ಬೆಂಗಳೂರಿನ ಮತ್ತೊಂದು ಜೀವಂತ ಹೃದಯ ಚೆನ್ನೈಗೆ ರವಾನೆ

ಹೃಯದ ಸ್ಥಳಾಂತರಕ್ಕೆ ಉಭಯ ರಾಜ್ಯಗಳು ಸಂಪೂರ್ಣ ತಯಾರಿ...
ಚೆನ್ನೈಗೆ ತೆರಳಿದ ಮಗುವಿನ ಹೃದಯ
ಚೆನ್ನೈಗೆ ತೆರಳಿದ ಮಗುವಿನ ಹೃದಯ

ಬೆಂಗಳೂರು: 2ನೇ ಬಾರಿಗೆ ಬೆಂಗಳೂರಿನಿಂದ ಚೆನ್ನೈಗೆ ಹೃದಯ ರವಾನೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಯಿತು. ನಗರದ ಮಣಿಪಾಲ ಆಸ್ಪತ್ರೆಯಲ್ಲಿ 8 ತಿಂಗಳ ಮಗುವೊಂದು ಮೆದುಳು ನಿಷ್ಕ್ರಿಯಗೊಂಡಿತು. ಚೆನ್ನೈನಲ್ಲಿ ಎರಡೂವರೆ ವರ್ಷದ ಮಗುವಿಗೆ ಹೃದಯ ದಾನ ಮಾಡಲು ಮುಂದಾಗಿದ್ದು, ಹೃಯದ ಸ್ಥಳಾಂತರಕ್ಕೆ ಉಭಯ ರಾಜ್ಯಗಳು ಸಂಪೂರ್ಣ ತಯಾರಿಗೊಂಡಿತು.

ಮಡಿದ ವ್ಯಕ್ತಿಯ ಹೃದಯದ ಅವಧಿ 6 ಗಂಟೆಗಳು ಮಾತ್ರ ಜೀವಂತವಾಗಿರುತ್ತದೆ. ಅಷ್ಟರಲ್ಲಿ ಹೃದಯವನ್ನು ಮತ್ತೊಬ್ಬ ವ್ಯಕ್ತಿಗೆ ಕಸಿಮಾಡಬಹುದು. ಬೆಂಗಳೂರಿನಿಂದ ಚೆನ್ನೈಗೆ ಮಗುವಿನ ಹೃದಯ ಸ್ಥಳಾಂತರಿಸಲು ನಗರದ ಸಂಚಾರ ದೊಡ್ಡ ಸವಾಲಾಗಿದ್ದು, ಸುಗಮ ಹಾಗೂ ಶೀಘ್ರ ಸಂಚಾರಕ್ಕೆ ಸರ್ಕಾರ ಸಾಥ್ ನೀಡಿತು.

ಎಚ್‌ಎಲ್‌ಎ ವಿಮಾನ ನಿಲ್ದಾಣದ ಮೂಲಕ ಹೃದಯ ರವಾನೆ ಮಾಡಲು ನಿರ್ಧರಿಸಲಾಗಿತ್ತು. ಮಣಿಪಾಲ ಆಸ್ಪತ್ರೆಯಿಂದ ಎಚ್‌ಎಎಲ್ ಏರ್‌ಪೋರ್ಟ್‌ವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬೆಂಗಳೂರು ಪೂರ್ವ ವಿಭಾಗದ ಸಂಚಾರಿ ಡಿಸಿಪಿ ಎಂಎನ್‌ಆರ್‌ಬಿ ಪ್ರಸಾದ್ ನೇತೃತ್ವದ ತಂಡ ಈ ಮಾರ್ಗದ ರಸ್ತೆಯಲ್ಲಿ ಜೀರೋ ಟ್ರಾಫಿಕ್ ಕೈಗೊಂಡಿತು.

ಈ ಮೂಲಕ ಯಾವುದೇ ತೊಡಕುಗಳಿಲ್ಲದೆ ಅತೀ ಶೀಘ್ರದಲ್ಲಿ ಮಣಿಪಾಲದಿಂದ ಎಚ್‌ಎಎಲ್ ವಿಮಾನ ನಿಲ್ದಾಣದಕ್ಕೆ ಮಗುವಿನ ಹೃದಯದೊಂದಿಗೆ ವೈದ್ಯರ ತಂಡ ತಲುಪಿತು.

ಚೆನ್ನೈನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ವಿಮಾನ ನಿಲ್ದಾಣದಿಂದ ಸುಲಲಿತಾ ಸಂಚಾರಕ್ಕೆ ಚೆನ್ನೈ ಸಂಚಾರಿ ಇಲಾಖೆ ಅನುಮಾಡಿಕೊಟ್ಟಿದೆ.

ಇದೀಗ 8 ತಿಂಗಳ ಮಗುವಿನ ಹೃದಯವನ್ನು, ಎರಡೂವರೆ ವರ್ಷದ ಮಗುವಿಗೆ ಶಸ್ತ್ರ ಚಿಕಿತ್ಸೆ ಮೂಲಕ ಕಸಿ ಮಾಡಲು ಚೆನ್ನೈ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com