
ಮುಂಬೈ: ವಾಯು ಭದ್ರತೆಯಲ್ಲಿ ಭಾರಿ ಮುನ್ನಡೆ ಎನ್ನಲಾಗಿರುವ ಸಾಧನೆಯನ್ನು ಇಂದು ಭಾರತೀಯ ನೌಕಾದಳ ಭಾರಿ ದೂರ ನೆಲದಿಂದ ಆಕಾಶಕ್ಕೆ ಜಿಗಿಯಬಲ್ಲ ಬರಾಕ್-೮ ಕ್ಷಿಪಣಿಯನ್ನು ಐ ಎನ್ ಎಸ್ ಕೊಲ್ಕತ್ತದಿಂದ ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತ ಸಾಧಿಸಿದೆ.
ಅರಬ್ಬೀ ಸಮುದ್ರದಲ್ಲಿ ನಡೆದ ಈ ಪರೀಕ್ಷೆಯಲ್ಲಿ ನೆನ್ನೆ ಮತ್ತು ಇಂದು ಎರಡು ಕ್ಷಿಪಣಿಗಳನ್ನು ಪ್ರಯೋಗಾರ್ಥವಾಗಿ ಭಾರತೀಯ ನೌಕಾದಳ ಹಾರಿಸಿದೆ ಎಂದು ಭದ್ರತಾ ವಕ್ತಾರ ತಿಳಿಸಿದ್ದಾರೆ.
ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಬರಾಕ್-೮ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿವೆ. ಇದಕ್ಕೂ ಮೊದಲು ಇಸ್ರೇಲಿ ನೌಕೆಗಳಿಂದ ಪರೀಕ್ಷೆ ನಡೆಸಲಾಗಿತ್ತಾದರೂ ಭಾರತೀಯ ನೌಕೆಯಿಂದ ಇದೇ ಮೊದಲ ಬಾರಿಗೆ ಪರೀಕ್ಷೆ ನಡೆಸಲಾಗಿದೆ.
ಆಕಾಶ ಮಾರ್ಗವಾಗಿ ವಿಮಾನ, ಡ್ರೋನ್, ಹೆಲಿಕ್ಯಾಪ್ಟರ್ ಗಳಿಂದ ಉಂಟಾಗಬಹುದಾದ ದಾಳಿಗಳನ್ನು ತಡೆಯಲು ಬರಾಕ್-೮ ನಿರ್ಮಿಸಲಾಗಿದೆ.
Advertisement