"ಅಲ್ಲಾಹು ಅಕ್ಬರ್" ಎಂದು ಫ್ರಾನ್ಸ್ ನಲ್ಲಿ ಪಾದಚಾರಿಗಳೆಡೆಗೆ ವಾಹನ ನುಗ್ಗಿಸಿದ ಮನುಷ್ಯ

ಅಲ್ಲಾಹು ಅಕ್ಬರ್" (ದೇವರು ದೊಡ್ಡವನು) ಎಂದು ಜೋರಾಗಿ ಕೂಗುತ್ತಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ಯಾರಿಸ್: "ಅಲ್ಲಾಹು ಅಕ್ಬರ್" (ದೇವರು ದೊಡ್ಡವನು) ಎಂದು ಜೋರಾಗಿ ಕೂಗುತ್ತಾ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿ, ಜನರ ಮೇಲೆ ಹತ್ತಿಸಿದ ಘಟನೆ ಪೂರ್ವ ಫ್ರಾನ್ಸ್ ಪ್ರಾಂತ್ಯದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ೧೧ ಜನ ಪಾದಚಾರಿಗಳು ಗಾಯಗೊಂಡಿದ್ದಾರೆ. "ಅಲ್ಲಾಹು ಅಕ್ಬರ್" ಎಂದು ಕೂಗುತ್ತ ಜನರ ಮೇಲೆ ಚೂರಿಯಿಂದ ದಾಳಿ ಮಾಡಿದ್ದ ಒಬ್ಬನ ಮೇಲೆ ಪೋಲಿಸರು ಗುಂಡು ಹಾರಿಸಿ ಕೊಂದ ಘಟನೆಯ ಒಂದು ದಿನದ ನಂತರ ಈ ಘಟನೆ ಜರುಗಿದೆ.

ಡಿಜೊ ನಗರದಲ್ಲಿ ನಡೆದ ಈ ಕಾರ್ ದಾಳಿಯಲ್ಲಿ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ವಾಹನ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

೧೯೭೪ ರಲ್ಲಿ ಜನಿಸಿದ್ದ ಈ ಚಾಲಕ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು, ಮನೋವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com