ಡೈಲಾಗ್ ಬೇಡ, ಆಡೋದ್ ಕಲಿ: ಭಾರತಕ್ಕೆ ಮಣ್ಣು ಮುಕ್ಕಿಸುತ್ತೇವೆ ಎಂದಿದ್ದ ಇರಾನ್‌ನ ಶಾಡ್ಲೌಯಿಗೆ ಸುನಿಲ್ ತಿರುಗೇಟು, Video

ನಮ್ಮ ಮುಂದೆ ಬಾಯಿ ಮಾತಿನ ಡೈಲಾಗ್ ಎಲ್ಲ ನಡೆಯಲ್ಲ. ಮಾತು ಕಡಿಮೆ ಮಾಡು ಇದು ಭಾರತ ಎಂದು ಸಹ್ನೆ ಮೂಲಕ ಭಾರತೀಯ ಪುರುಷರ ಕಬಡ್ಡಿ ತಂಡದ ನಾಯಕ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
Mohammad Reza Shadloui, Sunil Kumar
ಮೊಹಮ್ಮದ್ ರೆಜಾ ಶಾಡ್ಲೌಯಿ, ಸುನಿಲ್ ಕುಮಾರ್
Updated on: 

ನವದೆಹಲಿ: ಭಾರತೀಯ ಪುರುಷರ ಕಬಡ್ಡಿ ತಂಡವು 2026 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದೆ. ಭಾರತ 40-34 ರ ಫೈನಲ್‌ನಲ್ಲಿ ಇರಾನ್ ವಿರುದ್ಧ ಗೆದ್ದಿತು. ನಿರೀಕ್ಷೆಯಂತೆ, ಎರಡೂ ತಂಡಗಳ ನಡುವೆ ನಿಕಟ ಪೈಪೋಟಿ ನಡೆಯಿತು. ಮೊದಲಾರ್ಧದಲ್ಲಿ ಇರಾನ್ 18-17 ಮುನ್ನಡೆ ಸಾಧಿಸಿತ್ತು. ನಂತರ ಟೀಮ್ ಇಂಡಿಯಾ ದ್ವಿತೀಯಾರ್ಧದಲ್ಲಿ ಬಲವಾದ ಪುನರಾಗಮನ ಮಾಡಿ ಚಿನ್ನದ ಪದಕ ಗೆದ್ದಿತು.

ಇನ್ನು ಫೈನಲ್ ಪಂದ್ಯಕ್ಕೂ ಮುನ್ನ ಇರಾನ್ ಕಬಡ್ಡಿ ಆಟಗಾರ ಮೊಹಮ್ಮದ್ ರೆಜಾ ಶಾಡ್ಲೌಯಿ ಸಂದರ್ಶನವೊಂದರಲ್ಲಿ ನಮ್ಮ ಭಾರತವನ್ನು ಸೋಲಿಸಿ ಈ ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆಲ್ಲುತ್ತೇವೆ ಎಂದು ಸವಾಲು ಹಾಕಿದ್ದನು. ಇದಕ್ಕೆ ಕಬ್ಬಡಿ ತಂಡದ ನಾಯಕ ಸುನಿಲ್ ಕುಮಾರ್ ಅಂಕಣದಲ್ಲೇ ಎದುರಾಳಿ ಶಾಡ್ಲುಗೆ ತಿರುಗೇಟು ನೀಡಿದರು. ನಮ್ಮ ಮುಂದೆ ಬಾಯಿ ಮಾತಿನ ಡೈಲಾಗ್ ಎಲ್ಲ ನಡೆಯಲ್ಲ. ಮಾತು ಕಡಿಮೆ ಮಾಡು ಇದು ಭಾರತ ಎಂದು ಸಹ್ನೆ ಮೂಲಕ ತಿರುಗೇಟು ನೀಡಿದ್ದಾರೆ.

Mohammad Reza Shadloui, Sunil Kumar
Asian Games: ಇರಾನ್ ನ್ನು ಮಣಿಸಿ ಚಿನ್ನ ಮುಡಿಗೇರಿಸಿಕೊಂಡ ಭಾರತೀಯ ಪುರುಷರ ಕಬಡ್ಡಿ ತಂಡ

ಭಾರತ ತಂಡದ ನಾಯಕ ಸುನಿಲ್ ಕುಮಾರ್

ಸುನಿಲ್ ಕುಮಾರ್ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಪುರುಷರ ಕಬಡ್ಡಿ ತಂಡದ ನಾಯಕರಾಗಿದ್ದಾರೆ. 29 ವರ್ಷದ ಸುನಿಲ್ ಕುಮಾರ್ ಹರಿಯಾಣದ ಸೋನಿಪತ್ ಮೂಲದವರು. 2022ರ ಏಷ್ಯನ್ ಗೇಮ್ಸ್‌ನಲ್ಲಿ ತಂಡದ ಭಾಗವಾಗಿದ್ದರು. ಅವರು ಮುಖ್ಯವಾಗಿ ಡಿಫೆಂಡರ್ ಆಗಿ ಆಡುತ್ತಾರೆ. ಸುನಿಲ್ ಈಶಾನ್ಯ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರ ಕಚೇರಿಯಲ್ಲಿ ಜೂನಿಯರ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಾರೆ.

ಸುನಿಲ್ ಪ್ರೊ ಕಬಡ್ಡಿ ಲೀಗ್‌ನಲ್ಲಿ ಯು ಮುಂಬಾ ಪರ ಆಡುತ್ತಾರೆ ಮತ್ತು ತಂಡದ ನಾಯಕರೂ ಆಗಿದ್ದಾರೆ. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಸುನಿಲ್ ಮೂರನೇ ಅತ್ಯಂತ ಯಶಸ್ವಿ ಡಿಫೆಂಡರ್ ಆಗಿದ್ದಾರೆ. ಅವರು 179 ಪಂದ್ಯಗಳಲ್ಲಿ 442 ಟ್ಯಾಕಲ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಅವರು 35 ಸೂಪರ್ ಟ್ಯಾಕಲ್‌ಗಳನ್ನು ಮಾಡಿದ್ದಾರೆ ಮತ್ತು 27 ಪಂದ್ಯಗಳಲ್ಲಿ ಹೈ 5 ಅನ್ನು ಸಹ ಗಳಿಸಿದ್ದಾರೆ. 2015 ಮತ್ತು 2016 ರಲ್ಲಿ ಜೂನಿಯರ್ ನ್ಯಾಷನಲ್ಸ್ ಗೆದ್ದ ನಂತರ, ಸುನಿಲ್ ಅವರನ್ನು ಪಿಕೆಎಲ್ ಸೀಸನ್ 4 ಗಾಗಿ ಪಾಟ್ನಾ ಪೈರೇಟ್ಸ್ ಆಯ್ಕೆ ಮಾಡಿತು. ನಂತರ ಅವರು ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ತೆರಳಿದರು. ಅವರ ನಾಯಕತ್ವದಲ್ಲಿ, ಜೈಪುರ ಫ್ರಾಂಚೈಸ್ 2022 ರಲ್ಲಿ ಚಾಂಪಿಯನ್ ಆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com