ಸೆಂಟ್ರಲ್ ಮಾಲ್ ಗೆ ಹುಸಿ ಬಾಂಬ್ ಕರೆ

ಎಂ.ಜಿ ರಸ್ತೆ ಮೆಯೋಹಾಲ್ ಸಮೀಪದ ಸೆಂಟ್ರಲ್ ಮಾಲ್ಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದ...
ಸೆಂಟ್ರಲ್ ಮಾಲ್ ಗೆ ಹುಸಿ ಬಾಂಬ್ ಕರೆ

ಬೆಂಗಳೂರು: ಎಂ.ಜಿ ರಸ್ತೆ ಮೆಯೋಹಾಲ್ ಸಮೀಪದ ಸೆಂಟ್ರಲ್ ಮಾಲ್ಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸೆಂಟ್ರಲ್ ಮಾಲ್ ಬೆಳಗ್ಗೆ ಓಪನ್ ಆಗುತ್ತಲೆ ಶಾಪಿಂಗ್ಗೆ ಸಾರ್ವಜನಿಕರು ಆಗಮಿಸುತ್ತಿದ್ದರು. 11 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿ 100ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಸೆಂಟ್ರಲ್ ಮಾಲ್ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಿ ಫೋನ್ ಕಟ್ ಮಾಡಿದ.

ಕೂಡಲೇ ಹೈ ಅಲರ್ಟ್ ಫೋಷಿಸಲಾಯಿತು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಬಾಂಬ್ ಪತ್ತೆ ದಳ ಹೀಗೆ ಎಳ್ಲ ತಂಡಗಳನ್ನು ಮಾಲ್ಗೆ ಕಳುಹಿಸಿ ಸುಮಾರು 1 ತಾಸಿಗೂ ಹೆಚ್ಚು ಕಾಲ ತಪಾಸಣೆ ನಡೆಸಲಾಯಿತು. ಆದರೆ, ಎಲ್ಲಿಯೂ ಬಾಂಬ್ ಕಂಡು ಬಾರದ ಕಾರಣ ಇದು ಹುಸಿ ಕರೆ ಎನ್ನುವುದು ಗೊತ್ತಾಯಿತು. ಇದೇ ವೇಳೆ ಪೊಲೀಸರು ಸ್ಥಳಕ್ಕೆ ಧಾವಿಸುವ ಮುಂಚೆಯೇ ಮಾಲ್ನ ಸಿಬ್ಬಂದಿ ಬೆಂಕಿ ನಂದಿಸುವ ಅಣುಕು ಕಾರ್ಯಾಚಣೆ ನಡೆಸುತ್ತಿದ್ದರು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಇದೇ ವೇಳೆ ಬೆಳ್ಳಂದೂರು, ಜೆಪಿನಗರ ಹಾಗೂ ಜಯನಗರದಲ್ಲೂ ಸೆಂಟ್ರಲ್ ಮಾಲ್ಗಳಿವೆ. ಕರೆ ಮಾಡಿದ ವ್ಯಕ್ತಿ ಇದೇ ಮಾಲ್ಗೆ ಬಾಂಬ್ ಇಡಲಾಗಿದೆ ಎಂದು ಹೇಳದ ಕಾರಣ ಮುಂಜಾಗೃತ ಕ್ರಮವಾಗಿ ಮೂರು ಮಾಲ್ಗಳಲ್ಲೂ ತಪಾಸಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com