ಗುಲಾಮಗಿರಿಯಲ್ಲಿ ಸಿಲುಕಿದ ಭಾರತದ ೧೪ ದಶಲಕ್ಷ ಜನ

ಮಕ್ಕಳೂ ಸೇರಿದಂತೆ ಸುಮಾರು ೧೪.೩ ದಶಲಕ್ಷ ಜನ ಆಧುನಿಕ ಗುಲಾಮಗಿರಿಯಲ್ಲಿ ಸಿಲುಕಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಕ್ಕಳೂ ಸೇರಿದಂತೆ ಸುಮಾರು ೧೪.೩ ದಶಲಕ್ಷ ಜನ ಆಧುನಿಕ ಗುಲಾಮಗಿರಿಯಲ್ಲಿ ಸಿಲುಕಿದ್ದಾರೆ ಮತ್ತು ಈ ಸಮೀಕ್ಷೆ ಮಾಡಿರುವವರ ಪ್ರಕಾರ ಜಾಗತಿಕ ಗುಲಾಮಗಿರಿ ಪಟ್ಟಿ ೨೧೦೪ ರಲ್ಲಿ ಭಾರತಕ್ಕೆ ೫ ನೆ ಸ್ಥಾನ. ಪಾಕಿಸ್ತಾನ ಮತ್ತು ಆಫ್ರಿಕಾದ ಮೂರಿತಾನ್ಯಾ ದೇಶಗಳು ನಂತರದ ಸ್ಥಾನಗಳಲ್ಲಿವೆ.

ಗುಲಾಮಗಿರಿ ವಿರುದ್ಧ ಚಳವಳಿ ನಡೆಸಿರುವ ತಂಡ 'ವಾಕ್ ಫ್ರೀ' ನಡೆಸಿರುವ ಈ ಸಮೀಕ್ಷೆಯ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ ಶೇಕಡಾ ೧.೧೪೦೯ ಜನರು ಒಂದಲ್ಲ ಒಂದು ತರಹದ ಗುಲಾಮಗಿರಿಯಲ್ಲಿ ಸಿಲುಕಿದ್ದಾರೆ -- ಸಾಲದ ಸುಳಿಯಲ್ಲಿ ಸಿಲುಕಿ ಜೀತದಾಳುಗಳಾಗಿಯೋ, ದುಡ್ಡಿಗಾಗಿ ಲೈಂಗಿಕ ದುರ್ಬಳಕೆಯಾಗಿಯೊ, ಜೀತದ ಮದುವೆಗಳಿಂದಲೊ, ಮಕ್ಕಳ ಕಳ್ಳ ಸಾಗಾಣಿಕೆಯಿಂದಲೋ ಈ ಸ್ಥಿತಿ ಬಂದೊದಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಒಟ್ಟಾಗಿ ಭಾರತದಲ್ಲಿ ಅತಿ ಹೆಚ್ಚು ಗುಲಾಮರಿದ್ದರೆ, ಆಫ್ರಿಕಾದ ಮೂರಿತಾನ್ಯಾ ದೇಶದಲ್ಲಿ ಇರುವ ಜನಸಂಖ್ಯೆ ಮತ್ತು ಗುಲಾಮರಿಗೆ ಇರುವ ಅನುಪಾತ ೪% ಇದ್ದು ಮೊದಲ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾದ ಪರ್ತ್ ನ ವಾಕ್ ಫ್ರೀ ಫೌಂಡೇಶನ್ ನಡೆಸಿರುವ ಈ ಸಮೀಕ್ಷೆ ಹೇಳುವಂತೆ ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ವಿಶ್ವದ ೪೫% ಗುಲಾಮರನ್ನು ಹೊಂದಿದ್ದು, ೩೫.೮ ದಶಲಕ್ಷ ಜನ ಗುಲಾಮಗಿರಿಗೆ ಸಿಲುಕಿದ್ದಾರೆ.

ತಾನು ಸಮೀಕ್ಷೆ ಮಾಡಿನ ೧೬೭ ದೇಶಗಳಲ್ಲಿ ಗುಲಾಮಗಿರಿಯ ಸಾಕ್ಷಿಗಳು ಸಿಕ್ಕಿವೆ ಎಂದಿದೆ ವಾಕ್ ಫ್ರೀ.

ಆಫ್ರಿಕಾ ಮತ್ತು ಏಷಿಯಾದಲ್ಲಿ ಈ ಗುಲಾಮಗಿರಿ ಅತಿ ಹೆಚ್ಚಿದ್ದು ಇದರ ನಿರ್ಮೂಲನೆಯ ಸವಾಲುಗಳು ಕೂಡ ಅಗಾಧವಾಗಿವೆ ಆದರೆ ಯೂರೋಪಿನಲ್ಲಿ ಈ ಪದ್ಧತಿ ಕ್ಷೀಣವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com