ಬರ್ಲಿನ್ ಗೋಡೆ ಪತನವಾದ 25 ನೇ ವಾರ್ಷಿಕ ದಿನಾಚರಣೆಯ ವಿಡಿಯೊ ಡೂಡಲನ ಆಕರ್ಷಕ ವಿನ್ಯಾಸ
ಪ್ರಧಾನ ಸುದ್ದಿ
ಬರ್ಲಿನ್ ವಾಲ್ ಪತನ ನೆನಪಿಸಿದ ಗೂಗಲ್ ಡೂಡಲ್
ಜರ್ಮನಿ ಏಕೀಕರಣದ ಪ್ರತೀಕವಾಗಿರುವ ಬರ್ಲಿನ್ ವಾಲ್ ಪತನ ವಾರ್ಷಿಕೋತ್ಸವವನ್ನು ಗೂಗಲ್ ಡೂಡಲ್ ನೆನಪಿಸುವ ಮೂಲಕ ಜರ್ಮನ್ನರ ಗಮನ ಸೆಳೆದಿದೆ.
ನವದೆಹಲಿ: ಜರ್ಮನಿ ಏಕೀಕರಣದ ಪ್ರತೀಕವಾಗಿರುವ ಬರ್ಲಿನ್ ವಾಲ್ ಪತನ ವಾರ್ಷಿಕೋತ್ಸವವನ್ನು ಗೂಗಲ್ ಡೂಡಲ್ ನೆನಪಿಸುವ ಮೂಲಕ ಜರ್ಮನ್ನರ ಗಮನ ಸೆಳೆದಿದೆ.
ಜನಪ್ರಿಯ ಸಮಾಜಿಕ ಶೋಧ ತಾಣ ಗೂಗಲ್ ಪ್ರತಿ ನಿತ್ಯ ತನ್ನ ಭಿನ್ನ ವಿಭಿನ್ನ ಮುಖಪುಟಗಳನ್ನು ವಿನ್ಯಾಸ ಮಾಡಿಕೊಳ್ಳುತ್ತಿದ್ದು, ಇಂದು ಬರ್ಲಿನ್ ಗೋಡೆ ಪತನ ವಾರ್ಷಿಕೋತ್ಸದ ದಿನವನ್ನು ತನ್ನ ಮುಖಪುಟದಲ್ಲಿ ನೆನಪಿಸುವ ಕಾರ್ಯ ಮಾಡಿದೆ. ವಿಶ್ವದ ಮಹತ್ವದ ವಿದ್ಯಮಾನಗಳಲ್ಲಿ ಒಂದಾಗಿರುವ ಮತ್ತು ಜರ್ಮನಿ ಏಕೀಕರಣದ ಸಾಕ್ಷಿಯಾಗಿರುವ ಬರ್ಲಿನ್‌ಗೋಡೆ ಪತನವನ್ನು ತನ್ನ ಗೂಗಲ್-ಡೂಡಲ್ ನಲ್ಲಿ ಬಿತ್ತರಿಸುವ ಮೂಲಕ ಜರ್ಮನ್ ಪ್ರಜೆಗಳಿಗೆ ಶುಭಾಷಯಕೋರಿದೆ.
2ನೇ ಮಹಾಯುದ್ಧದ ನಂತರ ಹರಿದು ಹಂಚಿಹೋಗಿದ್ದ ಜರ್ಮನಿ ದೇಶ ಒಗ್ಗೂಡಲು 1880 ನವೆಂಬರ್ 9ರಂದು ನಡೆದ ಬರ್ಲಿನ್ ಗೋಡೆ ಪತನ ಕಾರಣವಾಗಿತ್ತು. ಸುಮಾರು 66 ಮೈಲು ಉದ್ಧದ ಗೋಡೆಯನ್ನು ಉರುಳಿಸುವ ಮೂಲಕ ಜರ್ಮನಿ ಏಕೀಕರಣ ಮಾಡಲಾಗಿತ್ತು.


