ಜಲ ಪ್ರಳಯ: ಸಹಜ ಸ್ಥಿತಿಯತ್ತ ಚೆನ್ನೈ ಜನಜೀವನ

ಕುಂಭದ್ರೋಣ ಮಳೆಯಿಂದ ಉಂಟಾದ ಜಲಪ್ರಳಯದಿಂದ್ದ ತತ್ತರಿಸಿದ್ದ ಚೆನ್ನೈ ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಜಲಪ್ರಳಯಕ್ಕೆ ತುತ್ತಾದ ಚೆನ್ನೈ ಮಹಾನಗರ (ಸಂಗ್ರಹ ಚಿತ್ರ)
ಜಲಪ್ರಳಯಕ್ಕೆ ತುತ್ತಾದ ಚೆನ್ನೈ ಮಹಾನಗರ (ಸಂಗ್ರಹ ಚಿತ್ರ)

ಚೆನ್ನೈ: ಕುಂಭದ್ರೋಣ ಮಳೆಯಿಂದ ಉಂಟಾದ ಜಲಪ್ರಳಯದಿಂದ್ದ ತತ್ತರಿಸಿದ್ದ ಚೆನ್ನೈ ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಸೋಮವಾರ ನಗರದಲ್ಲಿ ಕೆಲವು ಅಂಗಡಿ ಮುಂಗಟ್ಟಗಳು ಆರಂಭವಾಗಿದ್ದು, ಕೆಲವು ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ತಿವ್ರಗತಿಯಲ್ಲಿ ನಡೆಯುತ್ತಿದೆ.

ಕಳೆದ ಕೆಲವು ದಿನಗಳಿಂದ ಸಂಪೂರ್ಣ ಸ್ಥಿಗಿತಗೊಂಡಿದ್ದ ಆಟೋ ರಿಕ್ಷಾ ಸಂಚಾರ ಹಾಗೂ ಸಾರಿಗೆ ಪುನಾರಂಭಗೊಂಡಿವೆ. ಆದರೂ ಜನರ ಜೀವನಮಟ್ಟ ಇನ್ನೂ ಸಂಪೂರ್ಣ ಸುಧಾರಿಸಿಲ್ಲ. ಶಾಲಾ, ಕಾಲೇಜ್‌ಗಳು ಇನ್ನೂ ಆರಂಭವಾಗಿಲ್ಲ.

ರೈಲು ಸಂಚಾರ ಹಾಗೂ ವಿಮಾನ ಸಂಚಾರವೂ ಆರಂಭವಾಗಿದ್ದು, ಚೆನ್ನೈ ಮಹಾನಗರದಲ್ಲಿ ಸಂಪರ್ಕ ವ್ಯವಸ್ಥೆ ಸಹ ಸಹಜ ಸ್ಥಿತಿಗೆ ಮರಳುತ್ತಿದೆ.

ಚೆನ್ನೈಯಲ್ಲಿ ಮಳೆ ಸಂಪೂರ್ಣ ಸ್ಥಿಗಿತಗೊಂಡಿದೆ. ಆದರೆ ತಿರುವರೂರು, ನಾಗಪಟ್ಟಣಂ ಹಾಗೂ ಕೂಡ್ಡಲೊರ್ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಇನ್ನೂ ಮಳೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com