
ನವದೆಹಲಿ: ಇಸಿಸ್ ಸಂಘಟನೆಗೆ ಸೇರಿದ @ShamiWitness ಟ್ವಿಟರ್ ಖಾತೆಯ ನಿರ್ವಾಹಕ ಶಂಕಿತ ಉಗ್ರ ಮೆಹ್ದಿ ಬಂಧನದ ನಂತರ ಇಸಿಸ್ ಸಂಘಟನೆಯನ್ನೇ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
ಮಂಗಳವಾರ ಸಂಸತ್‌ನಲ್ಲಿ ಮಾತನಾಡಿದ ಗೃಹ ಸಚಿವ ರಾಜ್‌ನಾಥ್ ಸಿಂಗ್, ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರ ಸಂಘಟನೆಗಳಿಗೆ ಇಲ್ಲಿ ಕಡಿವಾಣ ಹಾಕಬೇಕಾಗಿದೆ ಎಂದಿದ್ದಾರೆ.
ಇನ್ನಿತರ ರಾಷ್ಟ್ರಗಳ ಉಗ್ರ ಸಂಘಟನೆಗಳ ಬಗ್ಗೆ ನಾವು ನಿಗಾ ವಹಿಸಿದ್ದೇವೆ ಎಂದು ಹೇಳಿದ ಸಿಂಗ್ ಇದಕ್ಕೆ ಮುನ್ನುಡಿಯಾಗಿ ನಾವು ಈ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಿದ್ದೇವೆ ಎಂದಿದ್ದಾರೆ.
ಇಂಥಾ ಕೃತ್ಯಗಳಲ್ಲಿ ಹಾಗೂ ಇಂಥಾ ಸಂಘಟನೆಗಳಲ್ಲಿ ಭಾಗಿಯಾಗಿರುವ ಭಾರತೀಯರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟೇ ಇದೆ. ಆದರೆ ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಶಂಕಿತರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸುಲಭವಾಗುತ್ತದೆ ಎಂದು ಸಿಂಗ್ ಮಾತನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
Advertisement