ರಮೇಶ್ ಚೆನ್ನಿತ್ತಲ (ಸಂಗ್ರಹ ಚಿತ್ರ )
ರಮೇಶ್ ಚೆನ್ನಿತ್ತಲ (ಸಂಗ್ರಹ ಚಿತ್ರ )

ಮತಾಂತರ ವಿವಾದ: ತನಿಖೆಗೆ ಕೇರಳ ಸರ್ಕಾರ ಆದೇಶ

ಭಾನುವಾರ ಕೇರಳದ ಆಲಪ್ಪುಳ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದ ೩೦ ಮಂದಿ ಹಿಂದೂ ಧರ್ಮಕ್ಕೆ ...

ತಿರುವನಂತಪುರಂ: ಭಾನುವಾರ ಕೇರಳದ ಆಲಪ್ಪುಳ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ  ಸೇರಿದ ೩೦ ಮಂದಿ  ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಹಿರಿಯ ಪೊಲೀಸ್ ಅಧಿಕಾರಿಗೆ ಆದೇಶಿಸಿದ್ದಾರೆ.

ಆಲ್ಲಪ್ಪುಳ ಜಿಲ್ಲೆಯಲ್ಲಿ ಎಂಟು ಕ್ರೈಸ್ತ ಕುಟುಂಬಗಳು ಸೇರಿದಂತೆ ಒಟ್ಟು 30 ಜನರನ್ನು ವಿಶ್ವ ಹಿಂದೂ ಪರಿಷತ್ ಸಂಘಟನೆ (ವಿಹಿಂಪ) ಮತಾಂತರ ಮಾಡಿತ್ತು. ಅದೇ ವೇಳೆ ಕೊಲ್ಲಂನಲ್ಲಿ 5 ಜನರನ್ನು ಮತಾಂತರ ಮಾಡಲಾಗಿತ್ತು.

ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಸಚಿವ ಚೆನ್ನಿತ್ತಲ ಹೆಚ್ಚುವರಿ ಪೊಲೀಸ್ ನಿರ್ದೇಶಕ ಎ. ಹೇಮಚಂದ್ರನ್ ಅವರಿಗೆ ಆದೇಶಿಸಲಾಗಿದೆ.

ಆದಾಗ್ಯೂ, ಭಾನುವಾರ ಹಿಂದೂ ಧರ್ಮಕ್ಕೆ ಮತಾಂತರಗೊಂಡವರು ತಮ್ಮ ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದಾರೆ. ಇದರಲ್ಲಿ ನಮ್ಮ ಸಂಘಟನೆಯ ಕೈವಾಡವಿಲ್ಲ ಎಂದು ವಿಹಿಂಪ ಹೇಳಿಕೆ ನೀಡಿದೆ.


Related Stories

No stories found.

Advertisement

X
Kannada Prabha
www.kannadaprabha.com