

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮತ್ತೊಂದು ಚಾರಿತ್ರಿಕ ಘಟನೆಗೆ ಸಾಕ್ಷಿಯಾಯಿತು. ವಿಶ್ವ ಪುಟ್ ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೊಲ್ಕರ್ ಹಾಗೂ ಭಾರತದ ಫುಟ್ ಬಾಲ್ ದಂತಕಥೆ ಸುನಿಲ್ ಚೆಟ್ರಿ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಬ್ಬವನ್ನುಂಟು ಮಾಡಿದರು.
ಕ್ರೀಡಾಂಗಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಮೆಸ್ಸಿ, ಮೆಸ್ಸಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಸಂಜೆ ಮೆಸ್ಸಿ ಅವರ ಸಹ ಆಟಗಾರರಾದ ಲೂಯಿಸ್ ಸೂರೇಝ್ ಮತ್ತು ರಾಡ್ರಿಗೂ ಡಿ ಪಾಲ್ ಹಾಗೂ ಸಚಿನ್ ಬಂದ ಸೇರುತ್ತಿದ್ದಂತೆಯೇ, ಸಚಿನ್.. ಸಚಿನ್... ಘೋಷಣೆ ಮುಗಿಲು ಮುಟ್ಟಿತು.
'ಗೋಟ್ ಇಂಡಿಯಾ ಟೂರ್-2025' ಕಾರ್ಯಕ್ರಮ ಇಂತಹದ್ದೊಂದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಮೆಸ್ಸಿಯೊಂದಿಗೆ ವೇದಿಕೆ ಹಂಚಿಕೊಂಡ ಸಚಿನ್ ತೆಂಡೊಲ್ಕರ್, ಲಿಯೊನೆಲ್ ಮೆಸ್ಸಿ ಅವರನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಅವರ ಬದ್ಧತೆ, ಶ್ರದ್ಧೆ, ನಿರಂತರ ಪ್ರಯತ್ನಗಳು ಅನುಕರಣೀಯ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿನ್ ತೆಂಡೊಲ್ಕರ್ ಅವರು ತಮ್ಮ ಜೆರ್ಸಿಯನ್ನು ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಅವರಿಗೆ ಉಡುಗೂರೆಯಾಗಿ ನೀಡಿದ್ದಾರೆ. ಬಳಿಕ ಮೆಸ್ಸಿ ಅವರು ಸುನಿಲ್ ಚೆಟ್ರಿ ಅವರೊಂದಿಗೆ ಬಹಳ ಸಮಯದವರೆಗೂ ಮಾತುಕತೆ ನಡೆಸಿದ್ದಾರೆ. ತಮ್ಮ ಪೋಷಾಕನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಐಐಎಫ್ ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್, ಬಾಲಿವುಡ್ ಸ್ಟಾರ್ ಗಳಾದ ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement