಾರತಕ್ಕೆ ಮತ್ತೊಂದು ಪದಕ, 400 ಮೀಟರ್ ಓಟದಲ್ಲಿ Deepthi Jeevanji ಗೆ ಕಂಚು!

ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಆರ್ಚರಿಯಲ್ಲಿ ಮೊದಲ ಚಿನ್ನ

ಈ ಮೂಲಕ ಭಾರತ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ಮೊದಲ ಬಂಗಾರದ ಸಾಧನೆಯನ್ನು ಮಾಡಿದೆ. ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಹರ್ವಿಂದರ್ ಸಿಂಗ್‌, ಪೋಲೆಂಡ್‌ನ ಲುಕಾಸ್ ಸಿಸ್ಜೆಕ್ ಆಟಗಾರನನ್ನು ಸೋಲಿಸಿದರು. ಪದಕದ ಸುತ್ತಿನ ಪಂದ್ಯದಲ್ಲಿ ಹರ್ವಿಂದರ್ 28-24, 28-27, 29-25 ರಿಂದ ಪೋಲೆಂಡ್‌ ಆಟಗಾರನನ್ನು ಮಣಿಸಿ, 6-0ಯಿಂದ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಭಾರತಕ್ಕೆ 22 ಪದಕ

ಹರ್ವಿಂದರ್ ಸಿಂಗ್ ಆರ್ಚರಿಯಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರೊಂದಿಗೆ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತವು 22 ಪದಕಗಳನ್ನು ಪಡೆದು ದಾಖಲೆ ಬರೆದಿದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಇದುವರೆಗಿನ ಭಾರತದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಭಾರತ 4 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಗೆದ್ದಿದ್ದು ಈ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com