
ನವದೆಹಲಿ: ಭಾರತದ ಫುಟ್ಬಾಲ್ ತಾರೆ ಸುನಿಲ್ ಛೆಟ್ರಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ತಮ್ಮ ನಿವೃತ್ತಿ ಹಿಂಪಡೆದಿದ್ದಾರೆ.
ಈ ಬಗ್ಗೆ ಭಾರತೀಯ ಫುಟ್ಬಾಲ್ ಅಸೋಸಿಯೇಷನ್ ಮಾಹಿತಿ ನೀಡಿದ್ದು, ಸುನಿಲ್ ಛೆಟ್ರಿ ತಮ್ಮ ನಿವೃತ್ತಿ ಹಿಂಪಡೆದಿದ್ದಾರೆ. ಶೀಘ್ರದಲ್ಲೇ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದೆ.
ಹೌದು.. ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯ ನಿರ್ಧಾರ ಹಿಂತೆಗೆದುಕೊಂಡಿದ್ದು, ಭಾರತ ತಂಡದ ಈ ಸ್ಟಾರ್ ಫಾರ್ವಡ್ ಆಟಗಾರ ಮತ್ತೊಮ್ಮೆ ನಿಲಿ ಜೆರ್ಸಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಭಾರತ ತಂಡದ ಮುಂದಿನ ವೇಳಾಪಟ್ಟಿಯಾದ ಎಎಫ್‌ಸಿ ಏಷ್ಯನ್ ಕಪ್ ನಲ್ಲಿ ಆಡುವುದನ್ನು ಕಾಣಬಹುದಾಗಿದೆ. 40 ವರ್ಷ ವಯಸ್ಸಿನ ಸುನಿಲ್ ಛೆಟ್ರಿ ಕಳೆದ ವರ್ಷ ಜೂನ್‌ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಸುಮಾರು 8 ತಿಂಗಳ ನಂತರ, ಅವರು ತಮ್ಮ ನಿವೃತ್ತಿ ಹಿಂಪಡೆದಿದ್ದು, ಇದೀಗ ಮತ್ತೆ ತಂಡಕ್ಕೆ ಮರಳುತ್ತಿದ್ದಾರೆ.
ಪ್ರಸ್ತುತ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಭಾರತ ತಂಡ ಮಾರ್ಚ್ 25 ರಂದು ಬಾಂಗ್ಲಾದೇಶ ವಿರುದ್ಧ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅಂಗಳಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ.
ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯಿಂದ ಹಿಂತಿರುಗುತ್ತಿರುವುದು ಏಕೆ ಎಂಬ ಕಾರಣ ಇನ್ನು ತಿಳಿದು ಬಂದಿಲ್ಲ. ಇವರು ಮತ್ತೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲಿದ್ದಾರೆ ಎಂಬುದನ್ನು ಭಾರತೀಯ ಫುಟ್ಬಾಲ್ ಸಂಸ್ಥೆ ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೇಳೆ ಮತ್ತೆ ಛೆಟ್ರಿ ಅಂಗಳಕ್ಕೆ ಮರಳಲಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದೆ.
ಛೆಟ್ರಿ ದಾಖಲೆ
ಅಂದಹಾಗೆ ಸುನಿಲ್ ಚೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ಪ್ರಮುಖ ಆಟಗಾರರಾಗಿದ್ದಾರೆ. ಚೆಟ್ರಿ ಖಾತೆಯಲ್ಲಿ ಸದ್ಯ 94 ಗೋಲುಗಳು ಇವೆ. ಕಳೆದ ವರ್ಷ ಫಿಫಾ ವಿಶ್ವಕಪ್ 2026 ಅರ್ಹತಾ ಸುತ್ತಿನ ಪಂದ್ಯದಲ್ಲಿ ಕುವೈತ್ ವಿರುದ್ಧ 0-0 ಡ್ರಾ ಸಾಧಿಸಿದ ಬಳಿಕ ಛೆಟ್ರಿ ನಿವೃತ್ತಿ ಘೋಷಿಸಿದ್ದರು.
Advertisement