
ನವದೆಹಲಿ: ಡಾ. ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಮುಕ್ತ ಮನಸ್ಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
``ಸಿಬಿಐ ತನಿಖೆಗೆ ಕೊಡಬಾರದು ಎಂಬುದು ನಮ್ಮ ನಿಲುವಲ್ಲ. ಸಿಐಡಿ ತನಿಖೆ ನಡೆಯುತ್ತಿದೆ. ತನಿಖೆಯೂ ಪ್ರಗತಿಯಲ್ಲಿದೆ. ಹಾಗಾಗಿ ಸಿಬಿಐ ತನಿಖೆಗೆ ಕೋರಿಲ್ಲ'' ಎಂದು ಸ್ಪಷ್ಟಪಡಿಸಿದರು. ``ಈ ಪ್ರಕರಣದಲ್ಲಿ ಅಂತಾರಾಜ್ಯ ಹಂತಕರ ಕೈವಾಡ ಇದೆ. ಆ ಕೋನದಲ್ಲಿ ತನಿಖೆ ನಡೆಸುವ ಅಗತ್ಯ ಬಂದಾಗ ಸಿಬಿಐಗೆ ನೀಡಲು ನಮ್ಮ ತಕರಾರು ಇಲ್ಲ'' ಎಂದು ಸುದ್ದಿಗಾರರಿಗೆ ತಿಳಿಸಿದರು.
Advertisement