ದೇವರಾಜು ಅರಸು ಅವರ ಜನ್ಮದಿನೋತ್ಸವದಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್.ಎಲ್.ಜಲಪ್ಪ (90) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2015ರ ಡಿ.ದೇವರಾಜು ಅರಸು ಪ್ರಶಸ್
ದೇವರಾಜು ಅರಸು ಅವರ ಜನ್ಮದಿನೋತ್ಸವದಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್.ಎಲ್.ಜಲಪ್ಪ (90) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2015ರ ಡಿ.ದೇವರಾಜು ಅರಸು ಪ್ರಶಸ್

ಸಿಎಂಗೆ ಟಾಂಗ್ ಕೊಟ್ಟ ಕೈ ನಾಯಕರು!

ಅತ್ತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ, ಅರಸು ಆದರ್ಶದ ಮಾತನಾಡುತ್ತಿದ್ದರೆ, ಇತ್ತ ನಗರದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಬೆಂಗಳೂರು: ಅತ್ತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ, ಅರಸು ಆದರ್ಶದ ಮಾತನಾಡುತ್ತಿದ್ದರೆ, ಇತ್ತ ನಗರದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಸ್ವಪಕ್ಷೀಯ ಹಿರಿಯ ನಾಯಕರೇ ಮುಖ್ಯಮಂತ್ರಿ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಹಿರಿಯ ಮುಖಂಡ ಎಂ.ವಿ. ರಾಜಶೇಖರನ್ ಅವರು ದೇವರಾಜ ಅರಸುರನ್ನು ಹೊಗಳುತ್ತಲೇ, ಸಿದ್ದರಾಮಯ್ಯ ಅವರ ಹೆಸರು ಎತ್ತದೇ ವ್ಯಂಗ್ಯ ಮಾಡಿದ್ದಾರೆ.

ಅರಸು ಅವರ ಜತೆ ತಮ್ಮ ಒಡನಾಟ, ಕಲಿಕೆಯನ್ನು ಸ್ಮರಣೆ ಮಾಡಿದ್ದು ಮಾತ್ರವಲ್ಲ ಅವರ ವಿರುದ್ಧ ಸಿಡೆದೆದ್ದು ಮಂಡ್ಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದು, ನಂತರ ಇಂದಿರಾಗಾಂಧಿ ಅವರ ಜತೆ ಮಾತನಾಡಿ ಅರಸು ಅವರನ್ನು ಮರಳಿ ಕಾಂಗ್ರೆಸ್ ಗೆ ಕರೆ ತರಲು ಮಾಡಿದ ಪ್ರಯತ್ನ ಸೇರಿದಂತೆ ಹಲವಾರು ವಿಚಾರಗಳನ್ನು ಸ್ಮರಿಸಿಕೊಂಡ ಕೃಷ್ಣ 40 ನಿಮಿಷ ಮಾತನಾಡಿದರು.

