ಚೆನ್ನೈ ಜಲ ಪ್ರಳಯ: ಸಂತ್ರಸ್ತರಿಗೆ ನೀವೂ ಸಹಾಯ ಮಾಡಬಹುದು

ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಊಟ ತಿಂಡಿ, ವಸತಿ ಅಥವಾ ಇನ್ಯಾವುದೇ ರೀತಿಯಲ್ಲಿ ಸಹಾಯ ಮಾಡಬೇಕೆಂದು ಬಯಸುತ್ತೀರಾ?...
ಚೆನ್ನೈ ಪ್ರವಾಹ
ಚೆನ್ನೈ ಪ್ರವಾಹ
ಚೆನ್ನೈ: ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಊಟ ತಿಂಡಿ, ವಸತಿ ಅಥವಾ ಇನ್ಯಾವುದೇ ರೀತಿಯಲ್ಲಿ ಸಹಾಯ ಮಾಡಬೇಕೆಂದು ಬಯಸುತ್ತೀರಾ? ಹಾಗಾದರೆ ಕೆಳಗೆ ಕೊಟ್ಟಿರುವ ಮಾಹಿತಿ ಓದಿ.
ವಸತಿ ಸೌಕರ್ಯ
ನೀವು ತಮಿಳ್ನಾಡು ನಿವಾಸಿಗಳಾಗಿದ್ದರೆ ಸಂತ್ರಸ್ತರಿಗೆ ವಸತಿ ಸೌಕರ್ಯಗಳನ್ನು ಒದಗಿಸಬಹುದು. ಜಲ ಪ್ರಳಯದಲ್ಲಿ ನಿರ್ಗತಿಕರಾದವರಿಗೆ ಉಳಿದು ಕೊಳ್ಳಲು ಸ್ಥಳ ನೀಡುತ್ತೇವೆ ಎಂದು ಹಲವಾರು ಮಂದಿ ಸಾಮಾಜಿಕ ತಾಣಗಳಲ್ಲಿ ಆಹ್ವಾನ ನೀಡಿದ್ದಾರೆ. ಒಂದು ವೇಳೆ ನೀವೂ ಸಂತ್ರಸ್ತರಿಗೆ ವಸತಿ ಸೌಕರ್ಯ ಒದಗಿಸಬೇಕು ಎಂದಾದರೆ ಇಲ್ಲಿರುವ ಅರ್ಜಿ ತುಂಬಿಸಿ ಸಹಾಯ ಮಾಡಿ.
ದೇಣಿಗೆ 
ಸಂತ್ರಸ್ತರಿಗೆ ದೇಣಿಗೆ ನೀಡಲು ಇಚ್ಛಿಸುತ್ತಿದ್ದರೆ ಎಐಎಸ್‌ಸಿ ಕ್ಯಾಂಪಸ್ ನ್ನು ಸಂಪರ್ಕಿಸಬಹುದು. ಎಮೆರ್ಜೆನ್ಸಿ ಫೌಂಡೇಷನ್ ಆಫ್ ಇಂಡಿಯಾ, ಭೂಮಿ ಮತ್ತು ಅನ್ನಾಲ್ ಹೋಮ್ ಫಾರ್ ಚಿಲ್ಡ್ರನ್ ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.  
ಸಂತ್ರಸ್ತರಿಗೆ  ಆಹಾರ ವಸ್ತುಗಳನ್ನು ನೀಡಬೇಕೆಂದು ಇಚ್ಛಿಸುತ್ತಿದ್ದರೆ ಚೆನ್ನೈ ರೈನ್ ರಿಲೀಫ್ 2015  ಫೇಸ್  ಬುಕ್ ಪೇಜ್ ಗೆ ಭೇಟಿ ನೀಡಿ. ನೀವು ಚೆನ್ನೈ ನಿವಾಸಿಗಳು ಅಲ್ಲದೇ ಇದ್ದರೆ, ದೇಣಿಗೆ ಮಾಡಲು ಇಷ್ಟವಿದ್ದರೆ Women of Worth ವೆಬ್‌ಸೈಟ್‌ಗೆ ಭೇಟಿ ನೀಡಿ. 
ಸ್ವಯಂ ಸೇವಕರಾಗಿ
ಚೆನ್ನೈ ನಿವಾಸಿಗಳಾಗಿದ್ದು ಸ್ವಯಂ ಸೇವಕರಾಗಿ ಸಂತ್ರಸ್ತರಿಗೆ ವಾಹನ, ಬಟ್ಟೆ ಅಥವಾ ಆಹಾರ ಪದಾರ್ಥಗಳನ್ನು ನೀಡಬಯಸುವಿರಾದರೆ Volunteer.org ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಿ. 
ಪ್ರಾಣಿಗಳಿಗೂ ರಕ್ಷಣೆ ನೀಡಿ
ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ನೆರವು ನೀಡಲು ಮರೆಯಬೇಡಿ. ಪ್ರಾಣಿಗಳಿಗೆ ಸಹಾಯ ಬಯಸುವಿರಾದರೆ ಈ ಮಾಹಿತಿ ನೋಡಿ.
ಪ್ರಧಾನ ಸಹಾಯವಾಣಿ 
ನೌಕಾದಳ ಸಹಾಯವಾಣಿ (ಚೆನ್ನೈ): +914425394240

ಭಾರತೀಯ ಸೇನೆ ಸಹಾಯವಾಣಿ : 9840295100

ತಮಿಳ್ನಾಡು ಸರ್ಕಾರದ ಸಹಾಯವಾಣಿ

ಚೆನ್ನೈ ನಗರ: 1070

ಜಿಲ್ಲೆ: 1077

ಚೆನ್ನೈ ಕಾರ್ಪೊರೇಷನ್: 1913 ಮತ್ತು 044-4567 4567
ದೋಣಿ ಸೌಕರ್ಯಕ್ಕೆ ಸಹಾಯವಾಣಿ:
Ola Boats: 7708068600
 Ola Cabs: 04428294121
NTL Boat helpline: 7708068600

ದೋಣಿ ಸೌಕರ್ಯಕ್ಕಾಗಿ ಸಂಪರ್ಕಿಸಿ
Royapuram: 9445190005
TVK Nagar: 9445190006
Ambattur: 9445190007
Anna Nagar: 9445190008

ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಿ
ಸಂತ್ರಸ್ತರಿಗೆ ಮಾಹಿತಿ ನೀಡಬೇಕು ಅಥವಾ ಸಹಾಯ ಮಾಡಬೇಕೆಂದಿದ್ದರೆ ಸಾಮಾಜಿಕ ತಾಣಗಳಾದ ಟ್ವಿಟರ್ , ಫೇಸ್ ಬುಕ್ ನಲ್ಲಿ ವಿಷಯಗಳನ್ನು ಪೋಸ್ಟ್ ಮಾಡುವುದಾದರೆ  #ChennaiRainsHelp ಹ್ಯಾಶ್ ಟ್ಯಾಗ್ ಬಳಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com