
ಧಾರವಾಡ: ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ಕೊಡಿ ಎಂದು ಮಠಾಧೀಶರು ಒತ್ತಾಯಿಸುತ್ತಿದ್ದು, ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರ್ಗಿ ಅವರ ಹತ್ಯೆ ಕುರಿತು ಸದ್ಯ ವಿಶೇಷ ಪೊಲೀಸ್ ತಂಡವನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದರೆ ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ನೀಡಲಾಗುವುದು ಎಂದರು. ಈ ಹಿಂದೆಯೇ ಅವರ ಮೇಲೆ ದಾಳಿ ನಡೆಯಬಹುದೆಂಬ ಕಾರಣದಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಸಾರ್ವಜನಿಕ ಜೀವನದಲ್ಲಿ ನಾನೆಂದು ಯಾರಿಗೂ ಅನ್ಯಾಯ ಮಾಡಿಲ್ಲ. ನನಗೇಕೆ ಬಂದೋಬಸ್ತ್ ಎಂದು ಒಂದು ವರ್ಷದ ಹಿಂದಷ್ಟೇ ಅವರ ಮನೆಗೆ ನೀಡಿದ ರಕ್ಷಣೆಯನ್ನು ಬೇಡ ಎಂದು ಅವರೇ ಹೇಳಿದ್ದರು. ಒಂದು ವೇಳೆ ಪೊಲೀಸ್ ರಕ್ಷಣೆ ಈಗಲೂ ಇದ್ದಿದ್ದರೆ ಅವರು ಉಳಿಯಬಹುದಿತ್ತೇನೋ ಎಂದರು.
ಹತ್ಯೆ ನಡೆದ ಕ್ಷಣಗಳು...
-ಸಮಯ: 8.36am
ಕಲಬುರ್ಗಿ ಮನೆ ಬಾಗಿಲು ತಟ್ಟಿದ ಅಪರಿಚಿತ
-ಸಮಯ: 8.37am
ಸದ್ದು ಕೇಳಿ ಬಾಗಿಲು ತೆರೆದ ಕಲಬುರ್ಗಿ ಪತ್ನಿ
-ಸಮಯ: 8.40am
ಮನೆಯೊಳಗಿಂದ ಬಂದ ಕಲಬುರ್ಗಿ ಹಣೆಗೆ ಗುಂಡು ಹಾರಿಸಿದ ದುಷ್ಕರ್ಮಿಗಳು
-ಸಮಯ: 8.41am
ಗುಂಡು ಹಾರಿಸಿದ ಬಳಿಕ ಬೈಕ್ ಏರಿ ಪರಾರಿಯಾದ ಅಪರಿಚಿತರು
Advertisement