

ನವದೆಹಲಿ: ದೆಹಲಿಯಲ್ಲಿ ಬಿಜೆಪಿಗೆ ನಾಯಕತ್ವದ ಹಾಗೂ ಕಾರ್ಯಸೂಚಿಯ ಕೊರತೆ ಇದೆ ಎಂದಿರುವ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್, ಬಿಜೆಪಿಯ "ಓಡಿಹೋದ ಮುಖ್ಯಮಂತ್ರಿ" ಅಪಪ್ರಚಾರವನ್ನು ಜನ ತಿರಸ್ಕರಿಸುತ್ತಾರೆ ಎಂದಿದ್ದಾರೆ.
"ದೆಹಲಿಯಲ್ಲಿ ಬಿಜೆಪಿ ನಶಿಸುತ್ತಿದ್ದೆ. ಯಾವುದೇ ಕಾರ್ಯಸೂಚಿಯಿಲ್ಲ. ನಾಯಕತ್ವವಿಲ್ಲ, ದಿಕ್ಕು ದೆಸೆ ಇಲ್ಲ. ಓಡಿಹೋದವನು' ಅಪಪ್ರಚಾರವನ್ನು ಜನ ತಿರಸ್ಕರಿಸುತ್ತಾರೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ ಮತ್ತು ಜಮ್ಮು ಕಾಶ್ಮೀರದಲ್ಲಿ ಕೇಸರಿ ಪಕ್ಷ ತನ್ನ ನಿರೀಕ್ಷೆಯ ಸಾಮರ್ಥ್ಯ ತೋರಿಲ್ಲ. ದೆಹಲಿಯಲ್ಲೂ ಕೂಡ ಈ ಪಕ್ಷದ ನೆಲೆ ಕುಸಿಯುತ್ತಿದೆ ಎಂದಿದ್ದಾರೆ.
ಖಾಸಗಿ ವಾಹಿನಿಯೊಂದರ ಅಭಿಪ್ರಾಯ ಸಂಗ್ರಹದ ವರದಿಯ ಪ್ರಸ್ತಾಪ ಮಾಡಿದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ನೆಲೆ ವಿಸ್ತರಿಸಿಕೊಳ್ಳುತ್ತಿದೆ. ಬಿಜೆಪಿ ಪಕ್ಷಕ್ಕಿಂತ ತುಂಬಾ ಮುಂದಿದೆ ಎಂದಿದ್ದಾರೆ.
ಆ ಅಭಿಪ್ರಾಯ ಸಂಗ್ರಹದ ವರದಿ ಹೀಗಿದೆ.
ಎಎಪಿ - ೪೮%
ಬಿಜೆಪಿ - ೪೦%
ಕಾಂಗ್ರೆಸ್ - ೭.೫%