
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ಮಹಿಳಾ ಪಂದ್ಯಾವಳಿಯಿಂದ ಅಮೆರಿಕದ ಫೆನ್ಸರ್ ಸ್ಟೆಫನಿ ಟರ್ನರ್ ಅನರ್ಹಗೊಂಡಿದ್ದಾರೆ. ಏಕೆಂದರೆ ಅವರು ತೃತೀಯಲಿಂಗಿ ಎಂದು ಹೇಳಿದ ಎದುರಾಳಿ ಜೊತೆ ಸ್ಪರ್ಧಿಸಲು ನಿರಾಕರಿಸಿದರು. ಪ್ರತಿಸ್ಪರ್ಧಿ ಜೊತೆ ಸೆಣೆಸಲ್ಲ ಎಂದು ಟರ್ನರ್ ಮಂಡಿಯೂರಿದ ನಂತರ ಅವರಿಗೆ ಕಪ್ಪು ಕಾರ್ಡ್ ತೋರಿಸಿದ್ದು ಮುಂದಿನ ಸುತ್ತುಗಳಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲಾಯಿತು.
"ಈ ವ್ಯಕ್ತಿ ಒಬ್ಬ ಪುರುಷ, ಮತ್ತು ನಾನು ಒಬ್ಬ ಮಹಿಳೆ" ಎಂದು ಟರ್ನರ್ ಹೇಳಿದ್ದಾರೆ. ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್ ಅಥ್ಲೀಟ್‌ಗಳ ಸಮಸ್ಯೆಯು ಅವರನ್ನು ಜೀವಮಾನದ ಡೆಮೋಕ್ರಾಟ್‌ನಿಂದ "ಹೊಸ ರಿಪಬ್ಲಿಕನ್ ಸಂಪ್ರದಾಯವಾದಿ" ಆಗಿ ಪರಿವರ್ತಿಸಿದೆ ಎಂದು ಅವರು ಹೇಳಿದರು. ನಾನು ಏನು ಮಾಡಬೇಕೆಂದು ನನಗೆ ತಿಳಿದಿತ್ತು. ಏಕೆಂದರೆ USA ಫೆನ್ಸಿಂಗ್ [ಅಮೆರಿಕದ ಲಿಂಗ ಅರ್ಹತಾ ನೀತಿ] ಬಗ್ಗೆ ಮಹಿಳೆಯರ ಆಕ್ಷೇಪಣೆಗಳನ್ನು ಕೇಳುತ್ತಿಲ್ಲ. ಆ ಸಮಯದಲ್ಲಿ ನಾನು ತಕ್ಷಣ ಮಂಡಿಯೂರಿ ಕುಳಿತೆ. ನಾನು ಫೆನ್ಸಿಂಗ್ ಪ್ರಾರಂಭಿಸುತ್ತೇನೆ ಎಂದು ಅವರು ಭಾವಿಸಿದ್ದರು.
ಹಾಗಾಗಿ ನಾನು ಮಂಡಿಯೂರಿ ಕುಳಿತಾಗ, ನಾನು ರೆಫರಿಯ ಕಡೆಗೆ ನೋಡಿ, 'ಕ್ಷಮಿಸಿ, ನಾನು ಇದನ್ನು ಮಾಡಲು ಸಾಧ್ಯವಿಲ್ಲ. ನಾನು ಒಬ್ಬ ಮಹಿಳೆ, ಆತ ಒಬ್ಬ ಪುರುಷ, ಮತ್ತು ಇದು ಮಹಿಳಾ ಪಂದ್ಯಾವಳಿ. ನಾನು ಈ ವ್ಯಕ್ತಿಯೊಂದಿಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದೆ. ಆ ಸ್ಪರ್ಧಿ ನನ್ನ ಮಾತು ಕೇಳಲಿಲ್ಲ, ನನ್ನ ಬಳಿಗೆ ಬಂದು ಬಹುಶಃ ನನಗೆ ನೋವಾಗಿರಬಹುದು ಅಥವಾ ಏನು ನಡೆಯುತ್ತಿದೆ ಎಂದು ಅವನಿಗೆ ಅರ್ಥವಾಗುತ್ತಿಲ್ಲ ಎಂದು ಅವನು ಭಾವಿಸಿದನು. ಆತ 'ನೀವು ಚೆನ್ನಾಗಿದ್ದೀರಾ?' ಎಂದು ಕೇಳಿದನು. ಅದಕ್ಕೆ ನಾನು 'ಕ್ಷಮಿಸಿ. ನನಗೆ ನಿಮ್ಮ ಮೇಲೆ ತುಂಬಾ ಪ್ರೀತಿ ಮತ್ತು ಗೌರವವಿದೆ, ಆದರೆ ನಾನು ನಿಮ್ಮೊಂದಿಗೆ ಕತ್ತಿ ಮಸೆಯುವುದಿಲ್ಲ' ಎಂದು ಹೇಳಿದೆ.
ಟರ್ನರ್ ಅವರನ್ನು ಫೆನ್ಸಿಂಗ್ ಮಾಡಲು ನಿರಾಕರಿಸಿದ್ದಕ್ಕಾಗಿ ಮಾತ್ರ ಬ್ಲಾಕ್ ಕಾರ್ಡ್ ನೀಡಲಾಗಿದೆಯೇ ಹೊರತು, ಟ್ರಾನ್ಸ್ ಜೆಂಡರ್ ಸೇರ್ಪಡೆಯ ವಿರುದ್ಧದ ಅವರ ನಿಲುವಿನಿಂದಲ್ಲ ಎಂದು ಯುಎಸ್ಎ ಫೆನ್ಸಿಂಗ್ ವಕ್ತಾರರು ಹೇಳಿದ್ದಾರೆ.
Advertisement