
ನವದೆಹಲಿ: ಚುನಾವಣೆಗೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದ ಮಹಿಳೆಯರಿಗೆ ಸುರಕ್ಷತೆ, ಉಚಿತ ವೈ-ಫೈ ಮುಂತಾದ ವಚನಗಳಿಗೆ ರೂಪ ನಿಡಲು ಎಎಪಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಪಕ್ಷದ ಎಲ್ಲ ೭ ಲೋಕಸಭಾ ಸಂಸದರು ಜಂಟಿ ಹೇಳಿಕೆ ನಿಡಿದ್ದಾರೆ.
"ಎಎಪಿ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿದೆ ಆದರೆ ಅವರು ನೀಡಿದ್ದ ೭೦ ಚುನಾವಣಾ ಭರವಸೆಗಳನ್ನು ಪೂರೈಸಲು ವಿಫಲವಾಗಿದೆ" ಎಂದು ಬಿಜೆಪಿ ಸಂಸದ ಮತ್ತು ಕೆಂದ್ರ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಮುಂದಿನ ವರ್ಷ ಫೆಬ್ರವರಿ ೧೪ಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಒಂದು ವರ್ಷದ ಆಡಳಿತ ಪೂರೈಸಲಿದೆ.
ದೆಹಲಿ ಸಂಸದರಿಗೆ ಎಎಪಿ ಸರ್ಕಾರ ಸರಿಯಾದ ಮರ್ಯಾದೆ ನೀಡುತ್ತಿಲ್ಲ ಎಂದು ಕೂಡ ಚಾಂದಿನಿ ಚೌಕ್ ನಿಂದ ಆಯ್ಕೆಯಾಗಿರುವ ಸಂಸದ ಹರ್ಷವರ್ಧನ್ ದೂರಿದ್ದಾರೆ.
ಮಹಿಳಾ ಸುರಕ್ಷತೆಗಾಗಿ ಯಾವುದೇ ಒಳ್ಳೆಯ ಯೋಜನೆ ರೂಪಿಸಲು ಎಎಪಿ ಪಕ್ಷ ವಿಫಲವಾಗಿದೆ ಎಂದು ಮತ್ತೊಬ್ಬ ಸಂಸದೆ ಮೀನಾಕ್ಷಿ ಲೇಕಿ ದೂರಿದ್ದಾರೆ.
Advertisement