ಕೃಷ್ಣ ಹೇಳಿದ್ದೇನು?: ರಾಜ್ಯಬಾರದ ಕೈಂಕರ್ಯ ದಲ್ಲಿರುವ ವ್ಯಕ್ತಿಗಳಿಗೆ ದೇವರಾಜ ಅರಸು ಅವರಲ್ಲಿದ್ದ ವಿಶಾಲ ಮನೋಭಾವ ಅಗತ್ಯ. ನನಗೆ ಈಗ 83 ವರ್ಷ. ಆದರೂ ಅರಸು ಅವರ ಆದರ್ಶಗಳನ್ನು ಇನ್ನೂ ಕಲಿಯಬೇಕು, ಅಳವಡಿಸಿಕೊಳ್ಳಬೇಕೆಂಬ ಹಂಬಲವಾಗುತ್ತದೆ. ಆದರೆ, ಕೆಲವರು ನನಗೆ ಎಲ್ಲ ಗೊತ್ತು. ನಾನು ಯಾರಿಂದಲೂ ಕಲಿಯಬೇಕಾದದ್ದಿಲ್ಲ. ನಾನು
ಮಾಡಿದ್ದೇ ಸರಿ ಎನ್ನುತ್ತಾರೆ. ಈ ಅಹಂಬ್ರಹ್ಮಾಸ್ಮಿ ಅಪ್ರೋಚ್ ರಾಜಕಾರಣದಲ್ಲಿ ಸರಿಯಾದುದ್ದಲ್ಲ. ದೇವರಾಜ ಅರಸು ಅವರು ಯಾವುದೇ ಒಂದು ಸಮುದಾಯ ಮತ್ತು ವ್ಯಕ್ತಿಗೆ
ಸೀಮಿತವಾದವರಲ್ಲ. ಕರ್ನಾಟಕದಲ್ಲಿ ಅರಸು ಸಮುದಾಯದ ಜನಸಂಖ್ಯೆ ಎಷ್ಟಿತ್ತು? ಅವರು ಯಾವುದೇ ಜಾತಿ ಹೆಗ್ಗಳಿಕೆಯಿಂದ ಮುಖ್ಯಮಂತ್ರಿಯಾಗಲಿಲ್ಲ. ತಮ್ಮ ಕಾಯಕದಿಂದ
ಮುಖ್ಯಮಂತ್ರಿಯಾದರು. ನಾನು ಯಾವುದೇ ವರ್ಗವನ್ನು ಪ್ರತಿನಿಧಿಸುವುದಿಲ್ಲ. ಆದರೆ, ಬಡವರ್ಗದವರು ಮಾತ್ರ ನನಗೆ ಹತ್ತಿರವಾಗಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದ ಅರಸು ಒಬ್ಬ ರಾಜಕೀಯ ತತ್ವಜ್ಞಾನಿ.

ಬಿ.ಕೆ.ಹರಿಪ್ರಸಾದ್: ಅರಸು ಎಲ್ಲ ವರ್ಗದವರನ್ನು ಬೆಳೆಸಿದರು. ವಿಶೇಷತಃ ಪಕ್ಷದ ಕಾರ್ಯಕರ್ತರ ಬಗ್ಗೆ ಅವರಿಗೆ ಕಾಳಜಿ ಇತ್ತು. ಅರಸು ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ. ಈಗಲೂ ಕೆಲವರು ಅಧಿಕಾರ ಸಿಗುವುದಕ್ಕೆ ಮೊದಲು ಸಾಮಾಜಿಕ ನ್ಯಾಯದ ಪರ ಮಾತನಾಡುತ್ತಾರೆ. ಆ ನಂತರ ಒಂದು ಜಾತಿ ವಿಶೇಷ, ವರ್ಗ ವಿಶೇಷಕ್ಕೆ ಸೀಮಿತರಾಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ: ಭೂಸುಧಾರಣೆ ಮತ್ತು ಹಾವನೂರು ಆಯೋಗ ರಚನೆ ಅರಸು ಅವರ ದೊಡ್ಡ ಕೊಡುಗೆ. ಮೇಲ್ವರ್ಗದವರ ವಿರೋಧ ಕಟ್ಟಿಕೊಳ್ಳದೇ ಅರಸು ಈ ಎರಡು ವಿಚಾರವನ್ನು ಜಾರಿಗೆ ತಂದರು.

ಎಂ.ವಿ.ರಾಜಶೇಖರನ್: ನನಗೆ ಈಗ 86 ವರ್ಷ. ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರನ್ನು ನೆನಪಿಸಿಕೊಂಡಾಗ ನನ್ನಲ್ಲಿ ಇನ್ನೂ ಉತ್ಸಾಹ ಮೂಡುತ್ತದೆ. ಆದರೆ ಅವರಿಬ್ಬರೂ ವಿಧೇಯ ಸ್ವಭಾವದದವರು. ಅಧಿಕಾರದಲ್ಲಿದ್ದಾಗ ನಾನೇ ಎಲ್ಲ ಎಂಬ ಅಹಮಿಕೆಗೆ ಅವಕಾಶ ನೀಡಬಾರದು.

Related Stories

No stories found.

Advertisement

X
Kannada Prabha
www.kannadaprabha.com