ಗಾಂಧಿಯವರ ಕೋಣೆಯಲ್ಲಿ
ಮೂರು ಕೋತಿ ಇದ್ದವು
ಕೋತಿ ಗೊಂಬೆ ಅಂದವಿರಲು
ಅವರ ಪ್ರೀತಿ ಗೆದ್ದವು...
ಮೊದಲ ಕೋತಿ ಕಣ್ಣುಮುಚ್ಚಿ
ಮಾಡುತಿಹುದು ಯೋಚನೆ
ಕೆಡುಕಿನತ್ತ ನೋಡಬೇಡ
ಎಂಬುದದರ ಸೂಚನೆ..
ಮಧ್ಯ ಕೋತಿ ಕಿವಿಯ ಮುಚ್ಚಿ
ಮಾಡುತಿಹುದು ಸಾಧನೆ
ಕೆಡುಕು ಮಾತು ಕೇಳಬೇಡ
ಎಂಬುದದರ ಬೋಧನೆ..
ಕೊನೆಯ ಕೋತಿ ಬಾಯಿ ಮುಚ್ಚಿ
ಮೌನ ವ್ರತವ ಸಾರಿದೆ
ಕೆಡುಕು ಮಾತು ಆಡಬೇಡ
ಎಂಬ ನೀತಿ ತೋರಿದೆ..
ಮೂರು ಕೋತಿ ತೋರಿದಂಥ
ಮೂರು ನೀತಿ ತಿಳಿಯಿರಿ
ನೀತಿಯಂತೆ ನಡೆದುಕೊಂಡು
ಬಾಳಿನಲ್ಲಿ ನಲಿಯಿರಿ.
-ಎಂ.ಎಂ. ಸಂಗಣ್ಣವರ