ಕೋಟ್ಯಾಂತರ ರು.ವಂಚನೆ: ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ವಿಶಾಲಾಕ್ಷಿ ಭಟ್ ಬಂಧನ

ಕೋಟ್ಯಾಂತರ ರುಪಾಯಿ ವಂಚಿಸಿ ಪರಾರಿಯಾಗಿದ್ದ ಬಿಟಿಎಂ ಲೇಔಟ್ ನ ಚ್‌ಡಿಎಫ್ ಸಿ ಬ್ಯಾಂಕ್ ನ ಜೀವವಿಮಾ ವಿಭಾಗದಲ್ಲಿ...
ವಿಶಾಲಾಕ್ಷಿ ಭಟ್
ವಿಶಾಲಾಕ್ಷಿ ಭಟ್

ಬೆಂಗಳೂರು: ಕೋಟ್ಯಾಂತರ ರುಪಾಯಿ ವಂಚಿಸಿ ಪರಾರಿಯಾಗಿದ್ದ ಬಿಟಿಎಂ ಲೇಔಟ್ ನ ಚ್‌ಡಿಎಫ್ ಸಿ ಬ್ಯಾಂಕ್ ನ ಜೀವವಿಮಾ ವಿಭಾಗದಲ್ಲಿ ವ್ಯವಸ್ಥಾಪಕಿಯಾಗಿದ್ದ ವಿಶಾಲಾಕ್ಷಿ ಭಟ್‌ ಅವರನ್ನು ಬೆಂಗಳೂರು ಪೊಲೀಸರು ಗುರುವಾರ  ಉತ್ತರ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು, ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ಆಶ್ರಮ ಸೇರಲು ಯತ್ನಿಸಿದ್ದ ವಿಶಾಲಾಕ್ಷಿಯನ್ನು ಇಂದು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದು, ಸಂಜೆ ವೇಳೆಗೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ.

ಜೀವ ವಿಮೆ ಹಾಗೂ ಷೇರು ಬಂಡಾವಳದ ಹೆಸರಿನಲ್ಲಿ ಚಿತ್ರನಟರು, ಪೊಲೀಸ್ ಅಧಿಕಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗ್ರಾಹಕರಿಗೆ 34 ಕೋಟಿ ರುಪಾಯಿಗೂ ಹೆಚ್ಚು ವಂಚನೆ ಮಾಡಿದ್ದಾರೆ. ಇನ್ನು ಕೆಲ ಉದ್ಯಮಿಗಳಿಗೆ ಜೀವವಿಮೆ ಹಾಗೂ ಷೇರು ಬಂಡಾವಳ ಹೂಡಿಕೆಯಲ್ಲಿ ಬ್ಯಾಂಕ್‌ ಗಳಿಂದ ಆರ್ಥಿಕ ನೆರವು ಕಲ್ಪಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಿಶಾಲಾಕ್ಷಿ ಪರಾರಿಯಾಗಿದ್ದರು.

ವಿಶಾಲಾಕ್ಷಿ ಪತ್ತೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು ಇಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈವರೆಗೆ ವಿಶಾಲಾಕ್ಷಿ ನಡೆಸಿರುವ ವಂಚನೆ ಕುರಿತ ತನಿಖೆಯಲ್ಲಿ ಸುಮಾರು 18 ಲಕ್ಷ ರೂ ಮೋಸವಾಗಿರುವುದು ಗೊತ್ತಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿವೆ.

ಕೆಲ ದಿನಗಳಿಂದ ಮಡಿವಾಳ ಬಳಿಯ ಕಂಪನಿ ಕಚೇರಿಗೆ ವಿಶಾಲಾಕ್ಷಿ ಬಾರದೆ ಗೈರು ಹಾಜರಾಗಿದ್ದರು. ಆಕೆ ಮೊಬೈಲ್‌ಗೆ ಕರೆ ಮಾಡಿದಾಗಲೂ ಗ್ರಾಹಕರಿಗೆ ಪ್ರತಿಕ್ರಿಯಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಕೆಲವರು, ಕಂಪನಿಗೆ ತೆರಳಿ ವಿಚಾರಿಸಿದಾಗ ವಂಚನೆಗೊಂಡಿರುವ ಸಂಗತಿ ಗೊತ್ತಾಗಿ ಕೂಡಲೇ ಈ ಬಗ್ಗೆ ಮಡಿವಾಳ ಠಾಣೆಯಲ್ಲಿ  ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com