ಬಿಹಾರಕ್ಕೆ ವಿಶೇಷ ಅನುದಾನ ನಮ್ಮ ಹಕ್ಕು: ನಿತೀಶ್ ಕುಮಾರ್

ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕಾಗಿ ನೀಡಿರುವ ೧.೨೫ ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕಾಗಿ ನೀಡಿರುವ ೧.೨೫ ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದರಲ್ಲಿ ಕೃಪೆಯೇನಿಲ್ಲ ಅದು ನಮ್ಮ ಹಕ್ಕು ಎಂದಿದ್ದಾರೆ.

"ಮೋದಿ ಘೋಷಿಸಿರುವ ವಿಶೇಷ ಪ್ಯಾಕೇಜ್ ನ ವಿವರಗಳು ನನಗಿನ್ನೂ ತಿಳಿಯಬೇಕಿದೆ ಆದರೆ ಈ ವಿಶೇಷ ಅನುದಾನ ಅವರ ಕೃಪೆಯೇನಲ್ಲ ನಮ್ಮ ಹಕ್ಕು ಎಂಬುದನ್ನು ಒತ್ತಿ ಹೇಳಬಯಸುತ್ತೇನೆ" ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

"ಬಿಹಾರದ ವಿಶೇಷ ಸ್ಥಾನಮಾನಕ್ಕಾಗಿ ನನ್ನ ಪ್ರಯತ್ನ ಪ್ರಾರ್ಥನೆಯಂತೆ ಎಂದಿರುವ ಅವರು, ಬಿಹಾರ ಮತ್ತು ಬಿಹಾರದ ಜನತೆಗಾಗಿ ನಾನು ಮತ್ತೊಬ್ಬರ ಮನೆಯ ಮುಂದೆ ಭಿಕ್ಷುಕನಂತೆ ಹೋಗಲೂ ನನಗೆ ಬೇಸರವಿಲ್ಲ" ಎಂದು ಅವರು ತಿಳಿಸಿದ್ದಾರೆ.

ಬಿಹಾರದ ಆರಾ ನಗರದಲ್ಲಿ ಮೋದಿ ಅವರು ನೀಡಿದ ಹೇಳಿಕೆಯನ್ನು ಅವರು ಪ್ರಶ್ನಿಸಿದ್ದಾರೆ. ಬಿಹಾರವನ್ನು ರೋಗಗ್ರಸ್ಥ ಎಂದು ಮೋದಿ ಕರೆದಿದ್ದರು. "ಅವರು (ನಿತೀಶ್ ಕುಮಾರ್) ಬಿಹಾರ ರೋಗಗ್ರಸ್ಥ ಅಲ್ಲ ಎನ್ನುತ್ತಾರೆ ಆದರೆ ಬೇಡಿಕೆಗಳನ್ನು ಇಡುತ್ತಾರೆ" ಎಂದು ಮೋದಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com