FIFA World Cup 2026: ಸ್ಪೇನ್ v/s ಪೋರ್ಚುಗಲ್ ಪಂದ್ಯಕ್ಕೂ ಮುನ್ನ ಹೊಸ ಬಾಂಬ್ ಹಾಕಿದ ಕ್ರಿಸ್ಟಿಯಾನೊ ರೊನಾಲ್ಡೊ!

ಪಂದ್ಯಾವಳಿಯಲ್ಲಿ ಪೋರ್ಚುಗಲ್ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಮೂರು ಗೋಲುಗಳನ್ನು ಗಳಿಸಿದ್ದಾರೆ. ನಿವೃತ್ತಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೊನಾಲ್ಡ್, ರಾಷ್ಟ್ರೀಯ ತಂಡಕ್ಕೆ ಸಹಾಯ ಮಾಡುವತ್ತ ಮಾತ್ರ ಗಮನ ಹರಿಸುವುದಾಗಿ ಹೇಳಿದರು.
Cristiano Ronaldo
ಕ್ರಿಸ್ಟಿಯಾನೊ ರೊನಾಲ್ಡೊ
Updated on

ಆರ್ಲಿಂಗ್ಟನ್: ಇಲ್ಲಿನ ಡಲ್ಲಾಸ್ ಕ್ರೀಡಾಂಗಣದಲ್ಲಿ ನಾಳೆ ಸ್ಪೇನ್ ಮತ್ತು ಪೋರ್ಚುಗಲ್ ನಡುವಣ 16ನೇ ಸುತ್ತಿನ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪೋರ್ಚುಗಲ್‌ನ ಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ಬಾಂಬ್ ಹಾಕಿದ್ದಾರೆ. 2026 ರ ಫಿಫಾ ವಿಶ್ವಕಪ್ ತಮ್ಮ ಕೊನೆಯ ವಿಶ್ವಕಪ್ ಎಂದು ದೃಢಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಂದಿನ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೊನಾಲ್ಡೊ, ಇದೇ ನನ್ನ ಕೊನೆಯ ವಿಶ್ವಕಪ್ ಎಂದು ಘೋಷಿಸಿದರು. 41 ವರ್ಷದ ರೊನಾಲ್ಡೊ, ಪ್ರಸ್ತುತ ತಮ್ಮ ಆರನೇ ವಿಶ್ವಕಪ್ ಆಡುತ್ತಿದ್ದಾರೆ. ಇದರಲ್ಲಿ ಅವರು ಮೂರು ಗೋಲುಗಳನ್ನು ಗಳಿಸಿದ್ದಾರೆ. ಇದರಲ್ಲಿ ನಾಕೌಟ್ ಹಂತದಲ್ಲಿ ಅವರ ಮೊದಲ ಗೋಲು ಸೇರಿದೆ. ಒಟ್ಟಾರೆಯಾಗಿ ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ 11 ವಿಶ್ವಕಪ್ ಗೋಲುಗಳನ್ನು ಗಳಿಸಿದ್ದಾರೆ.

"ನಾನು ಸಾಧ್ಯವಾದಷ್ಟು ಆನಂದಿಸಲು ಬಯಸುತ್ತೇನೆ, ಏಕೆಂದರೆ ಇದು ನನ್ನ ಕೊನೆಯ ವಿಶ್ವಕಪ್ ಆಗಿರುತ್ತದೆ, ಹೌದು. ಆದರೆ ನಾಳೆ ವಿಶ್ವಕಪ್‌ನಲ್ಲಿ ನನ್ನ ಕೊನೆಯ ಪಂದ್ಯವಾಗುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ಪೋರ್ಚುಗಲ್ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಮೂರು ಗೋಲುಗಳನ್ನು ಗಳಿಸಿದ್ದಾರೆ. ನಿವೃತ್ತಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೊನಾಲ್ಡ್, ರಾಷ್ಟ್ರೀಯ ತಂಡಕ್ಕೆ ಸಹಾಯ ಮಾಡುವತ್ತ ಮಾತ್ರ ಗಮನ ಹರಿಸುವುದಾಗಿ ಹೇಳಿದರು.

ನಾನು ಯಾವಾಗಲೂ ರಾಷ್ಟ್ರೀಯ ತಂಡಕ್ಕೆ ನೆರವಾಗಲು ಬದ್ಧನಾಗಿರುತ್ತೇನೆ. ನಾನು ಆಡುತ್ತಿರಲಿ ಅಥವಾ ಇಲ್ಲದಿರಲಿ, ನನ್ನದು ಯಾವಾಗಲೂ ಪ್ರಮುಖ ಪಾತ್ರವಿರುತ್ತದೆ" ಎಂದು ಅವರು ಹೇಳಿದರು. ನಾನು ಯಾವಾಗ ನಿವೃತ್ತಿಯಾಗಬೇಕೆಂದು ನಿರ್ಧರಿಸುತ್ತೇನೋ ಆಗಲೇ ಆ ಕೆಲಸ ಮಾಡುತ್ತೇನೆ, ನೀವು ಬಯಸಿದಾಗ ಅಲ್ಲ. ಆ ಪ್ರಶ್ನೆಯನ್ನು ಪದೇ ಪದೇ ಕೇಳುವುದು ಸಮಯ ವ್ಯರ್ಥ ಮಾಡುವ ಕೆಲಸ. ಆದರೆ ನಾನು ಅದರತ್ತ ಗಮನ ಸೆಳೆಯಲು ಬಯಸುವುದಿಲ್ಲ. ನಾಳೆಯ ಪಂದ್ಯವೇ ಅತ್ಯಂತ ಮುಖ್ಯವಾದ ವಿಷಯ," ಎಂದು ಅವರು ಹೇಳಿದರು.

Cristiano Ronaldo
FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಇದು ತಮ್ಮ ಕೊನೆಯ ವಿಶ್ವಕಪ್ ಎಂದು ಒಪ್ಪಿಕೊಂಡಿದ್ದರೂ, ಪ್ರಶಸ್ತಿಯನ್ನು ಗೆಲ್ಲುವ ಮಹತ್ವಾಕಾಂಕ್ಷೆಯೊಂದಿಗೆ ಪೋರ್ಚುಗಲ್ ತಂಡವು ಇಲ್ಲಿಗೆ ಬಂದಿದೆ ಎಂಬುದನ್ನು ರೊನಾಲ್ಡೊ ಸ್ಪಷ್ಟಪಡಿಸಿದರು. ನಾವು ವಿಶ್ವಕಪ್ ಗೆಲ್ಲಬಹುದು ಎಂಬ ನಂಬಿಕೆ ಇಲ್ಲದಿದ್ದರೆ, ಇಲ್ಲಿಗೆ ಬರುತ್ತಿರಲಿಲ್ಲ. ಇದು ಒಂದು ಸುಂದರ ಅನುಭವವಾಗಿದೆ. ನಾವು ಪ್ರತಿ ಪಂದ್ಯದಲ್ಲೂ ಸುಧಾರಣೆ ಕಂಡುಕೊಂಡಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com